Fact Check : ಮದುವೆ ಸಂದರ್ಭದಲ್ಲಿ ಮಗಳಿಗೆ 70 ಕೆಜಿ ಚಿನ್ನ ನೀಡಿದ ತಂದೆ – ವೈರಲ್ ಸುದ್ದಿಯ ಅಸಲಿಯತ್ತೇನು?

Fact Check : ಮದುವೆ ಸಂದರ್ಭದಲ್ಲಿ ಮಗಳಿಗೆ 70 ಕೆಜಿ ಚಿನ್ನ ನೀಡಿದ ತಂದೆ – ವೈರಲ್ ಸುದ್ದಿಯ ಅಸಲಿಯತ್ತೇನು?

ನ್ಯೂಸ್ ಆ್ಯರೋ‌ : ಕೆಲವೊಂದು ಮದುವೆ ಸಮಾರಂಭಗಳು ಜನರ ಗಮನ ಸೆಳೆಯುತ್ತವೆ. ಅಂತಹ ಅದ್ಧೂರಿ ವಿವಾಹವೊಂದು ಈಗ ವೈರಲ್ ಆಗಿ ಇಂಟರ್ ನೆಟ್ ನಲ್ಲಿ ಧೂಳೆಬ್ಬಿಸಿದೆ. ದುಬೈಯಲ್ಲಿ ನಡೆದ ಪಾಕಿಸ್ತಾನಿ ಕುಟುಂಬದ ಮದುವೆ ಇದಾಗಿದ್ದು, ವಧುವಿನ ತಂದೆ 70 ಕೆಜಿ ಚಿನ್ನವನ್ನು ವಧುವಿಗೆ ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ವೈರಲ್

ಮದುವೆ ಸಂದರ್ಭದಲ್ಲಿ ಮಗಳನ್ನು ತಕ್ಕಡಿಯ ಒಂದು ಕಡೆಯಲ್ಲಿ ಕೂರಿಸಿದ ತಂದೆ ಇನ್ನೊಂದು ಕಡೆ ಆಕೆಯ ಭಾರಕ್ಕೆ ತಕ್ಕಷ್ಟು ಚಿನ್ನವನ್ನು ಇಟ್ಟು ತೂಗಿದ್ದಾರೆ. ಅದರಂತೆ ಮಗಳ ಭಾರಕ್ಕೆ ತಕ್ಕಂತೆ 70 ಕೆಜಿ ಚಿನ್ನವನ್ನು ಆಕೆಗೆ ನೀಡಿದ್ದಾರೆ. ತಕ್ಕಡಿಯಲ್ಲಿ ವಧು ಕುಳಿತಿರುವ ಮತ್ತು ಚಿನ್ನ ಇರುವ ಫೋಟೋ ವೈರಲ್ ಆಗಿದೆ.

ಈ ಅದ್ದೂರಿ ಮದುವೆ ಅನೇಕ ಆಕ್ರೋಶಕ್ಕೂ ಕಾರಣವಾಗಿದೆ. ಮದುವೆ ನೆಪದಲ್ಲಿ ದುಂದುವೆಚ್ಚ ಮಾಡುವ ಬದಲು ಬಡವರಿಗೆ ಹಂಚಬಹುದಿತ್ತು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಶೋಕಿ ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

ಇತ್ತ ಜನರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಧು ಪ್ರತಿಕ್ರಿಯಿಸಿದ್ದಾಳೆ. ಬಾಲಿವುಡ್ ಚಿತ್ರ ಜೋಧಾ ಅಕ್ಬರ್ ನ ಥೀಮ್ ಅಳವಡಿಸಿಕೊಳ್ಳಲು ಚಿನ್ನದ ತೂಕದ ಆಚರಣೆ ಮಾಡಿದ್ದಾರಂತೆ. ಇದು ಚಿನ್ನವೇ ಅಲ್ಲ. ಬರೀ ಚಿನ್ನದ ಲೇಪನವಷ್ಟೇ ಎಂದು ಸಮಜಾಯಿಷಿ ನೀಡಿದ್ದಾಳೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *