
ಚಂದ್ರನ ಅಂಗಳದಲ್ಲಿ ಆಮ್ಲಜನಕ ಪತ್ತೆಹಚ್ಚಿದ ಇಸ್ರೋ – ಮತ್ತಷ್ಟು ಖನಿಜಗಳ ಮೂಲ ಪತ್ತೆ ಹಚ್ಚಿದ ಪ್ರಗ್ಯಾನ್ ರೋವರ್, ಹೆಚ್ಚಿದ ಕುತೂಹಲ
- ಕೌತುಕ-ವಿಜ್ಞಾನ
- August 30, 2023
- No Comment
- 55
ನ್ಯೂಸ್ ಆ್ಯರೋ : ಚಂದ್ರನ ಅಂಗಳದಲ್ಲಿ ಚಂದ್ರಯಾನ-3 ಯೋಜನೆ ಮೂಲಕ ಸಂಶೋಧನೆ ನಡೆಸುತ್ತಿರುವ ಇಸ್ರೋ ಮಹತ್ವದ ಮಾಹಿತಿ ನೀಡುತ್ತಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಈಗಾಗಲೇ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅಧ್ಯಯನ ಆರಂಭಿಸಿದೆ.
ಆಮ್ಲಜನಕ ಪತ್ತೆ
ನಿರೀಕ್ಷಿಸಿದಂತೆ ಚಂದ್ರನ ಮೇಲೆ ಆಮ್ಲಜನಕ ದ ಮೂಲವನ್ನು ಪತ್ತೆ ಹಚ್ಚಲಾಗಿದೆ. ಜೊತೆಗೆ ಅಲ್ಯೂಮಿನಿಯಂ, ಸಲ್ಫರ್, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ ಮತ್ತು ಟೈಟಾನಿಯಂ ಇರುವಿಕೆಯನ್ನು ಕಂಡು ಹಿಡಿಯಲಾಗಿದೆ. ಹೆಚ್ಚಿನ ತಾಪಮಾನ ಮ್ಯಾಂಗನೀಸ್, ಸಿಲಿಕಾನ್ ಇರುವಿಕೆಯನ್ನು ಖಚಿತಪಡಿಸಿದೆ ಎಂದು ಇಸ್ರೋ ತಿಳಿಸಿದೆ.
ಈ ಅಧ್ಯಯನ ಬಹುದೊಡ್ಡ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಮಧ್ಯೆ ಹೈಡ್ರೋಜನ್ ಧಾತು ಹುಡುಕುವ ಮಹತ್ವದ ಜವಾಬ್ದಾರಿಯನ್ನು ರೋವರ್ ಗೆ ನೀಡಲಾಗಿದೆ.
ಪ್ರಗ್ಯಾನ್ ರೋವರ್ ನಲ್ಲಿ ಲೇಸರ್-ಇಂಡ್ಯೂಸ್ಡ್ ಬ್ರೇಕ್ ಡೌನ್ ಸ್ಪೆಕ್ಟ್ರೋಸ್ಕೋಪ್ (LIBS) ಉಪಕರಣವಿದ್ದು, ಇದರ ಸಹಾಯದಿಂದ ಸಂಶೋಧನೆ ಕೈಗೊಳ್ಳಲಾಗಿದೆ. LIBS ಉಪಕರಣವನ್ನು ಬೆಂಗಳೂರಿನ ಇಸ್ರೋ ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಜುಲೈ 14ರಂದು ಇಸ್ರೋ ಉಡಾವಣೆ ಮಾಡಿದ್ದ ಚಂದ್ರಯಾನ-3 ಆಗಸ್ಟ್ 23ರಂದು ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು. ದಕ್ಷಿಣ ಧ್ರುವದಲ್ಲಿ ನೌಕೆ ಇಳಿದ ಕೆಲವೇ ಗಂಟೆಗಳ ಬಳಿಕ ರೋವರ್ ಅನ್ನು ವಿಕ್ರಮ್ ಲ್ಯಾಂಡರ್ ಹೊರಗೆ ಕಳುಹಿಸಿತ್ತು. ಶಿವಶಕ್ತಿ ಲ್ಯಾಂಡಿಂಗ್ ಪಾಯಿಂಟ್ ಸುತ್ತ ರೋವರ್ ತಿರುಗುತ್ತಿರುವ ವೀಡಿಯೋವನ್ನು ಇಸ್ರೋ ಆಗಸ್ಟ್ 26ರಂದು ಬಿಡುಗಡೆ ಮಾಡಿತ್ತು.
ಚಂದ್ರಯಾನ ಯಶಸ್ವಿಯಾದ ಬೆನ್ನಲ್ಲೇ ಇಸ್ರೋ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಸೆಪ್ಟಂಬರ್-2ರಂದು ಬೆಳಗ್ಗೆ 11.50ಕ್ಕೆ ಆದಿತ್ಯ -ಎಲ್-1ಲಾಂಚ್ ಆಗಲಿದೆ.