ಕೇವಲ 9 ನಿಮಿಷದಲ್ಲೇ ಫುಲ್ ಚಾರ್ಜ್ ಆಗುತ್ತೆ ಈ ಮೊಬೈಲ್ ಫೋನ್ – ಯಾವ ಮಾಡೆಲ್? ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ..

ಕೇವಲ 9 ನಿಮಿಷದಲ್ಲೇ ಫುಲ್ ಚಾರ್ಜ್ ಆಗುತ್ತೆ ಈ ಮೊಬೈಲ್ ಫೋನ್ – ಯಾವ ಮಾಡೆಲ್? ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ..

ನ್ಯೂಸ್ ಆ್ಯರೋ‌ : ಸದ್ಯ ರಿಯಲ್ ಮಿ ಸ್ಮಾರ್ಟ್ ಫೋನ್ ಗಳಿಗೆ ಬಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಹೊಸ ಹೊಸ ಮಾಡೆಲ್ ಲಾಂಚ್ ಮಾಡುವ ಮೂಲಕ ಗ್ರಾಹಕರ ಗಮನ ಸೆಳೆಯುವಲ್ಲಿ ಈ ಕಂಪೆನಿ ಯಶಸ್ವಿಯಾಗಿದೆ. ಇದೀಗ ರಿಯಲ್ ಮಿ GT5 ತನ್ನ ವಿಶಿಷ್ಟ ಫೀಚರ್ ಗಳಿಂದ ಆಕರ್ಷಿಸುತ್ತಿದೆ.

ವೈಶಿಷ್ಟ್ಯ

Realme GT5 ಫೋನ್ ಬರೋಬ್ಬರಿ 240W ಸೂಪರ್ ವೂಕ್ ಚಾರ್ಜಿಂಗ್ ಹೊಂದಿದ್ದು 9 ನಿಮಿಷದಲ್ಲೇ ಶೇ. 100ರಷ್ಟು ಜಾರ್ಜ್ ಮಾಡಬಹುದು. ಜೊತೆಗೆ 4600mAh ಸಾಮರ್ಥ್ಯದ ಬ್ಯಾಟರಿ ಇದೆ.

ಈ ಸ್ಮಾರ್ಟ್‌ಫೋನ್‌ 6.74 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್, 2160Hz ಹೈ-ಫ್ರೀಕ್ವೆನ್ಸಿ PWM ಮಬ್ಬಾಗಿಸುವಿಕೆ ಮತ್ತು 1450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ವೀಡಿಯೋ ವೀಕ್ಷಣೆ, ಗೇಮಿಂಗ್‌ ವಿಶೇಷವಾದ ಅನುಭವವಾಗಲಿದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು ಅದರಲ್ಲಿ 50MP ಸೋನಿ IMX890 ಸೆನ್ಸರ್ + 8MP ಅಲ್ಟ್ರಾ ವೈಡ್ ಲೆನ್ಸ್+ 2MP ಮ್ಯಾಕ್ರೋ ಸೆನ್ಸರ್‌ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 16MP ಕ್ಯಾಮರಾ ಇದೆ. 5G, 4G VoltE, ವೈ-ಫೈ 7, ಬ್ಲೂಟೂತ್ ಆವೃತ್ತಿ 5.3, ಜಿಪಿಎಸ್‌, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಹೊಂದಿದೆ. ವಿಶೇಷ ಎಂದರೆ ರಿಯರ್‌ ಕ್ಯಾಮರಾದ ಬಲಭಾಗದಲ್ಲಿ ಬಾಕ್ಸ್ ಎಲ್‌ಇಡಿ ಸ್ಟ್ರಿಪ್ ಲೈಟ್ನಿಂಗ್ ಆಯ್ಕೆ ಇದ್ದು, ಮ್ಯೂಸಿಕ್‌ ಪ್ಲೇ ಆಗುತ್ತಿರುವಾಗ ಎಲ್‌ಇಡಿಗಳು ಬೆಳಗುತ್ತವೆ.

ಬೆಲೆ ಎಷ್ಟು?

ರಿಯಲ್‌ಮಿಯ ಈ ಫೋನ್‌ ಬೆಲೆ 35,000 ರೂ.ಯಿಂದ ಪ್ರಾರಂಭವಾಗುತ್ತದೆ. ಅದರಲ್ಲಿ 24GB RAM ಹೊಂದಿರುವ 1TB ಮಾಡೆಲ್‌ಗೆ 43,500 ರೂ. ಹಾಗೂ 16GB RAM ಮತ್ತು 512GB ಸ್ಟೋರೇಜ್ (150W) ಹೊಂದಿರುವ ಮಿಡ್-ವೇರಿಯಂಟ್‌ಗಳ ಬೆಲೆ 37,400 ರೂ. ಆದರೆ ಸದ್ಯ ಇದು ಚೀನಾದಲ್ಲಿ ಮಾತ್ರ ಲಭ್ಯ. ಭಾರತಕ್ಕೆ ಬರಲು ಇನ್ನು ಸ್ವಲ್ಪ ಸಮಯ ಕಾಯಬೇಕು.

Related post

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ –…

ನ್ಯೂಸ್‌ ಆ್ಯರೋ : ಕರ್ನಾಟಕ ಲೋಕ ಸೇವಾ ಆಯೋಗದಿಂದ ಗ್ರೂಪ್​ ಸಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ…
ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್ ಆಯ್ತು ಅಪರೂಪದ ವಿಡಿಯೋ..!

ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್…

ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನ…

Leave a Reply

Your email address will not be published. Required fields are marked *