ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ ಎಡವಟ್ಟುಗಳು ಆಗಿರುತ್ತವೆ. ಕೆಲವೊಮ್ಮೆ ವೆಜ್ ಮಂಚೂರಿ ಅಂತ ಅಂದುಕೊಂಡು ಚಿಕನ್ ಮಂಚೂರಿ ತಿಂದ ಘಟನೆಗಳು ನಡೆದಿವೆ. ಅದರಲ್ಲೂ ಇಂತಹ ಎಡವಟ್ಟುಗಳು ಈ ಹೊರಗಡೆಯಿಂದ ಫುಡ್ ಅಗ್ರಿಗೆಟರ್ ಅಪ್ಲಿಕೇಷನ್ ಗಳ ಮೂಲಕ ಊಟವನ್ನು ಆರ್ಡರ್ ಮಾಡಿದಾಗ ಸ್ವಲ್ಪ ಜಾಸ್ತಿಯೇ ಆಗುತ್ತವೆ. ವೆಜ್ ಬಿರಿಯಾನಿ ಅಂತ ಹೇಳಿದರೆ, ಫುಡ್ ಡೆಲಿವರಿ ಬಾಯ್ ಮನೆಗೆ ಚಿಕನ್ ಬಿರಿಯಾನಿಯನ್ನು ತಲುಪಿಸಿರುತ್ತಾನೆ ಮತ್ತು ಇನ್ನೂ ಕೆಲವು ಘಟನೆಗಳಲ್ಲಿ ಬೇರೆ ಯಾರಿಗೂ ತಲುಪಿಸಬೇಕಾದ ಊಟ ಇನ್ನ್ಯಾರಿಗೊ ತಲುಪಿಸಿರುತ್ತಾರೆ.

ಇಂತಹ ಎಡವಟ್ಟುಗಳಾಗುವುದಕ್ಕೆ ಮುಖ್ಯ ಕಾರಣವೆಂದರೆ ಆರ್ಡರ್ ಅನ್ನು ಹೊಟೇಲ್ ನವರು ಚೆನ್ನಾಗಿ ಅರ್ಥ ಮಾಡಿಕೊಳ್ಳದೆ ಗಡಿಬಿಡಿಯಲ್ಲಿ ಪಾರ್ಸಲ್ ಮಾಡಿದಾಗ ಮತ್ತು ಡೆಲಿವರಿ ಬಾಯ್ ಸರಿಯಾಗಿ ಊಟವನ್ನು ತಲುಪಿಸದೇ ಇರುವುದರಿಂದ ಆಗುತ್ತವೆ. ಅರೇ ಈಗೇಕೆ ಇದೆಲ್ಲಾ ನಾವು ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸುತ್ತಿರಬೇಕು ಅಲ್ಲವೇ? ಇಲ್ಲಿ ನಡೆದ ಘಟನೆ ನೋಡಿ.

ಘಟನೆಯೊಂದರಲ್ಲಿ, ಟ್ವಿಟರ್ ಬಳಕೆದಾರರೊಬ್ಬರು ಪನೀರ್ ಬಿರಿಯಾನಿ ಆರ್ಡರ್ ಮಾಡಿದರೆ, ಅವರಿಗೆ ತಲುಪಿಸಿದ ಬಿರಿಯಾನಿಯಲ್ಲಿ ಚಿಕನ್ ಪೀಸ್ ಗಳಿರುವುದು ಕಂಡುಬಂದಿದೆ. ಈ ಕುರಿತು ತಮ್ಮ ಖಾತೆಯ ಪುಟದಲ್ಲಿ ಆ ದುರದೃಷ್ಟಕರ ಅನುಭವವನ್ನು ಹಂಚಿಕೊಂಡಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು,ಪಂಕಜ್ ಶುಕ್ಲಾ ಆನ್ಲೈನ್ ನಲ್ಲಿ ಪನ್ನೀರ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ, ಡೆಲಿವರಿ ಬಾಯ್ ಆ ಬಿರಿಯಾನಿಯನ್ನು ಮನೆಗೆ ತಲುಪಿಸಿದಾಗ ಅಲ್ಲೊಂದು ಅಚ್ಚರಿ ಕಾದಿತ್ತು.

ಅವರು ಆ ಬಿರಿಯಾನಿಯಲ್ಲಿ ಪನೀರ್ ಬದಲಿಗೆ ಚಿಕನ್ ತುಂಡುಗಳಿದ್ದವು. ಆರ್ಡರ್ ಇನ್ವಾಯ್ಸ್ ಮತ್ತು ಪನೀರ್ ಬಿರಿಯಾನಿ ಬಾಕ್ಸ್ ನಲ್ಲಿ ಮಾಂಸದ ತುಂಡು ಬಂದಿರೋದನ್ನು ಫೋಟೋ ಸಮೇತ ಪಂಕಜ್ ಶುಕ್ಲಾ ಅವರು ತಮ್ಮ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಮಹಾರಾಷ್ಟ್ರದ ಪುಣೆಯ ಕರ್ವೆ ನಗರದ ಪಿಕೆ ಬಿರಿಯಾನಿ ಹೌಸ್‌ನಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದೆ. ಆದರೆ ಇದರಲ್ಲಿ ಚಿಕನ್ ಪೀಸ್ ಸಿಕ್ಕಿದೆ. ನಾನು ಶುದ್ಧ ಸಸ್ಯಹಾರಿ ಆಗಿದ್ದೇನೆ. ನನಗೆ ಆ ಕೂಡಲೇ ರೀಫಂಡ್ ಸಿಕ್ಕಿದ್ದು, ಆದ್ರೆ ಇದು ಪಾಪವಾಗಿದೆ. ನಾನೊಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದು, ಇದು ನನ್ನ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಬರೆದುಕೊಂಡಿದದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *