ಮುಲಾಮಿನ ಟ್ಯೂಬ್ ನ ಮುಚ್ಚಳದ ಮೇಲೆ ಚೂಪಾದ ಭಾಗವಿರೋದು ಯಾಕೆ? – ಸಿಂಪಲ್ ಆದ್ರೂ ಈ ವಿಷ್ಯ ನಿಮ್ಗೆ ಗೊತ್ತಿದ್ಯಾ?

ಮುಲಾಮಿನ ಟ್ಯೂಬ್ ನ ಮುಚ್ಚಳದ ಮೇಲೆ ಚೂಪಾದ ಭಾಗವಿರೋದು ಯಾಕೆ? – ಸಿಂಪಲ್ ಆದ್ರೂ ಈ ವಿಷ್ಯ ನಿಮ್ಗೆ ಗೊತ್ತಿದ್ಯಾ?

ನ್ಯೂಸ್ ಆ್ಯರೋ‌ : ಕೆಲವೊಂದು ಉತ್ಪನ್ನಗಳಲ್ಲಿ ಆ ಉತ್ಪನ್ನಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಉಲ್ಲೇಖಿಸಲಾಗುತ್ತದೆ. ಬೆಲೆ, ತಯಾರಾದ, ಬಾಳಿಕೆ ಅವಧಿ, ಉತ್ಪನ್ನ ತಯಾರಾದ ಸ್ಥಳ, ಕಂಪೆನಿ ವಿಳಾಸ, ಉತ್ಪನ್ನ ತಯಾರಿಸಲು ಬಳಸಿದ ವಸ್ತು ಹೀಗೆ ಎಲ್ಲಾ ಮಾಹಿತಿಯನ್ನು ಒಳಗೊಂಡಿರುತ್ತದೆ. ಕೆಲವೊಂದು ವಸ್ತು ಮಕ್ಕಳ ಕೈಗೆ ಸಿಗದಂತೆ ಇಡಿ, ಇದು ಬಾಹ್ಯ ಉಪಯೋಗಕ್ಕೆ ಮಾತ್ರ, ನಿರ್ದಿಷ್ಟ ಉಷ್ಣಾಂಶದಲ್ಲಿ ಸಂಗ್ರಹಿಸಿಡಿ ಹೀಗೆ ಉಪಯುಕ್ತ ಮಾಹಿತಿಯೂ ಇರುತ್ತದೆ. ಜೊತೆಗೆ ಹೇಗೆ ಬಳಸಬೇಕೆಂಬ ಮಾರ್ಗದರ್ಶನವನ್ನೂ ನೀಡಲಾಗುತ್ತದೆ.

ಟ್ಯೂಬ್ ಮುಚ್ಚಳದಲ್ಲಿ ಸೂಜಿ ಯಾಕಿರುತ್ತದೆ ಗೊತ್ತಾ?

ನೀವು ಮುಲಾಮ್, ಕ್ರೀಮ್ ನ ಮುಚ್ಚಳ ಗಮನಿಸಿದ್ದರೆ ಅದರ ಹೊರ ಭಾಗದ ಮಧ್ಯದಲ್ಲಿ ಸೂಜಿಯೊಂದನ್ನು ಗಮನಿಸಬಹುದು. ಅದು ಯಾಕೆಂದು ನಿಮಗೇನಾದರೂ ಗೊತ್ತೆ? ಇದನ್ನು ಹೇಗೆ ಉಪಯೋಗಿಸುವುದು ಎನ್ನುವುದರ ವಿವರವೂ ಇದರಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ತಿಳಿದಿದೆಯೇ? ಬಹುತೇಕರಿಗೆ ಗೊತ್ತಿಲ್ಲದ ಆ ಗುಟ್ಟನ್ನು ನಾವು ತಿಳಿಸುತ್ತೇವೆ.

ಮುಲಾಮ್ ಅಥವಾ ಕ್ರೀಮ್ ನ ಬಾಯಿ ತೆಳುವಾದ ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿರುತ್ತದೆ. ಕ್ರೀಮ್ ಹೊರ ತೆಗೆಯಲು ಆ ಮುಚ್ಚಳವನ್ನು ಹರಿಯಲೇ ಬೇಕು. ಹೀಗಾಗಿ ಈ ಸೀಲ್ ಅನ್ನು ಓಪನ್ ಮಾಡಲು ಕ್ಯಾಪ್ ನಲ್ಲೇ ಸೂಜಿಯಂತಹ ರಚನೆ ಇರುತ್ತದೆ.

ಸೀಲ್ ಹಾಕದಿದ್ದರೆ ಸಾಗಾಟ, ಸಂಗ್ರಹದ ವೇಳೆ ಸೋರಿಕೆಯಾಗುವ ಜೊತೆಗೆ ಗಾಳಿ ಹೋಗಿ ಔಷಧ ಹಾಳಾಗುವ ಸಾಧ್ಯತೆ ಇದೆ. ಇನ್ನು ಈ ಮುಚ್ಚಳದಲ್ಲಿರುವ ಸೂಜಿಯ ಉಪಯೋಗದ ಬಗ್ಗೆ ಟ್ಯೂಬ್ ನಲ್ಲೇ ಮಾಹಿತಿ ನೀಡಲಾಗುತ್ತದೆ. ಸೀಲ್ ಅನ್ನು ಕ್ಯಾಪ್ ನಲ್ಲಿರುವ ಸೂಜಿಯಿಂದ ಚುಚ್ಚಿ ಓಪನ್ ಮಾಡಿ ಎಂದು ಉಲ್ಲೇಖಿಸಲಾಗುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *