
ರಕ್ಷಾ ಬಂಧನ್ ವಿಶೇಷ: ಇದು ಡಿಜಿಟಲ್ ಮೆಹೆಂದಿ – ಕೈ ಸ್ಕ್ಯಾನ್ ಮಾಡಿ ಹಣ ಪಾವತಿಸಿ..
- ವೈರಲ್ ನ್ಯೂಸ್
- August 30, 2023
- No Comment
- 51
ನ್ಯೂಸ್ ಆ್ಯರೋ : ದೇಶದ ಎಲ್ಲಾ ಭಾಗಗಳಲ್ಲಿ ರಕ್ಷಾ ಬಂಧನ ಆಚರಣೆ ಕಳೆಗಟ್ಟಿದೆ. ಸಹೋದರಿ ತನ್ನ ಸಹೋದರಿಗೆ ರಾಖಿ ಕಟ್ಟಿ ಇನ್ನು ತನ್ನ ರಕ್ಷಣೆಯ ಜವಾಬ್ದಾರಿ ನಿನ್ನದು ಎಂದು ಸೂಚ್ಯವಾಗಿ ಹೇಳುವ ಹಬ್ಬವಿದು. ಸಾಮಾನ್ಯವಾಗಿ ರಾಖಿ ಕಟ್ಟಿದ ತಂಗಿಗೆ ಅಣ್ಣ ಉಡುಗೊರೆ ಕೊಡುವುದು ವಾಡಿಕೆ. ಇದೀಗ ಅಣ್ಣಂದಿರಿಗೆ ಸುಲಭವಾಗುವಂತೆ ತಂಗಿಯ ಕೈಯಲ್ಲಿನ ಕ್ಯೂಆರ್ ಕೋಡ್ ಇರುವ ಮದರಂಗಿ ಜನಪ್ರಿಯವಾಗುತ್ತಿದೆ.
ಏನಿದು ಕ್ಯೂಆರ್ ಕೋಡ್ ಮದರಂಗಿ?
ಡಿಜಿಟಲ್ ಭಾರತದ ಈ ಹೊಸ ಮಾದರಿ ಮದರಂಗಿ ವೀಡಿಯೋ ವೈರಲ್ ಆಗುತ್ತಿದೆ. ಯುವತಿಯರ ಕೈಗೆ ಕ್ಯೂಆರ್ ಕೋಡ್ ಇರುವ ಮದರಂಗಿ ಬಿಡಿಸಲಾಗುತ್ತದೆ. ರಾಖಿ ಕಟ್ಟಿದ ತಂಗಿಯ ಕೈಯನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಯುಪಿಐ ಪೋರ್ಟಲ್ ನಲ್ಲಿ ಉಡುಗೊರೆಯನ್ನು ಹಣದ ರೂಪದಲ್ಲಿ ವರ್ಗಾಯಿಸಬಹುದು!
ಯಶ್ ಮೆಹೆಂದಿ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಕಂಡು ಬಂದ ಈ ವೀಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ಡಿಜಿಟಲ್ ಮೆಹೆಂದಿ ಎಂದು ಕರೆಯಲಾಗಿದೆ.
ಕೇವಲ ಮೋಜಿಗಾಗಿ
ಆದರೆ ಕ್ಯೂಆರ್ ಕೋಡ್ ಅನ್ನು ಹಣ ವರ್ಗಾಯಿಸಲು ಬಳಸುವುದಿಲ್ಲ. ಈ ವೀಡಿಯೋವನ್ನು ಕೇವಲ ಮೋಜಿಗಾಗಿ ಚಿತ್ರೀಕರಿಸಲಾಗಿದೆ ಎಂದು ಕ್ಯಾಪ್ಶನ್ ನಲ್ಲಿ ಸ್ಪಷ್ಟನೆ ನೀಡಲಾಗಿದೆ.
ಈ ವೀಡಿಯೋವನ್ನು 9 ಲಕ್ಷಕ್ಕಿಂತ ಅಧಿಕ ಮಂದಿ ಮೆಚ್ಚಿಕೊಂಡಿದ್ದಾರೆ. ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ಉತ್ತಮ ಐಡಿಯಾ ಎಂದು ಹಲವರು ಹೇಳಿದ್ದಾರೆ. ಸೃಜನಶೀಲತೆಗೆ ಕೊನೆಯಿಲ್ಲ ಎಂದು ಇನ್ನೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.