ಗಮ್ಯದತ್ತ ಸಾಗುತ್ತಿದೆ ಚಂದ್ರಯಾನ-3 – ಚಂದ್ರನ ಮೇಲೆ ರೋವರ್ ಕಾಲಿಡೋದು ಯಾವಾಗ ಗೊತ್ತೆ?

ಗಮ್ಯದತ್ತ ಸಾಗುತ್ತಿದೆ ಚಂದ್ರಯಾನ-3 – ಚಂದ್ರನ ಮೇಲೆ ರೋವರ್ ಕಾಲಿಡೋದು ಯಾವಾಗ ಗೊತ್ತೆ?

ನ್ಯೂಸ್ ಆ್ಯರೋ‌ : ಜುಲೈ 14ರಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಚಂದ್ರಯಾನ-3 ಬಾಹ್ಯಾಕಾಶ ನೌಕೆ ತನ್ನ ಗಮ್ಯದತ್ತ ಸಾಗುತ್ತಿದೆ. ಸದ್ಯ ಇಸ್ರೋ ಬಾಹ್ಯಾಕಾಶ ನೌಕೆಯ ಮಾಹಿತಿಯನ್ನು ಕಲೆ ಹಾಕುತ್ತಿದೆ.

ಇಸ್ರೋ ಹೇಳಿದ್ದೇನು?

ಚಂದ್ರಯಾನ-3 ಸದ್ಯ ಭೂಮಿಯ 5ನೇ ಕಕ್ಷೆಯಲ್ಲಿದ್ದು, ಭೂಮಿಯನ್ನು ಸುತ್ತುತ್ತಿದೆ. ನಿರೀಕ್ಷೆಯಂತೆ ಆಗಸ್ಟ್ 1ರಂದು ಚಂದ್ರನ ಕಡೆಗೆ ಪಯಣಿಸಲಿದೆ.

ಜುಲೈ 31 ಮತ್ತು ಆಗಸ್ಟ್ 1ರ ರಾತ್ರಿ ಚಂದ್ರಯಾನ-3 ಭೂಮಿಯ ಕಕ್ಷೆಯಿಂದ ನಿರ್ಗಮಿಸಿ ಚಂದ್ರ ಕಕ್ಷೆ ಸೇರಲಿದೆ. ಬಳಿಕ ಚಂದ್ರಯಾನ-3 ಆಗಸ್ಟ್ 23ರಂದು ಚಂದ್ರನ ಮೇಲ್ಮೈಗೆ ಇಳಿಯಲಿದೆ.

ಸುಮಾರು 40 ದಿನಗಳ ಬಳಿಕ ಚಂದ್ರಯಾನ-3 ಚಂದ್ರನನ್ನು ತಲುಪುತ್ತದೆ. ಹೀಗಾಗಿ ಇಸ್ರೋ ವಿಜ್ಞಾನಿಗಳು ಪ್ರತಿಯೊಂದು ಚಲನವಲನವನ್ನು ನಿರಂತರ ಗಮನ ಹರಿಸುತ್ತಿದ್ದಾರೆ.

Related post

ವಿಕ್ರಮ್ ಲ್ಯಾಂಡರ್ ಇಳಿದ ಚಂದ್ರನ ಜಾಗಕ್ಕೆ “ಶಿವಶಕ್ತಿ ಪಾಯಿಂಟ್” ಎಂದು ಹೊಸ ‌ಹೆಸರು ಇಟ್ಟ ಮೋದಿ – ಆ.23 ಇನ್ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನ : ಪ್ರಧಾನಿ ಘೋಷಣೆ

ವಿಕ್ರಮ್ ಲ್ಯಾಂಡರ್ ಇಳಿದ ಚಂದ್ರನ ಜಾಗಕ್ಕೆ “ಶಿವಶಕ್ತಿ ಪಾಯಿಂಟ್” ಎಂದು ಹೊಸ…

ನ್ಯೂಸ್ ಆ್ಯರೋ‌ : ಚಂದ್ರಯಾನ-3 (Chandrayaan-3) ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ದಿನದ ನೆನಪಿಗಾಗಿ ಆ.23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ಮೋದಿ (Narendra…

Leave a Reply

Your email address will not be published. Required fields are marked *