
ಶಿಕ್ಷಕರೊಬ್ಬರಿಗೆ ರಾಖಿ ಕಟ್ಟಿದ 7 ಸಾವಿರ ವಿದ್ಯಾರ್ಥಿನಿಯರು – ಯಾರಿದು ಶಿಕ್ಷಕ? ಎಲ್ಲಿಯ ಘಟನೆ?
- ವೈರಲ್ ನ್ಯೂಸ್
- August 30, 2023
- No Comment
- 91
ನ್ಯೂಸ್ ಆ್ಯರೋ : ದೇಶದೆಲ್ಲೆಡೆ ಇಂದು ಭಾತೃತ್ವದ ಸಂಕೇತವಾದ ರಾಖಿ ಹಬ್ಬವನ್ನು ಆಚರಿಸಲಾಗುತ್ತಿದೆ. ಪಾಟ್ನಾದ ಟ್ಯೂಷನ್ ಬೋಧಕ ಖಾನ್ ಸರ್ ಈ ರಕ್ಷಾ ಬಂಧನವನ್ನು ವಿದ್ಯಾರ್ಥಿಗಳ ಜೊತೆ ಆಚರಿಸಿದ್ದಾರೆ. ಈ ವೇಳೆ ದಾಖಲೆಯೊಂದು ತನ್ನ ಹೆಸರಿನಲ್ಲಿ ನಿರ್ಮಾಣವಾಗಿದೆ ಎಂದು ಖಾನ್ ಸರ್ ಹೇಳಿಕೊಂಡಿದ್ದಾರೆ.
ದಾಖಲೆ ಏನು?
ಕೋಚಿಂಗ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಬ್ಯಾಚ್ ನ ಸುಮಾರು 10 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ವೇಳೆ ಖಾನ್ ಸರ್ ಕೈಗೆ ಸುಮಾರು 7 ಸಾವಿರ ವಿದ್ಯಾರ್ಥಿನಿಯರು ರಾಖಿ ಕಟ್ಟಿದ್ದಾರೆ.
ನೂಕು ನುಗ್ಗಲು ಉಂಟಾಗಬಾರದು ಎನ್ನುವ ಕಾರಣಕ್ಕೆ ಖಾನ್ ಸರ್ ಸ್ವತಃ ವಿದ್ಯಾರ್ಥಿನಿಯರ ಬಳಿ ತೆರಳಿ ರಾಖಿ ಕಟ್ಟಿಸಿಕೊಂಡರು. ಇದಕ್ಕೆ ಸುಮಾರು ಎರಡೂವರೆ ತಾಸು ಹಿಡಿಯಿತು.

ನನಗೆ ಸ್ವಂತ ಸಹೋದರಿಯರಿಲ್ಲ. ಈ ವಿದ್ಯಾರ್ಥಿನಿಯರನ್ನೇ ನಾನು ಸಹೋದರಿಯರೆಂದು ಭಾವಿಸುತ್ತೇನೆ. ಖಂಡಿತವಾಗಿಯು ಜಗತ್ತಿನಲ್ಲಿ ಯಾರಿಗೂ ಇಷ್ಟೊಂದು ಮಂದಿ ರಾಖಿ ಕಟ್ಟುವುದಿಲ್ಲ. ಇದೊಂದು ರೀತಿಯ ದಾಖಲೆ ಎಂದು ಖಾನ್ ಸರ್ ಹೇಳಿದ್ದಾರೆ.
ಖಾನ್ ಸರ್ ಅತ್ಯುತ್ತಮ ಗುರು. ಜೊತೆಗೆ ಉತ್ತಮ ಸಹೋದರ ಕೂಡ. ಅವರಿಗೆ ಜೀವನ ಪೂರ್ತಿ ರಾಖಿ ಕಟ್ಟಬೇಕೆಂದಿದ್ದೇವೆ ಎಂದು ಕೆಲವು ವಿದ್ಯಾರ್ಥಿನಿಯರು ಅಭಿಮಾನ ವ್ಯಕ್ತಪಡಿಸಿದರು. ಸದ್ಯ ಖಾನ್ ಸರ್ ಕೈಗೆ ಕಟ್ಟಿರುವ ರಾಖಿ ಚಿತ್ರ ವೈರಲ್ ಆಗಿದೆ.