
ಅಡುಗೆ ಅನಿಲದ ಬೆಲೆ ಇಳಿಕೆ ಚುನಾವಣಾ ಗಿಮಿಕ್ ಎಂದ ಜಗದೀಶ್ ಶೆಟ್ಟರ್ – ಬಿಜೆಪಿ ಯಾಮಾರಿಸುತ್ತಿದೆ ಎಂದ ಹಳೆ ಬಿಜೆಪಿಗ..!!
- ರಾಜಕೀಯ
- August 30, 2023
- No Comment
- 41
ನ್ಯೂಸ್ ಆ್ಯರೋ : ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಬೆಲೆಯನ್ನು ಕೇಂದ್ರ ಸರಕಾರ ಇಳಿಸಿದ್ದು, ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಇದು ಚುನಾವಣೆ ಗಿಮಿಕ್ ಎಂದು ಟೀಕಿಸಿದ್ದಾರೆ.
ಯಾಮಾರಿಸುತ್ತಿದೆ ಬಿಜೆಪಿ
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರಕಾರ ಅಡುಗೆ ಅನಿಲದ ಬೆಲೆ ಇಳಿಕೆ ಮಾಡಿ ಜನರನ್ನು ಯಾಮಾರಿಸುತ್ತಿದೆ ಎಂದಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 9 ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಜನರ ಮೇಲೆ ಕಾಳಜಿ ಇದ್ದರೆ ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಅಗತ್ಯವೇನಿತ್ತು? 1,000 ರೂ. ಏರಿಕೆ ಮಾಡಿ 200 ರೂ. ಇಳಿಸಿದ್ದಾರೆ. ಅಷ್ಟೊಂದು ಕಾಳಜಿ ಇದ್ದಿದ್ದರೆ 600-800 ರೂ. ಇಳಿಕೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಅಡುಗೆ ಅನಿಲದ ಬೆಲೆ ಇಳಿಕೆ ಮತ್ತು ಕೆಲವು ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಯ ವಾತಾವರಣ ಗಮನಿಸಿದರೆ ಡಿಸೆಂಬರ್ ನಲ್ಲಿಯೇ ಲೋಕಸಭಾ ಚುನಾವಣೆ ನಡೆಯಬಹುದು. ಒಂದೆಡೆ ಮೋದಿ ಉಚಿತ ಯೋಜನೆ ಕೊಡಬೇಡಿ ಎನ್ನುತ್ತಾರೆ. ಇನ್ನೊಂದೆಡೆ ಮಧ್ಯಪ್ರದೇಶದಲ್ಲಿ ಬಿಜೆಪಿ ಉಚಿತ ಯೋಜನೆ ಘೋಷಿಸುತ್ತದೆ. ಹೇಳುವುದು ಒಂದು, ಮಾಡುವುದು ಮತ್ತೊಂದು ಎಂದು ಶೆಟ್ಟರ್ ಟೀಕಿಸಿದರು.