
ಮಕ್ಕಳಿಗೆ ವಿಕ್ರಮ್-ಪ್ರಗ್ಯಾನ್ ಹೆಸರಿಟ್ಟು ಸಂಭ್ರಮಿಸಿದ ಯಾದಗಿರಿಯ ದಂಪತಿಗಳು – ಚಂದ್ರಯಾನ 3 ಯಶಸ್ಸಿಗೆ ಇಸ್ರೋಗೆ ಅಭಿನಂದನೆ
- ಕರ್ನಾಟಕ
- August 26, 2023
- No Comment
- 61
ನ್ಯೂಸ್ ಆ್ಯರೋ : ಚಂದ್ರಯಾನ-3 ಯಶಸ್ಸು ಸಾಧಿಸುತಿದ್ದಂತೆ ಪ್ರತಿಯೊಬ್ಬ ಭಾರತೀಯರು ಸಂಭ್ರಮಿಸಿದ್ದರು. ಅದರ ಮುಂದುವರೆದ ಭಾಗವಾಗಿ ದೇಶದ ಹಲವೆಡೆ ಮಕ್ಕಳಿಗೆ ಚಂದ್ರಯಾನ 3 ನೆನಪಿನಲ್ಲಿ ನಾಮಕರಣ ಮಾಡಿದ್ದರು. ಇದೀಗ ಯಾದಗಿರಿಯ ದಂಪತಿಗಳು ತಮ್ಮ ಮಕ್ಕಳಿಗೆ ವಿಕ್ರಮ್ ಹಾಗೂ ಪ್ರಗ್ಯಾನ್ ಎಂದು ಹೆಸರಿಟ್ಟು, ಇಸ್ರೋ ವಿಜ್ಞಾನಿಗಳಿಗೆ ವಿಶೇಷವಾಗಿ ನಮನ ಸಲ್ಲಿದ್ದಾರೆ.
ವಿಕ್ರಮ್ ಎನ್ನುವುದು ಚಂದ್ರಯಾನ-3ಯ ಲ್ಯಾಂಡರ್‌ನ ಹೆಸರಾಗಿದ್ದರೆ, ಪ್ರಗ್ಯಾನ್ ಎನ್ನುವುದು ರೋವರ್‌ರ ಹೆಸರಾಗಿದೆ. ಯಾದಗಿರಿಯಲ್ಲಿ ಮಕ್ಕಳಿಗೆ ವಿಕ್ರಮ ಹಾಗೂ ಪ್ರಗ್ಯಾನ್ ಹೆಸರಿಟ್ಟು ನಾಮಕರಣ ಮಾಡಲಾಗಿದೆ.
ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಒಂದೇ ಕುಟುಂಬದಲ್ಲಿ ಜನಿಸಿದ ಇಬ್ಬರು ಮಕ್ಕಳಿಗೆ ಈ ಹೆಸರನ್ನು ಇಡಲಾಗಿದೆ. ಒಂದೇ ಕುಟುಂಬದಲ್ಲಿ ಕಳೆದ ಒಂದು ತಿಂಗಳ ಹಿಂದೆ ಜನಿಸಿರುವ ಎರಡು ಗಂಡು ಮಗುವಿಗೆ ವಿಕ್ರಮ್ ಹಾಗೂ ಪ್ರಗ್ಯಾನ್ ಹೆಸರಿಡಲಾಗಿದೆ.
ಬಾಲಪ್ಪ ಹಾಗೂ ನಾಗಮ್ಮ ದಂಪತಿಯ ಮಗುವಿಗೆ ವಿಕ್ರಮ್ ಎಂದು ಹೆಸರು ಇಡಲಾಗಿದ್ದರೆ, ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್ ಎಂದು ನಾಮಕರಣ ಮಾಡಲಾಗಿದೆ.
ಜುಲೈ 28ರಂದು ವಿಕ್ರಮ್ ಜನಿಸಿದರೆ, ಆಗಸ್ಟ್ 18ರಂದು ಪ್ರಗ್ಯಾನ್ ಎಂಬ ಹೆಸರಿನ ಮಗು ಜನಿಸಿದೆ. ಎರಡು ಮಕ್ಕಳ ನಾಮಕರಣವನ್ನು ಆಗಸ್ಟ್ 24 ರಂದು ಮಾಡಲಾಗಿತ್ತು. ಚಂದ್ರಯಾನ-3 ಯಶಸ್ವಿಗೊಳಿಸಿದ ಇಸ್ರೋಗೆ ಅಭಿನಂದನೆ ಸಲ್ಲಿಸಲು ಈ ಹೆಸರನ್ನು ಇಡಲಾಗಿದೆ.