ಬ್ಯಾಂಕ್ ಸಾಲ ಕಟ್ಟದ ಸನ್ನಿ ಡಿಯೋಲ್ ಮನೆ ಹರಾಜಿಗೆ – ‘ಗದರ್’ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹಿರಿಯ ನಟನಿಗೆ ಶಾಕ್..!

ಬ್ಯಾಂಕ್ ಸಾಲ ಕಟ್ಟದ ಸನ್ನಿ ಡಿಯೋಲ್ ಮನೆ ಹರಾಜಿಗೆ – ‘ಗದರ್’ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹಿರಿಯ ನಟನಿಗೆ ಶಾಕ್..!

ನ್ಯೂಸ್‌ ಆ್ಯರೋ : ಗದರ್ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ನಟ ಸನ್ನಿ ಡಿಯೋಲ್‌ ಅವರಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಸನ್ನಿ ಡಿಯೋಲ್​ ಅವರು ಬ್ಯಾಂಕ್​ ಒಂದರಲ್ಲಿ ಪಡೆದುಕೊಂಡಿರುವ ಸಾಲವನ್ನು ಮರುಪಾವತಿಸಿಲ್ಲ ಎನ್ನಲಾಗಿದ್ದು, ಆದ್ದರಿಂದ ಸನ್ನಿ ಡಿಯೋಲ್ ಅವರ ಮುಂಬೈ ವಿಲ್ಲಾವನ್ನು ಬ್ಯಾಂಕ್ ಆಫ್ ಬರೋಡಾ ಹರಾಜಿಗೆ ಹಾಕಿದೆ ಎಂದು ವರದಿ ಮಾಡಲಾಗಿದೆ.

56 ಕೋಟಿ ಲೋನ್ ಹಾಗೂ ಅದರ ಬಡ್ಡಿಯನ್ನು ಪಾವತಿಸದ ಕಾರಣ ಮುಂಬೈನ ಜುಹುವಿನಲ್ಲಿರುವ ಮನೆಯನ್ನು ಹರಾಜಿಗೆ ಹಾಕಿದೆ. ಸೆಪ್ಟೆಂಬರ್ 25ರಂದು ಇದರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಸದ್ಯ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ‘ಗದರ್: ಏಕ್ ಪ್ರೇಮ್ ಕಥಾ’ ಸೀಕ್ವೆಲ್​ ಇದೇ 11 ರಂದು ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸಿದೆ. ಇಲ್ಲಿಯವರೆಗೆ, ಭಾರತದಲ್ಲಿ ಒಟ್ಟು 336.13 ಕೋಟಿ ರೂಪಾಯಿ ಮತ್ತು ವಿಶ್ವದಾದ್ಯಂತ 395.1 ಕೋಟಿ ರೂಪಾಯಿಗಳನ್ನು ಚಿತ್ರ ಕಲೆಕ್ಷನ್ ಮಾಡಿದೆ. ಎರಡನೇ ವೀಕೆಂಡ್​ನಲ್ಲೂ ಈ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದ್ದು, ಇನ್ನೂ ಒಂದಷ್ಟು ದಿನಗಳ ಕಾಲ ಈ ಚಿತ್ರದ ಹವಾ ಮುಂದುವರಿಯಲಿದೆ.

ಇದೀಗ ಸನ್ನಿ ಡಿಯೋಲ್‌ ಅವರಿಗೆ ಸಂಕಷ್ಟ ಎದುರಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಸನ್ನಿ ಡಿಯೋಲ್ ಅವರ ಪ್ರತಿನಿಧಿ, “ನಾವು ಈ ಸಮಸ್ಯೆಯನ್ನು ಪರಿಹರಿಸುವ ಪ್ರಕ್ರಿಯೆಯಲ್ಲಿದ್ದೇವೆ ಮತ್ತು ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.

ಚಿತ್ರ ಗದರ್ 2 ಕಳೆದ ವಾರ ಬಿಡುಗಡೆಯಾದಾಗಿನಿಂದ ಈಗಾಗಲೇ ₹ 300 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿದೆ. ಆದರೆ ಡಿಸೆಂಬರ್ 2022 ರಿಂದ ಬ್ಯಾಂಕ್‌ನಿಂದ ₹ 55.99 ಕೋಟಿ ಸಾಲ ಮತ್ತು ಬಡ್ಡಿ ಮತ್ತು ದಂಡವನ್ನು ಪಾವತಿಸಲು ಸನ್ನಿ ಡಿಯೋಲ್ ವಿಫಲವಾಗಿದ್ದಾರೆಂದು ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಸಾಲದಾತರು ಭಾನುವಾರ ಸಾರ್ವಜನಿಕ ಟೆಂಡರ್‌ನಲ್ಲಿ ಹೇಳಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *