
ಭಾವೋದ್ರಿಕ್ತವಾಗಿ ಪ್ರಿಯಕರನಿಗೆ ಚುಂಬಿಸಿದ ಯುವತಿ, ಕಿವುಡಾದ ಪ್ರಿಯಕರ – ಗಾಢ ಚುಂಬನ ಅದೆಷ್ಟು ಡೇಂಜರ್ ಗೊತ್ತಾ?
- ಸಂಬಂಧ
- August 30, 2023
- No Comment
- 109
ನ್ಯೂಸ್ ಆ್ಯರೋ : ಗೆಳತಿಯ ಜತೆ ಭಾವೋದ್ರಿಕ್ತ ಚುಂಬನದಲ್ಲಿ ತೊಡಗಿದ್ದ ವ್ಯಕ್ತಿಗೆ ಕಿವಿಯಲ್ಲಿ ನೋವು ಕಾಣಿಸಿಕೊಂಡು ಕಿವುಡನಾಗಿರುವ ಘಟನೆ ಚೀನಾದಲ್ಲಿ ನಡೆದಿದೆ. ತನ್ನ ಗೆಳತಿಯೊಂದಿಗೆ 10 ನಿಮಿಷಗಳ ಕಾಲ ಚುಂಬಿಸಿದ ನಂತರ ಕಿವುಡ ಆಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಪ್ರೇಮಿಗಳು ಚೀನಾದ ಪೂರ್ವ ಝೆಜಿಯಾಂಗ್ ಪ್ರಾಂತ್ಯದ ವೆಸ್ಟ್ ಲೇಕ್‌ನಲ್ಲಿ ಡೇಟಿಂಗ್‌ನಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಚೈನೀಸ್ ವ್ಯಾಲೆಂಟೈನ್ಸ್ ದಿವಸ ಚುಂಬಿಸುತ್ತಿದ್ದಾಗ ಹುಡುಗನ ಕಿವಿಯಲ್ಲಿ ಬಬ್ಲಿಂಗ್ ಶಬ್ದ ಕೇಳಿ ನಂತರ ತೀಕ್ಷ್ಣವಾದ ನೋವು ಕಾಣಿಸಿಕೊಂಡಿದೆ.
ಕೂಡಲೇ ಅಲ್ಲಿನ ಆಸ್ಪತ್ರೆಗೆ ಹೋದ ಜೋಡಿ ಅಲ್ಲಿ ವೈದ್ಯರು ಅವನ ಕಿವಿಯ ತಮಟೆ ರಂಧ್ರವಾಗಿರುವುದನ್ನು ಕಂಡುಹಿಡಿದರು. ಸಂಪೂರ್ಣ ಚೇತರಿಸಿಕೊಳ್ಳಲು ಎರಡು ತಿಂಗಳು ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಭಾವೋದ್ರಿಕ್ತ ಚುಂಬನವು ಕಿವಿಯ ತಮಟೆ ಮೇಲೆ ಎಳೆಯುವ ಬಲವಾದ ಹೀರುವಿಕೆಯನ್ನು ರಚಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಗಾಳಿಯ ಒತ್ತಡದಲ್ಲಿನ ಕ್ಷಿಪ್ರ ಬದಲಾವಣೆಯು ಭಾರೀ ಉಸಿರಾಟದ ಜೊತೆಗೆ ಹಾನಿಗೆ ಕಾರಣವಾಗಬಹುದು.
ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. 2008 ರಲ್ಲಿ, ಚೀನಾದ ಝುಹಾಯ್‌ನ 20 ವರ್ಷದ ಹುಡುಗಿಯೊಬ್ಬಳು ಭಾವೋದ್ರಿಕ್ತ ಚುಂಬನದ ಸಮಯದಲ್ಲಿ ತನ್ನ ಎಡ ಕಿವಿ ಸಂಪೂರ್ಣವಾಗಿ ಕಿವುಡಾಗಿ ಆಸ್ಪತ್ರೆಗೆ ದಾಖಲಾಗಿರುವುದು ವರದಿಯಾಗಿದೆ. ಅದಲ್ಲದೆ ಈಚೆಗೆ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ದಂಪತಿಗಳಿಗೆ ಇದೇ ಸಮಸ್ಯೆ ಕಾಣಿಸಿಕೊಂಡಿತ್ತು.