ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ.

ಹೌದು ಜನಾಂದೋಲನದಲ್ಲಿ ತೊಡಗಿಸಿಕೊಂಡ ಕಾರ್ಯಕರ್ತರಾದ ಜಿ ಸುಧಾ ಮತ್ತು ಮೋಹನ್ ಕುಮಾರ್ ಜೆ ಅವರು 25 ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರೀತಿಸಿ, ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ಭಾನುವಾರ ಚಿಕ್ಕಮಗಳೂರು ಜಿಲ್ಲೆಯ ಅಮೃತೇಶ್ವರ ದೇವಸ್ಥಾನದಲ್ಲಿ ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ಪದ್ಧತಿಯಂತೆ ಸರಳವಾಗಿ ಇವರಿಬ್ಬರು ಮದುವೆ ಆಗಿದ್ದು,ಸ್ಟ್ರೆಚರ್‌ನಲ್ಲಿ ದೇವಸ್ಥಾನದ ಆವರಣಕ್ಕೆ ತಮ್ಮ ವೃದ್ಧ ತಾಯಂದಿರಾದ ಜಯ ಬಾಯಿ ಹಾಗೂ ಶಾಂತಮ್ಮ ಅವರನ್ನು ಕರೆ ತಂದ ಇಷ್ಟಾರ್ಥಗಳನ್ನು ಈ ದಂಪತಿಗಳಿಬ್ಬರು ನೆರವೇರಿಸಿದ್ದಾರೆ.

ಈ ಇಬ್ಬರ ವಯಸ್ಸು 54 ಆಗಿದ್ದು, ಮೋಹನ್ ಒಬ್ಬ ಬ್ರಾಹ್ಮಣ ಮತ್ತು ಸುಧಾ ಕ್ಷತ್ರಿಯ ಮರಾಠ ಸಮುದಾಯದವರು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿಯವರಾದ ಮೋಹನ್ ಅವರು 1995 ರಲ್ಲಿ ಅಜ್ಜಂಪುರದಲ್ಲಿ ನಡೆದ ಸಂಪೂರ್ಣ ಸಾಕ್ಷರತಾ ಆಂದೋಲನದ ಸ್ವಯಂಸೇವಕರ ಕಾರ್ಯಾಗಾರದಲ್ಲಿ ಸುಧಾ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ಸುಧಾ ಅವರ ನಾಯಕತ್ವದ ಗುಣಗಳಿಂದ ಅವರು ಪ್ರಭಾವಿತರಾಗಿದ್ದರು. ಆಗ ಆಕೆಗೆ ಪ್ರಪೋಸ್ ಮಾಡಿದರೂ ಆಕೆ ಆತನ ಜೀವನ ಸಂಗಾತಿಯಾಗಲು ಒಪ್ಪಿದ್ದು 2002ರಲ್ಲಿ. ಮೋಹನ್ ಅವರ ಕುಟುಂಬ ಮತ್ತು ಸಮಾಜದ ಒಂದು ವರ್ಗದ ಪ್ರತಿರೋಧ ಹಾಗೂ ಜನಪರ ಚಳುವಳಿಗಳಲ್ಲಿ ಅವರ ಸಕ್ರಿಯ ಪಾಲ್ಗೊಳ್ಳಬೇಕಾಗಿದ್ದು ಸೇರಿದಂತೆ ಹಲವಾರು ಕಾರಣಗಳಿಂದಾಗಿ ವಿವಾಹವನ್ನು ಮುಂದೂಡಲಾಯಿತು. ಆದರೆ, ಅವರ ವಯಸ್ಸಾದ ತಾಯಂದಿರು ಶೀಘ್ರದಲ್ಲೇ ಮದುವೆಯಾಗಬೇಕೆಂದು ಒತ್ತಡ ಹಾಕುತ್ತಿದ್ದರು.

ಸುಧಾ ಮತ್ತು ಮೋಹನ್ ಅವರ ವಿವಾಹಕ್ಕೆ ಜಾತಿಗ್ರಸ್ಥ ಮನಸುಗಳ ವಿರೋಧ, ‘ಬ್ರಾಹ್ಮಣನೊಬ್ಬ ಕ್ರತ್ರಿಯ ಕುಲದ’ ಹುಡುಗಿಯನ್ನು ವಿವಾಹ ಆಗುವುದಕ್ಕೆ ಜಾತಿವಾದಿಗಳಿಂದ ಅಡೆತಡೆ, ಸೇರಿದಂತೆ ಹಲವಾರು ಅಂಶಗಳು ಇವರ ವಿವಾಗಕ್ಕೆ ಅಡ್ಡಿಯಾಗಿತ್ತು. ಅದರಲ್ಲೂ ಜನಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಇದ್ದರಿಂದ ಅವರ ವಿವಾಹ ಮುಂದೂಡುತ್ತಲೇ ಬರುತ್ತಿತ್ತು. ಮತ್ತೊಂದೆಡೆ ಇವರಿಬ್ಬರ ವಯಸ್ಸಾದ ತಾಯಂದಿರು ಶೀಘ್ರದಲ್ಲಿಯೇ ಮದುವೆಯಾಗಬೇಕೆಂದು ಒತ್ತಾಯಿಸುತ್ತಿದ್ದರು. ಹೀಗಾಗಿ ಎಲ್ಲ ಅಡೆತಡೆಗಳನ್ನು ಮೀರಿ ಜಾತಿಯೆಂಬ ಮುಳ್ಳನ್ನು ಎಡಗಾಲಲ್ಲಿ ಒದ್ದು ಕುವೆಂಪು ಆಶಯದಂತೆ ಹಾರ ಬದಲಿಸಿಕೊಂಡಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *