26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ನೆರೆಮನೆಯಲ್ಲಿ ಪತ್ತೆ…!

26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ನೆರೆಮನೆಯಲ್ಲಿ ಪತ್ತೆ…!

ನ್ಯೂಸ್ ಆರೋ: ಕಾಣೆಯಾದ ವ್ಯಕ್ತಿ ನೆರೆಮನೆಯಲ್ಲಿ ಬಂಧನದಲ್ಲಿ ಇರುವುದು ಬೆಳಕಿಗೆ ಬಂದಿದೆ ಎಂದು ಅಲ್ಜೀರಿಯಾದ ನ್ಯಾಯಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಹೌದು, 26 ವರ್ಷಗಳಿಂದ ನಾಪತ್ತೆಯಾಗಿದ್ದ ಅಲ್ಜೀರಿಯಾದ ವ್ಯಕ್ತಿಯೊಬ್ಬ, ತನ್ನ ಮನೆಯಿಂದ ಕೆಲವೇ ನಿಮಿಷಗಳ ನಡಿಗೆಯ ದೂರದಲ್ಲಿರುವ ಮನೆಯಲ್ಲಿ ಪತ್ತೆಯಾಗಿದ್ದಾನೆ.

1998ರಲ್ಲಿ ನಡೆದ ಅಲ್ಜೀರಿಯಾ ನಾಗರಿಕ ಯುದ್ಧದ ವೇಳೆ ದೆಲ್ಫಾ ನಗರದ ಒಮರ್ ಬಿ ಎಂಬಾತ ದಿಢೀರ್ ನಾಪತ್ತೆಯಾಗಿದ್ದ. ಆಗ ಆತನಿಗೆ ಇನ್ನೂ 19 ವರ್ಷ ವಯಸ್ಸು. ಆತನನ್ನು ಅಪಹರಣ ಮಾಡಲಾಗಿದೆ ಅಥವಾ ಕೊಲೆ ಮಾಡಲಾಗಿದೆ ಎಂದೇ ಕುಟುಂಬದವರು ಭಾವಿಸಿದ್ದರು. ಆತನಿಗಾಗಿ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಎಲ್ಲರೂ ಆತನನ್ನು ಮರೆತಿದ್ದರು.

ಈಗ 45 ವರ್ಷದ ಒಮರ್ ತನ್ನ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿನ ನಿವಾಸವೊಂದರ ಹುಲ್ಲಿನ ಬಣವೆಗಳ ನಡುವೆ ಸಿನಿಮೀಯ ರೀತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ಪತ್ತೆಗೆ ನೆರವಾಗಿದ್ದು, ಒಮರ್‌ನನ್ನು ಅಕ್ರಮವಾಗಿ ಬಂಧಿಸಿ ಇರಿಸಿದ್ದ ವ್ಯಕ್ತಿ ಮತ್ತು ಆತನ ಸಹೋದರನ ನಡುವಿನ ಉತ್ತರಾಧಿಕಾರ ವಿವಾದ. ಸೆರೆಹಿಡಿದಾತನ ಜೊತೆಗಿನ ಜಗಳದ ಬಳಿಕ ಆತನ ಸಹೋದರ ಸಾಮಾಜಿಕ ಮಾಧ್ಯಮದಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದಾನೆ.

ಸಮೀಪದ ಎಲ್ ಗ್ಯೂಡಿಡ್ ಪಟ್ಟಣದಲ್ಲಿನ ಮುನಿಸಿಪಾಲಿಟಿಯಲ್ಲಿ ದ್ವಾರಪಾಲಕನಾಗಿರುವ 61 ವರ್ಷದ ವ್ಯಕ್ತಿಯನ್ನು ಆರೋಪಿ ಎಂದು ಗುರುತಿಸಲಾಗಿದೆ. ಈತ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಬಂಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಅಪರಾಧವನ್ನು ‘ಹೇಯ ಕ್ರೌರ್ಯ’ ಎಂದು ಸಚಿವಾಲಯ ಹೇಳಿದೆ. ಸಂತ್ರಸ್ತನಿಗೆ ವೈದ್ಯಕೀಯ ಮತ್ತು ಮಾನಸಿಕ ಆರೈಕೆ ನೀಡಲಾಗುತ್ತಿದ್ದು, ಆಘಾತದಲ್ಲಿರುವ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಪ್ರಕರಣದ ಕುರಿತು ಸಚಿವಾಲಯ ತನಿಖೆ ನಡೆಸುತ್ತಿದೆ.

ಒಮರ್‌ನನ್ನು ಆ ವ್ಯಕ್ತಿ ಏಕೆ ಬಂಧಿಸಿದ್ದ, ಇಷ್ಟು ವರ್ಷಗಳ ಕಾಲ ಆತನನ್ನು ಹೇಗೆ ನೋಡಿಕೊಂಡಿದ್ದ, ಮನೆಯ ಸಮೀಪದಲ್ಲಿಯೇ ಇದ್ದರೂ ಆತನ ಬಂಧನದ ಬಗ್ಗೆ ಹೊರಜಗತ್ತಿಗೆ ತಿಳಿಯದೆ ಇದ್ದಿದ್ದು ಹೇಗೆ? ಇತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ. ಸಮಗ್ರ ತನಿಖೆ ಬಳಿಕವಷ್ಟೇ ಇವುಗಳಿಗೆ ಉತ್ತರ ಸಿಗಲಿದೆ ಎಂದು ಸಚಿವಾಲಯ ಹೇಳಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *