ಮೂತ್ರದಲ್ಲಿ ಆಗಾಗ ನೊರೆ ಕಾಣಿಸಿಕೊಳ್ಳುತ್ತಿದ್ಯಾ? – ಇದು ನಿಮ್ಮ ಆರೋಗ್ಯದಲ್ಲಿ ಏನನ್ನು ಸೂಚಿಸುತ್ತದೆ ಗೊತ್ತಾ?

ಮೂತ್ರದಲ್ಲಿ ಆಗಾಗ ನೊರೆ ಕಾಣಿಸಿಕೊಳ್ಳುತ್ತಿದ್ಯಾ? – ಇದು ನಿಮ್ಮ ಆರೋಗ್ಯದಲ್ಲಿ ಏನನ್ನು ಸೂಚಿಸುತ್ತದೆ ಗೊತ್ತಾ?

ನ್ಯೂಸ್‌ ಆ್ಯರೋ : ಮನುಷ್ಯನ ಮೂತ್ರದ ಬಣ್ಣ, ವಾಸನೆಯಲ್ಲೂ ಅವರ ಆರೋಗ್ಯವನ್ನು ನಿರ್ಧರಿಸಬಹುದು. ಇನ್ನೂ ಅನೇಕ ರೀತಿಯ ಆರೋಗ್ಯ ಸಮಸ್ಯೆಯನ್ನು ಮೂತ್ರದಿಂದ ಕಂಡುಕೊಳ್ಳಬಹುದು. ಕೆಲವರಿಗೆ ಮೂತ್ರ ಹೆಚ್ಚಾಗಿ ನೊರೆ ಕಾಣಿಸಿಕೊಂಡು ತಲೆಬಿಸಿ ಆಗುವುದುಂಟು. ಈ ಲೇಖನದಲ್ಲಿ ಮೂತ್ರದಲ್ಲಿ ನೊರೆ ಏಕೆ ಕಾಣಿಸಿಕೊಳ್ಳುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಯಕೃತ್ತು, ಮೂತ್ರಪಿಂಡ, ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರನ್ನು ಗುರುತಿಸಲು ವೈದ್ಯರು ಮೂತ್ರ ಪರೀಕ್ಷೆಗಳನ್ನು ಮಾಡಲು ಹೇಳುತ್ತಾರೆ.

ಈ ರೀತಿಯ ಪರೀಕ್ಷೆಯಿಂದಾಗಿ ದೇಹದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೂ ಪತ್ತೆಹಚ್ಚಬಹುದು. ನೊರೆ ಮೂತ್ರವನ್ನು ಪ್ರೋಟೀನುರಿಯಾ ಎಂದೂ ಕರೆಯಲಾಗುತ್ತದೆ. ಮೂತ್ರವು ನೊರೆಯಿಂದ ಮತ್ತು ನೊರೆಯಾಗಿ ಕಾಣಿಸಿಕೊಳ್ಳುವ ಸ್ಥಿತಿಯಾಗಿದೆ. ಸಾಮಾನ್ಯವಾಗಿ ಮೂತ್ರವು ಸಣ್ಣ ಪ್ರಮಾಣದಲ್ಲಿ ಪ್ರೋಟೀನ್ ಅನ್ನು ಹೊಂದಿರುತ್ತದೆ. ಆದರೆ, ಪ್ರೋಟೀನ್​​ ಮಟ್ಟಗಳು ಅಧಿಕವಾದಾಗ ಇದು ನೊರೆ ಮೂತ್ರಕ್ಕೆ ಕಾರಣವಾಗಬಹುದು. ಇದು ಗಮನಹರಿಸಬೇಕಾದ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು.

ನೊರೆ ಮೂತ್ರಕ್ಕೆ ಕಾರಣಗಳು

ನೊರೆ ಮೂತ್ರಕ್ಕೆ ಮುಖ್ಯ ಕಾರಣವೆಂದರೆ ಹೆಚ್ಚಿನ ಒತ್ತಡದಿಂದ ಮೂತ್ರವನ್ನು ಹೊರಹಾಕುವುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆಗಾಗ ಈ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚು ಒತ್ತಡಕ್ಕೆ ಒಳಗಾಗಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದಲ್ಲದೆ, ಈ ಕೆಳಗಿನ ಕಾರಣಗಳಿಂದಲೂ ಮೂತ್ರದಲ್ಲಿ ನೊರೆ ಬರುವ ಸಾಧ್ಯತೆಗಳಿವೆ.

1. ನಿರ್ಜಲೀಕರಣ

ದೇಹದಲ್ಲಿ ನೀರಿನ ಕೊರತೆಯಿಂದ ಇದೇ ರೀತಿಯ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಇಂತಹ ಸಮಸ್ಯೆಯಿಂದಾಗಿ, ಮೊದಲು ಮೂತ್ರವು ಗಾಢ ಹಳದಿ ಬಣ್ಣದಲ್ಲಿ ಕಾಣುತ್ತದೆ. ಅಲ್ಲದೆ, ಮೂತ್ರದಲ್ಲಿ ನೊರೆಯಾಗುವ ಸಾಧ್ಯತೆಗಳಿವೆ. ಅತಿಯಾದ ಬಾಯಾರಿಕೆಯಿಂದ ಕೆಲವರಲ್ಲಿ ಮೂತ್ರದಲ್ಲಿ ಪ್ರೋಟೀನ್ ಕರಗಿ ನೊರೆ ಬರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು.

2. ಕಿಡ್ನಿ ಸಮಸ್ಯೆ

ಕಿಡ್ನಿ ಸಮಸ್ಯೆಯಿಂದಾಗಿ ಕೆಲವರಲ್ಲಿ ಪದೇಪದೆ ನೊರೆ ಮೂತ್ರ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಪ್ರೋಟೀನುರಿಯಾ ಎಂದು ಕರೆಯಲ್ಪಡುವ ನೊರೆ ಮೂತ್ರವೂ ಕೆಲವರಲ್ಲಿ ಮೂತ್ರಪಿಂಡ ಕಾಯಿಲೆಯ ಸಂಕೇತವಾಗಿರಬಹುದು.

3. ರೆಟ್ರೋಗ್ರೇಡ್ ಸ್ಖಲನ

ರಟ್ರೋಗ್ರೇಡ್ ಸ್ಖಲನವು ಪುರುಷರಲ್ಲಿ ಒಂದು ಕಾಯಿಲೆಯಾಗಿದೆ. ಈ ಕಾಯಿಲೆಯಿಂದಾಗಿ ವೀರ್ಯವು ಶಿಶ್ನದಿಂದ ಹೊರಬರುವುದಿಲ್ಲ. ಬದಲಾಗಿ ಮತ್ತೆ ಮೂತ್ರಕೋಶಕ್ಕೆ ವಾಪಸ್​ ಹೋಗುತ್ತದೆ. ಇದರಿಂದಾಗಿ ಮೂತ್ರದಿಂದ ನೊರೆ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ವೈದ್ಯಕೀಯದಲ್ಲಿ ತಿಳಿಸಲಾಗಿದೆ.

4. ಅತಿಯಾದ ದೈಹಿಕ ಚಟುವಟಿಕೆ

ತೀವ್ರವಾದ ದೈಹಿಕ ಚಟುವಟಿಕೆ ಅಥವಾ ಭಾರೀ ವ್ಯಾಯಾಮವು ಮೂತ್ರಪಿಂಡಗಳ ಮೇಲಿನ ಒತ್ತಡದಿಂದಾಗಿ ತಾತ್ಕಾಲಿಕ ಪ್ರೋಟೀನುರಿಯಾವನ್ನು ಉಂಟುಮಾಡಬಹುದು. ಶ್ರಮದಾಯಕ ವ್ಯಾಯಾಮವು ಪ್ರೋಟೀನ್‌ಗಳನ್ನು ಮೂತ್ರಕ್ಕೆ ಬಿಡುಗಡೆ ಮಾಡಲು ಕಾರಣವಾಗಬಹುದು, ಇದು ನೊರೆ ಕಾಣಿಸಿಕೊಳ್ಳಲು ಕಾರಣವಾಗುತ್ತದೆ.

5. ಮೂತ್ರನಾಳದ ಸೋಂಕುಗಳು:

ಮೂತ್ರನಾಳ ಅಥವಾ ಮೂತ್ರಪಿಂಡಗಳಂತಹ ಮೂತ್ರನಾಳದಲ್ಲಿನ ಸೋಂಕುಗಳು ನೊರೆ ಮೂತ್ರವನ್ನು ಉಂಟುಮಾಡಬಹುದು. ಈ ಸೋಂಕುಗಳು ಮೂತ್ರದ ವ್ಯವಸ್ಥೆಯನ್ನು ಕೆರಳಿಸಬಹುದು ಮತ್ತು ಮೂತ್ರದಲ್ಲಿ ಪ್ರೋಟೀನ್​ಗಳ ಉಪಸ್ಥಿತಿಗೆ ಕಾರಣವಾಗಬಹುದು.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *