ಇನ್ಮುಂದೆ ರಷ್ಯಾದಲ್ಲಿ ಲಿಂಗತ್ವ ಬದಲಾವಣೆ ಮಾಡಿಕೊಳ್ಳುವಂತಿಲ್ಲ – ಮಹತ್ವದ ತೀರ್ಮಾನಕ್ಕೆ ಮುದ್ರೆ ಒತ್ತಿದ ಪುಟಿನ್

ಇನ್ಮುಂದೆ ರಷ್ಯಾದಲ್ಲಿ ಲಿಂಗತ್ವ ಬದಲಾವಣೆ ಮಾಡಿಕೊಳ್ಳುವಂತಿಲ್ಲ – ಮಹತ್ವದ ತೀರ್ಮಾನಕ್ಕೆ ಮುದ್ರೆ ಒತ್ತಿದ ಪುಟಿನ್

ನ್ಯೂಸ್ ಆ್ಯರೋ : ಇತ್ತೀಚೆಗಷ್ಟೇ ರಷ್ಯಾ ಉಕ್ರೇನ್ ದೇಶದ ಮೇಲೆ ನಿರಂತರ ದಾಳಿ ನಡೆಸಿ ಆಧುನಿಕ ಯುಗದ ಬಹುದೊಡ್ಡ ಯುದ್ಧಕ್ಕೆ ನಾಂದಿ ಹಾಡಿತ್ತು. ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌‌ ಪುಟಿನ್ ಸರ್ವಾಧಿಕಾರಿ ಧೋರಣೆಗೆ ಜಗತ್ತಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಯುದ್ಧದಿಂದ ರಷ್ಯಾ ಹಾಗೂ ಉಕ್ರೇನ್ ಸಾಕಷ್ಟು ನಷ್ಟ ಅನುಭವಿಸಿತ್ತು. ಇದೀಗ ಪುಟಿನ್ ಮಹತ್ವದ ತೀರ್ಮಾನಕ್ಕೆ ಬಂದಿದ್ದು, ಇನ್ಮುಂದೆ ರಷ್ಯಾದಲ್ಲಿ ಹೆಣ್ಣು ಗಂಡಾಗಿ, ಗಂಡು ಹೆಣ್ಣಾಗಿ ಬದಲಾಗುವಂತಿಲ್ಲ ಎಂದು ಆದೇಶಿಸಿದ್ದಾರೆ.

ರಷ್ಯಾದಲ್ಲಿ ಲಿಂಗ ಪರಿವರ್ತನೆ ಮಾಡಿಕೊಳ್ಳುವಂತಿಲ್ಲ!

ಲಿಂಗ ಪರಿವರ್ತನೆ ಎಂಬುದು ಸಾಕಷ್ಟು ದೇಶಗಳಲ್ಲಿ ಕಾನೂನಿನ ಅಧೀನದಲ್ಲಿ ನಡೆಯುತ್ತದೆ. ಆದರೆ ರಷ್ಯಾದಲ್ಲಿ ಈ ಲಿಂಗ ಪರಿವರ್ತನೆಗೆ ಇನ್ನು ಮುಂದೆ ಅವಕಾಶಗಳಿಲ್ಲ. ಈ ಮಹತ್ವದ ಕಾನೂನಿಗೆ ಪುಟಿನ್ ಸಹಿ ಹಾಕಿದ್ದಾರೆ. ಲಿಂಗ ಪರಿವರ್ತನೆಗೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆ ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆ. ಆದರೆ ಈ ಮಹತ್ವದ ಕಾನೂನಿನಲ್ಲಿ ಕೆಲವೊಂದು ವೈದ್ಯಕೀಯ ಶಸ್ತ್ರಚಿಕಿತ್ಸೆಗಳಿಗೆ ಅವಕಾಶ ನೀಡಲಾಗಿದೆ.

ಯಾವುದಕ್ಕೆ ಕಾನೂನು ನಿರ್ಬಂಧವಿಲ್ಲ?

ರಷ್ಯಾದಲ್ಲಿ ಇನ್ನು ಮುಂದೆ ಲಿಂಗ ಪರಿವರ್ತನೆ ಮಾಡಿಕೊಳ್ಳುವ ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ಅವಕಾಶವಿಲ್ಲ ಎಂಬ ಕಾನೂನು ರೂಪಿತವಾದರೂ ಕೂಡ ಕೆಲವೊಂದು ಚಿಕಿತ್ಸೆಗಳಿಗೆ ಅವಕಾಶ ನೀಡಲಾಗಿದೆ.
ಪ್ರಮುಖವಾಗಿ ಮಕ್ಕಳ ಅಸಮರ್ಪಕ ಬೆಳವಣಿಗೆ ಮತ್ತು ಜನ್ಮ ದೋಷಗಳನ್ನು ಪರಿಹರಿಸಲು ಬಳಸುವ ವೈದ್ಯಕೀಯ ವಿಧಾನಗಳಿಗೆ ನಿರ್ಬಂಧವು ಅನ್ವಯಿಸುವುದಿಲ್ಲ. ಹಾಗೆಯೇ ಲೈಂಗಿಕ ವ್ಯತ್ಯಾಸದ ಬಾಲ್ಯದ ಅಸ್ವಸ್ಥತೆಗಳಿಗೆ ಸಂಬಂಧಿಸಿದ ಆನುವಂಶಿಕ ಮತ್ತು ಅಂತಃಸ್ರಾವಕ ಸಮಸ್ಯೆಗಳಿಗೆ ಅನ್ವಯಿಸುವುದಿಲ್ಲ ಎಂದು ರಷ್ಯಾದ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಈ ಕಾನೂನಿನ ಉದ್ದೇಶವೇನು?

ರಷ್ಯಾ ಈ ನೂತನ ಕಾನೂನಿಗೆ ಮುದ್ರೆ ಒತ್ತಿದ ತಕ್ಷಣದಿಂದ ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಎಲ್ಲೆಡೆಯಿಂದ ಕೇಳಿ ಬರುತ್ತಿದೆ‌. ರಷ್ಯಾ ಸಮಾಜದ ಸಾಂವಿಧಾನಿಕ ನೈತಿಕ ತತ್ವಗಳು ಮತ್ತು ಕೌಟುಂಬಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು. ದೇಶದ ಜನರ ಆರೋಗ್ಯವನ್ನು, ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯವನ್ನು ಕಾಪಾಡುವು ಈ ಕಾನೂನಿನ ಮುಖ್ಯ ಉದ್ದೇಶ ಎಂದು ರಷ್ಯಾ ಆರೋಗ್ಯ ಸಚಿವಾಲಯ ತಿಳಿಸಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *