ಬಂಟ್ವಾಳ : ರಾತ್ರಿ ತಾಯಿ ಜೊತೆ ಮಲಗಿದ್ದ ಮಗಳು ಬೆಳಗ್ಗೆ ಏಳಲೇ ಇಲ್ಲ..!! – ಹೃದಯಾಘಾತದಿಂದ ಮೃತಪಟ್ಟ ಯುವತಿ, ಮುಗಿಲುಮುಟ್ಟಿದ ಪೋಷಕರ ಆಕ್ರಂದನ

ಬಂಟ್ವಾಳ : ರಾತ್ರಿ ತಾಯಿ ಜೊತೆ ಮಲಗಿದ್ದ ಮಗಳು ಬೆಳಗ್ಗೆ ಏಳಲೇ ಇಲ್ಲ..!! – ಹೃದಯಾಘಾತದಿಂದ ಮೃತಪಟ್ಟ ಯುವತಿ, ಮುಗಿಲುಮುಟ್ಟಿದ ಪೋಷಕರ ಆಕ್ರಂದನ

ನ್ಯೂಸ್ ಆ್ಯರೋ : ಯುವತಿಯೊಬ್ಬಳು ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದಲ್ಲಿ ನಡೆದಿದೆ.

ಕಾವಳಪಡೂರು ಗ್ರಾಮದ ಮಧ್ವಗುತ್ತು ರಾಜೀವ ಶೆಟ್ಟಿ ಮೀನಾ ದಂಪತಿಯ ಪುತ್ರಿ ಮಿತ್ರಾ ಶೆಟ್ಟಿ ಮೃತಪಟ್ಟವರು.

ಮೂಲತ: ಕಾವಳಮೂಡೂರು ಪುಳಿಮಜಲಿನ ನಿವಾಸಿಯಾಗಿದ್ದ ಮಿತ್ರಾ ಅವರ ತಂದೆ ಹಾಗೂ ಸಹೋದರ ಬೆಂಗಳೂರಿನಲ್ಲಿದ್ದು, ಪ್ರಸ್ತುತ ಮಿತ್ರಾ ಅವರು ಬಿ.ಸಿ.ರೋಡ್‌ನಲ್ಲಿ ಖಾಸಗಿ ಉದ್ಯೋಗದಲ್ಲಿದ್ದು, ಮಧ್ವದಲ್ಲಿ ದೊಡ್ಡಮ್ಮನ ಮನೆಯಲ್ಲಿ ತಾಯಿ ಜತೆ ವಾಸವಿದ್ದರು.

ಮಂಗಳವಾರ ರಾತ್ರಿ ಊಟ ಮುಗಿಸಿ ತಾಯಿ ಜತೆ ಮಲಗಿದ್ದರು. ಬೆಳಗ್ಗೆ‌ ಕೆಲ ಹೊತ್ತು ಕಳೆದರೂ ಮಗಳು ಏಳದಿರುವುದನ್ನು ಗಮನಿಸಿದ ತಾಯಿ ಎಬ್ಬಿಸುವಾಗ ಅವರು ಮೃತ ಪಟ್ಟಿರುವುದು ತಿಳಿದು ಬಂದಿದೆ.

ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸಾವಿಗೆ ಹೃದಯಾಘಾತ ಕಾರಣವೆಂದು ವೈದ್ಯರು ತಿಳಿಸಿದ್ದಾರೆ. ನಂತರ ಮೃತ ದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರು ತಂದೆ, ತಾಯಿ, ಸಹೋದರನನ್ನು ಅಗಲಿದ್ದು, ಮಿತ್ರಾ ಅವರ ಸಾವಿನಿಂದ ಇಡೀ ಕುಟುಂಬದ ಆಕ್ರಂದನ ಮುಗಿಲು‌ ಮುಟ್ಟಿದೆ.

ಮಿತ್ರಾ ಅವರು ಪದವೀಧರೆಯಾಗಿದ್ದು, ಸ್ಥಳೀಯವಾಗಿ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮಿತ್ರಾ ಅವರ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

Related post

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…
ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ..?

ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ…

ನ್ಯೂಸ್ ಆರೋ: ಕೋಲ್ಕತ್ತಾದ ಐತಿಹಾಸಿಕ ಮೈದಾನವಾಗಿರುವ ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಲಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಕೆಕೆಆರ್…
17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ ನಿರೂಪಕಿ ಅನುಪಮಾ ಗೌಡ!

17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ…

ನ್ಯೂಸ್ ಆರೋ: ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ತಮ್ಮ ಕೆಂಪು ಬಣ್ಣದ ಥಾರ್ ಜೀಪ್ ಮಾರಾಟ ಮಾಡಿದ್ದಾರೆ. ಈಗ ಐಷಾರಾಮಿ ಬೆಂಜ್ ಖರೀದಿಸಲು ಕಾರಣ ರಿವೀಲ್ ಮಾಡಿದ್ದಾರೆ.…

Leave a Reply

Your email address will not be published. Required fields are marked *