ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ 1ರಂದು ಅನುಷ್ಕಾ ಶರ್ಮಾ 36ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರೆ, ಕ್ರಿಕೆಟಿಗ, ಭಾರತ ತಂಡದ ಮಾಜಿ ನಾಯಕ, ಪತಿ ವಿರಾಟ್ ಕೊಹ್ಲಿ ಬರುವ ಡಿಸೆಂಬರ್​ನಲ್ಲಿ 36ನೇ ವರ್ಷಕ್ಕೆ ಕಾಲಿಡಲಿದ್ದಾರೆ.

ಈ ಜೋಡಿ ಸುಖಿ ದಾಂಪತ್ಯ ನಡೆಸುತ್ತಿದೆ. ಮದುವೆಯಾದ ಮೇಲೆ ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಅವರ ಜೊತೆಗೂಡಿ ವಿರುಷ್ಕಾ ಎಂದೇ ಫೇಮಸ್​ ಆಗಿದೆ. ವಿರುಷ್ಕಾ ಎಂದೇ ಖ್ಯಾತಿ ಪಡೆದಿರುವ ಈ ಜೋಡಿ ಅವರ ಅಪರೂಪದ ಜೋಡಿ 2017 ರ ಡಿಸೆಂಬರ್​ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಸಿನಿಮಾದ ಉತ್ತುಂಗದಲ್ಲಿರುವಾಗಲೇ ಮದುವೆಯಾಗುವ ಮನಸ್ಸು ಮಾಡಿದ್ದರು ಅನುಷ್ಕಾ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ವಿರಾಟ್​ ಕೊಹ್ಲಿ ಅವರ ಜೊತೆ ಇವರ ಮದುವೆಯಾಗಿದ್ದು, ಈ ರೊಮಾಂಟಿಕ್​ ಜೋಡಿಗೆ ಸದ್ಯ ಒಂದು ಹೆಣ್ಣು ಹಾಗೂ ಗಂಡು ಮಗು ಇದೆ.

ಆದರೀಗ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್​ ತನ್ನ ಮದುವೆಗೂ ಮುನ್ನ ಒಟ್ಟು 5 ಮಂದಿಯ ಜೊತೆ ಡೇಟಿಂಗ್​ ನಡೆಸಿದ್ದರು ಎಂಬ ಸುದ್ದಿ ವೈರಲ್ ಆಗುತ್ತಿದ್ದು, ಟೀಮ್​ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಮಾಜಿ ಲವರ್ಸ್ ಗಳು ಯಾರು ಎಂಬ ಮಾಹಿತಿ ಇಲ್ಲಿದೆ.

ಸಾರಾ ಜೇನ್ ಡಯಾಸ್‌
ಕೊಹ್ಲಿಯ ಹೆಸರು ಮೊದಲು ತಳುಕು ಹಾಕಿಕೊಂಡಿದ್ದು 2007ರಲ್ಲಿ. ಅದು ಕೂಡ ಮಿಸ್ ಇಂಡಿಯಾ ಸಾರಾ ಜೇನ್ ಡಯಾಸ್‌ ಅವರೊಂದಿಗೆ. 2008ರಲ್ಲಿ ಅಂಡರ್​-19 ವಿಶ್ವಕಪ್​ ವಿಜೇತ ಕ್ಯಾಪ್ಟನ್ ಆದರು. ಆ ಬಳಿಕ ಕೊಹ್ಲಿ ಮತ್ತು ಮಸ್ಕತ್ ಮೂಲದ ಸಾರಾ ನಡುವೆ ಸಂಬಂಧದ ಕುರಿತು ಊಹಾಪೋಹಗಳು ಹರಿದಾಡಿದ್ದವು. ಹಿಂದಿ – ತಮಿಳು ಚಿತ್ರಗಳಲ್ಲಿ ಸಾರಾ ಕೆಲಸ ಮಾಡುತ್ತಿದ್ದರು. ಮತ್ತೊಂದೆಡೆ ಕೊಹ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದರು. ಆ ನಂತರ ಬ್ಯುಸಿ ಶೆಡ್ಯೂಲ್‌ನಿಂದಾಗಿ ಇಬ್ಬರೂ ಬೇರೆಯಾದರು ಎಂದು ಹೇಳಲಾಗಿದೆ.

ತಮನ್ನಾ ಭಾಟಿಯಾ
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹೆಸರು ಕೊಹ್ಲಿಯೊಂದಿಗೆ ಕೇಳಿ ಬಂದಿತ್ತು. 2012ರಲ್ಲಿ ಮೊಬೈಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಇಬ್ಬರು ಡೇಟಿಂಗ್​ ಮಾಡ್ತಿದ್ದಾರೆ ಎಂದೇ ಸುದ್ದಿಯಾಗಿತ್ತು 7 ವರ್ಷಗಳ ಹಿಂದೆ ಈ ಕುರಿತು ಪ್ರತಿಕ್ರಿಯಿಸಿದ್ದ ತಮನ್ನಾ, ವಿರಾಟ್​ರನ್ನು ಎಂದೂ ಭೇಟಿಯಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇಬ್ಬರು ಸುತ್ತಾಡಿದ್ದರು ಎಂದೇ ಈಗಲೂ ಹೇಳಲಾಗುತ್ತಿದೆ.

ಸಂಜನಾ ಗಲ್ರಾನಿ
2011ರ ಐಪಿಎಲ್‌ನಲ್ಲಿ ಆರ್​ಸಿಬಿಗೆ ವಿಜಯ್ ಮಲ್ಯ ಮಾಲೀಕತ್ವವೇ ಆಗಿತ್ತು. ಈ ವೇಳೆ ಆರ್​ಸಿಬಿ ತಂಡಕ್ಕೆ ಚಿಯರ್​ ಮಾಡಲು ಮತ್ತು ಮಲ್ಯ ಪಾರ್ಟಿಗಳಿಗೆ ಬರುತ್ತಿದ್ದ ಕನ್ನಡದ ನಟಿ ಸಂಜನಾ ಗಲ್ರಾನಿ ಹೆಸರು ಸಹ ವಿರಾಟ್ ಜೊತೆ ಕೇಳಿ ಬಂದಿತ್ತು. ಅವರಿಬ್ಬರು ಡೇಟಿಂಗ್​ ಫೋಟೋಗಳು ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದವು. ಈ ಸೀಸನ್​ ಮುಗಿದ ಬಳಿಕ ಈ ಸುದ್ದಿಯೂ ಮಾಯವಾಯಿತು.

ಇಜಾಬೆಲ್ಲೆ ಲೈಟ್
ವಿರಾಟ್ ಕೊಹ್ಲಿ ಮತ್ತು ಬ್ರೆಜಿಲಿಯನ್ ನಟಿ ಇಜಾಬೆಲ್ಲೆ ಲೈಟ್ 2012-2014 ರವರೆಗೆ 2 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಬಾಲಿವುಡ್‌ನಲ್ಲಿ ಮೊದಲ ಚಿತ್ರ ಅಮೀರ್ ಖಾನ್ ಅವರ ‘ತಲಾಶ್ – ದಿ ಆನ್ಸರ್ ಲೈಸ್ ವಿಥಿನ್ (2012ರಲ್ಲಿ) ಚಿತ್ರದಲ್ಲಿ ಇಜಾಬೆಲ್ಲೆ ನಟಿಸಿದ್ದರು. ಈ ಕುರಿತು ಇಬ್ಬರು ತಮ್ಮ ಸಂಬಂಧವನ್ನು ನಿರಾಕರಿಸಿದರು. 2013ರಲ್ಲಿ ಡೇಟಿಂಗ್​ ಫೋಟೋಗಳು ವೈರಲ್​ ಆಗಿದ್ದವು. ಕೊನೆಗೆ ಕೊಹ್ಲಿ ಜೊತೆಗೆ ಬ್ರೇಕ್ಅಪ್ ನಂತರ ಇಜಾಬೆಲ್ಲೆ ಸಂದರ್ಶನವೊಂದರಲ್ಲಿ ಡೇಟಿಂಗ್​ ನಡೆಸುತ್ತಿದ್ದ ಬಗ್ಗೆ ಒಪ್ಪಿಕೊಂಡರು. 2 ವರ್ಷ ರಿಲೇಷನ್​ಶಿಪ್​​ನಲ್ಲಿದ್ದೆವು. ಕೊನೆಗೆ ಒಪ್ಪಿಗೆಯೊಂದಿಗೆ ಬ್ರೇಕ್​ಅಪ್​ ಆದೆವು ಎಂದಿದ್ದರು.

ಸಾಕ್ಷಿ ಅಗರ್​ವಾಲ್​
ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ ನಟಿ ಸಾಕ್ಷಿ ಅಗರ್​ವಾಲ್​ ಸಹ ವಿರಾಟ್ ಕೊಹ್ಲಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ಸಾಕ್ಷಿ ಕನ್ನಡ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ. ಆದರೆ ಇವರ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *