ವ್ಯಕ್ತಿಯೊಬ್ಬನ ಶರ್ಟಿನೊಳಗೆ ನುಗ್ಗಿದ ನಾಗರ ಹಾವು – ಮುಂದೇನಾಯ್ತು ಗೊತ್ತಾ? ಈ ವೈರಲ್ ವಿಡಿಯೋ ನೋಡಿ..

ವ್ಯಕ್ತಿಯೊಬ್ಬನ ಶರ್ಟಿನೊಳಗೆ ನುಗ್ಗಿದ ನಾಗರ ಹಾವು – ಮುಂದೇನಾಯ್ತು ಗೊತ್ತಾ? ಈ ವೈರಲ್ ವಿಡಿಯೋ ನೋಡಿ..

ನ್ಯೂಸ್ ಆ್ಯರೋ : ಹಾವುಗಳು ಅಂದ್ರೆ ಯಾರಿಗೆ ಭಯ ಇಲ್ಲ ಹೇಳಿ. 20 ಅಡಿ ದೂರದಲ್ಲಿ ಯಾವುದಾದರೂ ಹಾವು ಕಾಣಿಸಿಕೊಂಡರೂ ನಾವು ಭಯದಿಂದ ಮಾರುದ್ದ ಹಾರುತ್ತೇವೆ. ಹೀಗಿರುವಾಗ ನಾವು ತೊಟ್ಟಿರುವ ಬಟ್ಟೆಯೊಳಗೆ ಹಾವು ನುಸುಳಿದರೆ ನಮ್ಮ ಪರಿಸ್ಥಿತಿ ಏನಾಗಬಹುದು. ಆದರೆ ಇಂಥಹದ್ದೊಂದು ಘಟನೆ ನಿಜವಾಗಿಯೂ ನಡೆದಿದೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಉದ್ಯಾನವನದ ಮರವೊಂದರ ಕೆಳಗೆ ವ್ಯಕ್ತಿಯೊಬ್ಬ ಮಲಗಿದ್ದಾಗ ಆತನ ಶರ್ಟಿನೊಳಗೆ ನಾಗರ ಹಾವೊಂದು ನುಸುಳಿದೆ. ಮುಂದೇನಾಯ್ತು ಎಂದು ತಿಳಿಯುವುದಕ್ಕೆ ನೀವು ಈ ವಿಡಿಯೋ ನೋಡಲೇಬೇಕು.

ಶರ್ಟ್ ಒಳಗೆ ಹಾವು ನುಸುಳಿದ್ದು ಹೇಗೆ?

ಈ ಅಚ್ಚರಿಯ ಘಟನೆ ನಡೆದದ್ದು ಮಹಾರಾಷ್ಟ್ರದಲ್ಲಿ. ಅಲ್ಲಿನ ಪಾರ್ಕಿನ ಮರವೊಂದರ ಕೆಳಗೆ ವ್ಯಕ್ತಿಯೊಬ್ಬ ವಿಶ್ರಾಂತಿಗಾಗಿ ಕುಳಿತಿದ್ದ. ಹೀಗೆ ಕುಳಿತಿದ್ದ ವ್ಯಕ್ತಿ ಯಾವ ಲೋಕದಲ್ಲಿದ್ದನೋ ಏನೋ. ಅದೇ ವೇಳೆಗೆ ನಾಗರ ಹಾವೊಂದು ಸೈಲೆಂಟ್ ಆಗಿ ಆತನ ಶರ್ಟಿನೊಳಗೆ ನುಸುಳಿದೆ. ಆದರೆ ಆ ವ್ಯಕ್ತಿಗೆ ಮಾತ್ರ ತನ್ನ ಶರ್ಟ್ ಒಳಗೆ ಹಾವು ನುಸುಳಿದ ಸಂಗತಿಯೇ ತಿಳಿಯಲಿಲ್ಲ. ಆದರೆ ಪಾರ್ಕಿನಲ್ಲಿದ್ದ ಕೆಲವರು ಇದನ್ನು ನೋಡಿದ್ದಾರೆ. ಆಗ ಹಾವು ನುಸುಳಿರುವುದು ತಿಳಿದ ವ್ಯಕ್ತಿಯ ಪರಿಸ್ಥಿತಿ ಹೇಗಾಗಿರಬೇಡ ಯೋಚಿಸಿ.

ಶರ್ಟ್ ಒಳಗಿಂದ ಹಾವು ಹೊರಬಂದಿದ್ದು ಹೇಗೆ?

ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ವ್ಯಕ್ತಿಯ‌ ಶರ್ಟ್ ಒಳಗೆ ಹಾವು ಹೋಗಿರುವುದನ್ನು ಅಲ್ಲಿದ್ದ ಕೆಲವರು ನೋಡಿ ಆತನಿಗೆ ವಿಚಾರ ತಿಳಿಸಿದ್ದಾರೆ. ಆ ನಂತರ ನಿಧಾನವಾಗಿ ಆತನ ಶರ್ಟ್ ಬಟನ್ ಗಳನ್ನು ತೆಗೆದಿದ್ದಾರೆ. ಈ ವೇಳೆ ಹಾವು ಆತನ ಶರ್ಟಿನೊಳಗೆ ದೇಹದ ಸುತ್ತ ಹರಿದಾಡಿದೆ. ಹೀಗೆ ಒಂದೊಂದೆ ಬಟನ್ ಗಳನ್ನು ತೆಗೆದ ನಂತರ ಹಾವು ನಿಧಾನವಾಗಿ ತನ್ನ ದೇಹವನ್ನು ಹೊರ ಹಾಕಿ ಅಂತಿಮವಾಗಿ ಹಾವು ಶರ್ಟ್ ನಿಂದ ಹೊರ ಬಂದಿದೆ.

ತಪ್ಪಿದ ಅನಾಹುತ?

ಹಾವುಗಳಲ್ಲಿ ವಿಷಕಾರಿ ಹಾವುಗಳಂದರೆ ತುಸು ಎಚ್ಚರಿಕೆಯಿಂದ ಇರಬೇಕು. ಯಾವುದೇ ಕ್ಷಣದಲ್ಲೂ ಅವುಗಳು ದಾಳಿ ನಡೆಸುವ ಸಾಧ್ಯತೆಗಳಿವೆ. ಆದರೆ ಈ ಘಟನೆಯಲ್ಲಿ ಹಾವು ತನ್ನ ಶರ್ಟಿನೊಳಗೆ ನುಸುಳಿದ್ದರೂ ಆ ವ್ಯಕ್ತಿಗೆ ಭಯವಾಗಿದ್ದರೂ ಕೂಡ, ಹಾವು ಹೊರ ಬರುವ ತನಕ ತಾಳ್ಮೆಯಿಂದ ಕುಳಿತಿದ್ದಾನೆ. ಇದರಿಂದ ಹಾವು ಕೂಡ ಸೈಲೆಂಟ್ ಆಗಿ ಹೊರ ಬಂದಿದೆ. ಈ ವೈರಲ್ ವಿಡಿಯೋ ಕಂಡವರು ವ್ಯಕ್ತಿಯ ತಾಳ್ಮೆಯನ್ನು ಕಂಡು ಕೊಂಡಾಡಿದ್ದಾರೆ. ಅಂತೂ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *