ಐಷಾರಾಮಿ ಬಂಗಲೆಯಲ್ಲೇ ವಾಸ, ದುಬಾರಿ ಕಾರಿನಲ್ಲೇ ಓಡಾಟ! ಬಿಜೆಪಿ ಅಭ್ಯರ್ಥಿ, ಬಾಲಿವುಡ್ ನಟಿ ಕಂಗನಾ ಆಸ್ತಿ ಎಷ್ಟು ಕೋಟಿ ಗೊತ್ತಾ?

ಐಷಾರಾಮಿ ಬಂಗಲೆಯಲ್ಲೇ ವಾಸ, ದುಬಾರಿ ಕಾರಿನಲ್ಲೇ ಓಡಾಟ! ಬಿಜೆಪಿ ಅಭ್ಯರ್ಥಿ, ಬಾಲಿವುಡ್ ನಟಿ ಕಂಗನಾ ಆಸ್ತಿ ಎಷ್ಟು ಕೋಟಿ ಗೊತ್ತಾ?

ನ್ಯೂಸ್ ಆ್ಯರೋ : ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೂಡ ಬಿರುಸಿನಿಂದ ಸಾಗಿದೆ. ಈ‌ ಬಾರಿ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು 91.66 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ.

2021-22ರಲ್ಲಿ ತಮ್ಮ ವಾರ್ಷಿಕ ಆದಾಯ 12.30 ಕೋಟಿ ರೂ. ಎಂದು ಘೋಷಿಸಿರುವ ಕಂಗನಾ, 2022-23ರಲ್ಲಿ ಇದು 4.13 ಕೋಟಿ ರೂ.ಗೆ ಕುಸಿದಿದೆ ಎಂದು ತಿಳಿಸಿದ್ದಾರೆ.

ತಮಗೆ ಪತಿ, ಅವಲಂಬಿತರು ಯಾರು ಇಲ್ಲ ಎಂದೂ ಅವರು ತಮ್ಮ ಅಫಿಡವಿಟ್‌ನಲ್ಲಿ ಘೋಷಿಸಿದ್ದು,ತಮ್ಮ ಮೇಲೆ ಒಟ್ಟು 8 ಕ್ರಿಮಿನಲ್‌ ಕೇಸ್‌ಗಳಿವೆ ಎಂದಿದ್ದಾರೆ. ಇನ್ನು ತನ್ನ ವಿದ್ಯಾಭ್ಯಾಸ ದ್ವಿತೀಯ ಪಿಯುಸಿ ಎಂದಿದ್ದಾರೆ.

ಕಂಗನಾ ಬಳಿ 28.73 ಲಕ್ಷ ಕೋಟಿ ರೂ. ಚರಾಸ್ತಿ ಹಾಗೂ 62.93 ಲಕ್ಷ ಕೋಟಿ ರೂ. ಸ್ಥಿರಾಸ್ತಿ ಇರುವುದಾಗಿ ಅವರು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ವಿವರ ನೀಡಿದ್ದಾರೆ. 17.38 ಕೋಟಿ ರೂ. ಸಾಲವಿದೆ.

ತಮ್ಮ ಕೈಯಲ್ಲಿ 2 ಲಕ್ಷ ರೂ. ನಗದು ಇದ್ದು 8 ಬ್ಯಾಂಕ್‌ ಖಾತೆಗಳಲ್ಲಿ ಒಂದಿಷ್ಟು ಹಣ ಹೊಂದಿದ್ದಾರೆ. ಮಣಿಕರ್ಣಿಕಾ ಫಿಲ್ಮ್ಸ್‌ ಹಾಗೂ ಮಣಿಕರ್ಣಿಯಾ ಸ್ಪೇಸ್‌ ಎಲ್‌ಎಲ್‌ಪಿಯಲ್ಲಿ ಒಂದಿಷ್ಟು ಹಣ ಹೂಡಿಕೆ ಮಾಡಿದ್ದಾರೆ.

50 ಎಲ್‌ಐಸಿ ಪಾಲಿಸಿಗಳನ್ನು ಅವರು ಹೊಂದಿದ್ದು, ಇದರಲ್ಲಿ 49 ತಲಾ 10 ಲಕ್ಷ ರೂ.ನ ಹಾಗೂ 5 ಲಕ್ಷ ರೂ.ನ ಒಂದು ಪಾಲಿಸಿ ಸೇರಿದೆ. ವಿವಿಧ 11 ವ್ಯಕ್ತಿಗಳಿಗೆ ಕನಿಷ್ಠ 4 ಲಕ್ಷ ರೂ.ನಿಂದ 5.10 ಕೋಟಿ ರೂ.ವರೆಗೆ ಅವರು ಸಾಲವನ್ನೂ ನೀಡಿದ್ದಾರೆ.

ಸುಮಾರು 98 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರು, 58 ಲಕ್ಷ ರು. ಮೌಲ್ಯದ ಬೆನ್ಜ್‌ ಕಾರು ಹಾಗೂ ಬರೋಬ್ಬರಿ 3.91 ಕೋಟಿ ರೂ. ಮೌಲ್ಯದ ಮರ್ಸಿಡೆಸ್‌ ಬೆನ್ಜ್‌ ಮೇಬ್ಯಾಚ್‌ ಕಾರನ್ನೂ ಕಂಗನಾ ಹೊಂದಿದ್ದಾರೆ. ವೆಸ್ಪಾ ಸ್ಕೂಟರ್‌ ಕೂಡ ಅವರ ಬಳಿ ಇದೆ.

ಸುಮಾರು 5 ಕೋಟಿ ರೂ. ಮೌಲ್ಯ 6.70 ಕೆಜಿ ಚಿನ್ನ, 50 ಲಕ್ಷ ರೂ. ಮೌಲ್ಯದ 60 ಕೆಜಿ ಚಿನ್ನ ಹಾಗೂ 3 ಕೋಟಿ ರು. ಮೌಲ್ಯದ ವಜ್ರಗಳು,ಮುಂಬೈನ ಐಸಿಐಸಿಐ ಬ್ಯಾಂಕ್‌ನಲ್ಲಿ 5.11 ಕೋಟಿ ರೂ.ನ ಒಂದು ಸಾಲ ಹಾಗೂ 10.47 ಕೋಟಿ ರೂ.ನ ಇನ್ನೊಂದು ಸಾಲ ಹೊಂದಿದ್ದಾರೆ.

ಒಟ್ಟಾರೆ 17.38 ಕೋಟಿ ರೂ. ಸಾಲ ಅವರ ಮೇಲಿದೆ.ತಾವೊಬ್ಬ ನಟಿ, ನಿರ್ಮಾಪಕಿ ಹಾಗೂ ನಿರ್ದೇಶಕಿ ಎಂದಿರುವ ಕಂಗನಾ ರಣಾವತ್‌, ಸಂಭಾವನೆ, ಉದ್ಯಮದ ಆದಾಯ, ಬಾಡಿಗೆ ಹಾಗೂ ಬಡ್ಡಿ ಆದಾಯ ತಮ್ಮ ಆದಾಯದ ಮೂಲ ಎಂದು ಅಫಿಡಟವಿಟ್‌ನಲ್ಲಿ ತಿಳಿಸಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *