ಬೆಂಗಳೂರಿನಲ್ಲಿ ಯುಪಿಐ ಮೂಲಕ ಹಣ ಪಾವತಿಸಿದ ಜರ್ಮನ್ ಸಚಿವ – ವೈರಲ್ ಆಯ್ತು ವಿಡಿಯೋ

ಬೆಂಗಳೂರಿನಲ್ಲಿ ಯುಪಿಐ ಮೂಲಕ ಹಣ ಪಾವತಿಸಿದ ಜರ್ಮನ್ ಸಚಿವ – ವೈರಲ್ ಆಯ್ತು ವಿಡಿಯೋ

ನ್ಯೂಸ್ ಆ್ಯರೋ‌ : ಭಾರತ ಡಿಜಿಟಲ್ ವ್ಯವಸ್ಥೆಗೆ ತನ್ನನ್ನು ತಾನು ತೆರದುಕೊಳ್ಳುತ್ತಿದೆ. ಅದರಲ್ಲೂ ಯುಪಿಐ ಮೂಲಕ ಹಣ ಪಾವತಿಸುವ ವಿಧಾನ ಜನಪ್ರಿಯವಾಗಿದೆ. ದೇಶದ ಹಳ್ಳಿ, ಹಳ್ಳಿಯಲ್ಲೂ, ಮೂಲೆ ಮೂಲೆಯಲ್ಲೂ ಈ ಡಿಜಿಟಲ್ ಪೇಮೆಂಟ್ ವಿಧಾನ ಕಂಡು ಬರುತ್ತಿದೆ.

ಯುಪಿಐ ಮೂಲಕ ಹಣ ಪಾವತಿಸಿದ ಜರ್ಮನ್ ಸಚಿವ

ಬೆಂಗಳೂರಿನಲ್ಲಿ ನಡೆದ ಜಿ-20 ಸಭೆಗೆ ಆಗಮಿಸಿದ್ದ ಜರ್ಮನಿಯ ಡಿಜಿಟಲ್ ಮತ್ತು ಟ್ರಾನ್ಸ್ ಪೊರ್ಟ್ ಸಚಿವ ವೋಕರ್ ವಿಸ್ಸಿಂಗ್ ತರಕಾರಿ ಅಂಗಡಿಯೊಂದರಲ್ಲಿ ಮೊದಲ ಬಾರಿಗೆ ಯುಪಿಐ ಮೂಲಕ ಹಣ ಪಾವತಿಸಿ ಅಚ್ಚರಿ ಜೊತೆಗೆ ಶ್ಲಾಘನೆಯನ್ನೂ ವ್ಯಕ್ತಪಡಿಸಿದರು.

ವೀಡಿಯೋ ವೈರಲ್

ವಿಸ್ಸಿಂಗ್ ಯುಪಿಐ ಮೂಲಕ ಹಣ ಪಾವತಿಸುವ ಫೋಟೋ ಮತ್ತು ವೀಡಿಯೋ ವೈರಲ್ ಆಗಿದೆ. ಜರ್ಮನಿಯ ರಾಯಭಾರ ಕಚೇರಿ ಇದನ್ನು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದೆ. ಭಾರತದ ಯಶೋಗಾಥೆಗಳಲ್ಲಿ ಡಿಜಿಟಲ್ ಪಾವತಿಯೂ ಒಂದಾಗಿದೆ. ಯುಪಿಐ ಮೂಲಕ ಪ್ರತಿಯೊಬ್ಬರು ಕೆಲವೇ ಸೆಕೆಂಡ್ ಗಳಲ್ಲಿ ವಹಿವಾಟು ನಡೆಸಬಹುದು. ಡಿಜಿಟಲ್ ಮತ್ತು ಟ್ರಾನ್ಸ್ ಪೋರ್ಟ್ ಸಚಿವರು ಯುಪಿಐ ಮೂಲಕ ಖುದ್ದಾಗಿ ಹಣ ಪಾವತಿಸಿ ಅಚ್ಚರಿಪಟ್ಟರು ಎಂದು ಬರೆದುಕೊಂಡಿದೆ.

ಭಾರತದಲ್ಲಿ ಯುಪಿಐ ಯಶಸ್ವಿಯಾಗಿ ಜಾರಿಯಾಗಿದೆ. ಇತ್ತ ಶ್ರೀಲಂಕಾ, ಫ್ರಾನ್ಸ್, ಸಿಂಗಾಪುರ, ಯುಎಐ ಮುಂತಾದ ದೇಶಗಳು ಯುಪಿಐ ಬಳಕೆಗೆ ಭಾರತದ ಜೊತೆ ಒಪ್ಪಂದ ಮಾಡಿಕೊಂಡಿವೆ. ಇದರಿಂದ ಅನಿವಾಸಿ ಭಾರತೀಯರು ತಮ್ಮ ಊರಿಗೆ ಸುಲಭವಾಗಿ ಹಣ ಪಾವತಿಸಬಹುದಾಗಿದೆ.

ಇತ್ತೀಚೆಗೆ ಫ್ರಾನ್ಸ್ ಗೆ ಭೇಟಿ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿ, ಭಾರತದ ಯುಪಿಐ ಮತ್ತು ಇತರ ಡಿಜಿಟಲ್ ಫ್ಲಾಟ್ ಫಾರ್ಮ್‍ಗಳು ದೇಶದಲ್ಲಿ ದೊಡ್ಡ ಸಾಮಾಜಿಕ ಪರಿವರ್ತನೆ ತಂದಿವೆ ಮತ್ತು ಭಾರತ, ಫ್ರಾನ್ಸ್ ಇದೇ ಮಾರ್ಗದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಫ್ರಾನ್ಸ್ ಯುಪಿಐ ಬಳಸಲು ಒಪ್ಪಿಕೊಂಡಿದೆ ಎಂದಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *