Coastal Talent : ಚಂದ್ರಯಾನ 3 ಯಶಸ್ಸಿನಲ್ಲಿ ಕಡಬದ ಯುವಕನೂ ಭಾಗಿ – ಕರಾವಳಿಗೆ ಕೀರ್ತಿ ತಂದ ಕಡಬದ ಲೋಹಿತ್

Coastal Talent : ಚಂದ್ರಯಾನ 3 ಯಶಸ್ಸಿನಲ್ಲಿ ಕಡಬದ ಯುವಕನೂ ಭಾಗಿ – ಕರಾವಳಿಗೆ ಕೀರ್ತಿ ತಂದ ಕಡಬದ ಲೋಹಿತ್

ನ್ಯೂಸ್ ಆ್ಯರೋ‌ : ಕೋಟ್ಯಾಂತರ ಭಾರತೀಯರ ಕನಸು ನನಸಾಗಿಸಿ ನಿನ್ನೆ (ಆಗಸ್ಟ್ 23) ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಸುರಕ್ಷಿತವಾಗಿ ಕಾಲಿಟ್ಟಿದೆ. ಜುಲೈ 14ರಂದು ಉಡಾವಣೆ ಮಾಡಿದ್ದ ಇಸ್ರೋ ನಿನ್ನೆ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದೆ. ಈ ಯಶಸ್ಸಿನಲ್ಲಿ ಇಸ್ರೋ ಜೊತೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಿವಿಧ ಕಂಪೆನಿಗಳು ಕಾರ್ಯ ನಿರ್ವಹಿಸಿವೆ. ಅಂತಹ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸಿ ಚಂದ್ರಯಾನ -೩ ರ ಯಶಸ್ಸಿಗೆ ಕಾರಣೀಭೂತರಾದ ನಮ್ಮೂರಿನ ಪ್ರತಿಭೆಗಳನ್ನು ಹಾಗೂ ವಿಜ್ಞಾನಿಗಳನ್ನು ನಾವು ಪರಿಚಯಿಸುತ್ತಿದ್ದೇವೆ.

KHMD

ಚಂದ್ರಯಾನಕ್ಕೆ ನೆರವಾಗಿರುವ ಕಂಪನಿಗಳ ಪೈಕಿ ಕರ್ನಾಟಕ ಹೈಬ್ರಿಡ್ ಮೈಕ್ರೋ ಡಿವೈಸಸ್(KHMD) ಕಂಪೆನಿಯೂ ಒಂದು. ಸುಮಾರು ಒಂದೂವರೆ ದಶಕಗಳಿಂದ ಇಸ್ರೋ ಜೊತೆಗೆ ಈ ಕಂಪೆನಿ ಕೈ ಜೋಡಿಸಿದೆ. ಇಲ್ಲಿ ತಯಾರಾಗುವ ಹೈಬ್ರಿಡ್ ಮೈಕ್ರೋಎಲೆಕ್ಟ್ರೋನಿಕ್ಸ್ ಉಪಕರಣಗಳನ್ನು ಇಸ್ರೋದ ಚಂದ್ರಯಾನ-3 ಸೇರಿದಂತೆ ಬಹುತೇಕ ಎಲ್ಲಾ ಬಾಹ್ಯಾಕಾಶ ನೌಕೆಯಲ್ಲಿ ಬಳಸಲಾಗುತ್ತದೆ.

KHMD ಕಂಪೆನಿ ಲ್ಯಾಂಡರ್ ಪೇಲೋಡ್, ಸಂಕೀರ್ಣವಾದ, ದೊಡ್ಡ ಹೈಬ್ರಿಡ್ ಮೈಕ್ರೋ ಸಕ್ರ್ಯೂಟ್ ಪ್ಯಾಕೇಜ್ ಅನ್ನು ಪರಿಶೋಧಿಸುತ್ತದೆ. KHMD ಈ ತಂಡದಲ್ಲಿ ಕೆಲಸ ಮಾಡಿದವರಲ್ಲಿ ಕಡಬದ ಯುವಕ ಲೋಹಿತ್ ಎನ್ಕಾಜೆ ಕೂಡ ಒಬ್ಬರು.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಎನ್ಕಾಜೆ ನಾರಾಯಣ ಗೌಡ ಮತ್ತು ಸುಶೀಲ ರ ಪುತ್ರ ಲೋಹಿತ್ ಇಲ್ಲಿನ ಬೆಥನಿ ಪದವಿಪೂರ್ವ ಕಾಲೇಜಿನ ವ್ಯಾಸಂಗ ಮಾಡಿ ಬಳಿಕ ಕೆಲ ಕಾಲ ಬೆಂಗಳೂರಿನ ಕೆಲವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಮುಂದಕ್ಕೆ KHMD ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.

ಇಲ್ಲಿ ಇಸ್ರೋದ ಚಂದ್ರಯಾನ-3 ರಲ್ಲಿ ಬಳಸಿರುವ ಹೈಬ್ರಿಡ್ ಮೈಕ್ರೋ ಸರ್ಕ್ಯೂಟ್ ಪ್ಯಾಕೇಜ್ ಅನ್ನು KHMD ಅಭಿವೃದ್ಧಿ ಪಡಿಸಿದ ತಂಡದಲ್ಲಿ ನಮ್ಮ ಕರಾವಳಿಯ ಕಡಬದ ಯುವಕ ಲೋಹಿತ್ ಕೂಡ ಒಬ್ಬರು. ಈ ಮೂಲಕ ಭಾರತದ ಹೆಮ್ಮೆಯ ಚಂದ್ರಯಾನ – 3 ಯಶಸ್ಸಿನಲ್ಲಿ ನಮ್ಮೂರಿನ ಯುವಕ ಲೋಹಿತ್ ಕೂಡ ಭಾಗಿಯಾಗಿದ್ದು ನಮ್ಮ ಕರಾವಳಿಗೂ ಹೆಮ್ಮೆಯ ಸಂಗತಿ. ಇವರು ಮುಂದಕ್ಕೆ ಇನ್ನಷ್ಟು ಹೆಚ್ಚು ಸಾಧನೆ ಮಾಡುವಂತಾಗಲಿ ಎಂದು ಆಶಿಸೋಣ.

Related post

ವಿಕ್ರಮ್ ಲ್ಯಾಂಡರ್ ಇಳಿದ ಚಂದ್ರನ ಜಾಗಕ್ಕೆ “ಶಿವಶಕ್ತಿ ಪಾಯಿಂಟ್” ಎಂದು ಹೊಸ ‌ಹೆಸರು ಇಟ್ಟ ಮೋದಿ – ಆ.23 ಇನ್ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನ : ಪ್ರಧಾನಿ ಘೋಷಣೆ

ವಿಕ್ರಮ್ ಲ್ಯಾಂಡರ್ ಇಳಿದ ಚಂದ್ರನ ಜಾಗಕ್ಕೆ “ಶಿವಶಕ್ತಿ ಪಾಯಿಂಟ್” ಎಂದು ಹೊಸ…

ನ್ಯೂಸ್ ಆ್ಯರೋ‌ : ಚಂದ್ರಯಾನ-3 (Chandrayaan-3) ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ದಿನದ ನೆನಪಿಗಾಗಿ ಆ.23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ಮೋದಿ (Narendra…

Leave a Reply

Your email address will not be published. Required fields are marked *