ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡಿಂಗ್ – ಮನೆಯಲ್ಲೇ ಕುಳಿತು ಆ ಅದ್ಭುತ ಕ್ಷಣ ವೀಕ್ಷಿಸೋದು ಹೇಗೆ?

ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡಿಂಗ್ – ಮನೆಯಲ್ಲೇ ಕುಳಿತು ಆ ಅದ್ಭುತ ಕ್ಷಣ ವೀಕ್ಷಿಸೋದು ಹೇಗೆ?

ನ್ಯೂಸ್‌ ಆ್ಯರೋ : ಭಾರತದ ಕಡೆ ವಿಶ್ವವೇ ಕಾತುರದಿಂದ ಕಾಯುತ್ತಿರುವ ಕ್ಷಣಕ್ಕೆ ದಿನಗಣನೆ ಶುರುವಾಗಿದ್ದು, ಇದೇ 23ರಂದು ಸಂಜೆ 6ಕ್ಕೆ ಚಂದ್ರನ ಮೇಲೆ ಚಂದ್ರಯಾನ 3 ಲ್ಯಾಂಡ್‌ ಆಗುವ ಬಗ್ಗೆ ಇಸ್ರೋ ಹೇಳಿದೆ.

ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿರುವ ಪ್ರಕಾರ, ಈಗಾಗಲೇ ಚಂದ್ರಯಾನ-3ರ ಎರಡನೆಯ ಮತ್ತು ಕೊನೆಯ ಡಿ- ಬೂಸ್ಟಿಂಗ್ ಕಾರ್ಯ ಯಶಸ್ವಿಯಾಗಿದ್ದು, ಸೆನ್ಸಾರ್‌ಗಳು, ಆಂಟೆನಾಗಳು ಏನೇ ವೈಫಲ್ಯ ಕಂಡರೂ ಚಂದ್ರನ ನೆಲದಲ್ಲಿ ವಿಕ್ರಮ್‌ ಖಂಡಿತಾ ಲ್ಯಾಂಡಿಂಗ್‌ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಸ್ರೋ ಈ ಯೋಜನೆಗಾಗಿ ಐದು ವರ್ಷಗಳ ಕಾಲ ಹಗಲು-ರಾತ್ರಿ ಎನ್ನದೆ ಶ್ರಮ ಪಟ್ಟಿದೆ.

ಚಂದ್ರಯಾನ-3 ರ ಮೃದುವಾದ ಲ್ಯಾಂಡಿಂಗ್ ಒಂದು ಅವಿಸ್ಮರಣೀಯ ದಿನವಾಗಲಿದೆ. ಇದು ಕುತೂಹಲವನ್ನು ಇಮ್ಮಡಿಗೊಳಿಸುವುದು ಮಾತ್ರವಲ್ಲದೆ ನಮ್ಮ ಯುವಜನರ ಮನಸ್ಸಿನಲ್ಲಿ ಅನ್ವೇಷಣೆಯ ಉತ್ಸಾಹವನ್ನು ಹುಟ್ಟುಹಾಕುತ್ತದೆ ಎಂದರು.

ಯಾವೆಲ್ಲ ಮಾಧ್ಯಮಗಳಲ್ಲಿ ಈ ಕ್ಷಣವನ್ನು ಕಣ್ತುಂಬಿಕೊಳ್ಳಬಹುದು?

ಆಗಸ್ಟ್‌ 23 ರಂದು ವಿಕ್ರಮ್‌ ಲ್ಯಾಂಡರ್ ಸಾಫ್ಟ್‌ ಲ್ಯಾಂಡಿಂಗ್‌ ಮಾಡಬೇಕಿದೆ. ಅಮೆರಿಕದ ನಾಸಾ ಪಾಲಿಗೆ ‘ಹೂಸ್ಟನ್‌’ ಹೇಗೋ, ಇಸ್ರೋ ಪಾಲಿಗೆ ಬೆಂಗಳೂರು. ತನ್ನೆಲ್ಲಾ ನೌಕೆಗಳ ಟ್ರ್ಯಾಕಿಂಗ್‌, ಟೆಲಿಮೆಂಟ್ರಿ ಮತ್ತು ಕಮಾಂಡ್‌ ನೆಟ್‌ವರ್ಕ್‌ ನೋಡಿಕೊಳ್ಳವ ‘ಐಸ್ಟ್ರಾಕ್‌’ ಇರುವುದು ಬೆಂಗಳೂರಿನಲ್ಲಿ. ಇದೇ ಮಿಷನ್‌ ಕಂಟ್ರೋಲ್‌ ರೂಮ್‌ನಿಂದ ಇಡೀ ದೇಶದಲ್ಲಿ ಚಂದ್ರಯಾನ-3 ಸಾಫ್ಟ್‌ ಲ್ಯಾಂಡಿಂಗ್‌ ನೇರಪ್ರಸಾರವಾಗಲಿದೆ.

ಲ್ಯಾಂಡಿಂಗ್ ಆಗುವ ಅದ್ಭುತ ಕ್ಷಣಗಳನ್ನು ಇಸ್ರೋದ ಅಧಿಕೃತ ವೆಬ್‌ಸೈಟ್ ಮತ್ತು ಅದರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಯೂಟ್ಯೂಬ್, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಈವೆಂಟ್ ಸಮಯದಲ್ಲಿ ವೀಕ್ಷಕರು ಲೈವ್ ಕಾಮೆಂಟರಿ ಮತ್ತು ತಜ್ಞರ ವಿಶ್ಲೇಷಣೆಯನ್ನು ಸಹ ಪ್ರವೇಶಿಸಬಹುದು. ಲೈವ್ ಸ್ಟ್ರೀಮಿಂಗ್ ಸುಮಾರು 17:27 IST (5:27 PM) ಕ್ಕೆ ಪ್ರಾರಂಭವಾಗುತ್ತದೆ ಮತ್ತು ಲ್ಯಾಂಡಿಂಗ್ ಅನ್ನು ಸಂಜೆ 6:04 ಕ್ಕೆ ನಿಗದಿಪಡಿಸಲಾಗಿದ್ದು, ಈ ಅಭೂತಪೂರ್ವ ಕ್ಷಣವನ್ನು ಎಲ್ಲರೂ ತಮ್ಮ ಮೊಬೈಲ್‌ನಲ್ಲಿ ಹಾಗೂ ಟಿವಿಯಲ್ಲಿ ಕಣ್ತುಂಬಿಕೊಳ್ಳಬಹುದು.

ಇಂಡಿಯಾ ಟುಡೇ ಮತ್ತು ಆಜ್ ತಕ್ ಈವೆಂಟ್ ಅನ್ನು ನೇರ ಪ್ರಸಾರ ಮಾಡುತ್ತವೆ. ದೂರದರ್ಶನ ಈವೆಂಟ್‌ನ ನೇರ ಪ್ರಸಾರವನ್ನು ನೀಡುವ ಸಾಧ್ಯತೆಯಿದೆ. NASA TV ಅಪ್ಲಿಕೇಶನ್ ಮತ್ತು Space.com ಸಹ ಈವೆಂಟ್ ಅನ್ನು ಸ್ಟ್ರೀಮ್ ಮಾಡುತ್ತದೆ.

ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮೂಲಕ ಚಂದ್ರಯಾನ-3 ಸಾಫ್ಟ್‌ ಲ್ಯಾಂಡಿಂಗ್‌ ವೀಕ್ಷಣೆ ಮಾಡಬಹುದು. ಇದರ ನೇರಪ್ರಸಾರ ಆಗಸ್ಟ್‌ 23ರ ಸಂಜೆ 5.27ಕ್ಕೆ ಆರಂಭವಾಗಲಿದೆ.
ಇಸ್ರೋ ವೆಬ್‌ಸೈಟ್‌: isro.gov.in
ಇಸ್ರೋ ಯೂಟ್ಯೂಬ್‌: youtube.com/watch?v=DLA_64yz8Ss
ಇಸ್ರೋ ಫೇಸ್‌ಬುಕ್‌: Facebook https://facebook.com/ISRO
ಡಿಡಿ ನ್ಯಾಷನಲ್‌ ಟಿವಿ

ಅದಲ್ಲದೆ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಜಾಗೃತಿ ಮೂಡಿಸಲು ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ನ ನೇರ ಪ್ರಸಾರವನ್ನು ಆಯೋಜಿಸಲು ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ಇಸ್ರೋ ತಿಳಿಸಿದೆ.

Related post

ವಿಕ್ರಮ್ ಲ್ಯಾಂಡರ್ ಇಳಿದ ಚಂದ್ರನ ಜಾಗಕ್ಕೆ “ಶಿವಶಕ್ತಿ ಪಾಯಿಂಟ್” ಎಂದು ಹೊಸ ‌ಹೆಸರು ಇಟ್ಟ ಮೋದಿ – ಆ.23 ಇನ್ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನ : ಪ್ರಧಾನಿ ಘೋಷಣೆ

ವಿಕ್ರಮ್ ಲ್ಯಾಂಡರ್ ಇಳಿದ ಚಂದ್ರನ ಜಾಗಕ್ಕೆ “ಶಿವಶಕ್ತಿ ಪಾಯಿಂಟ್” ಎಂದು ಹೊಸ…

ನ್ಯೂಸ್ ಆ್ಯರೋ‌ : ಚಂದ್ರಯಾನ-3 (Chandrayaan-3) ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ದಿನದ ನೆನಪಿಗಾಗಿ ಆ.23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ಮೋದಿ (Narendra…

Leave a Reply

Your email address will not be published. Required fields are marked *