Drone Prathap : ಹಲವು ಯೂಟ್ಯೂಬರ್ ಗಳ ವಿರುದ್ಧ 30 ಲಕ್ಷ ಮಾನನಷ್ಟ ಮೊಕದ್ದಮೆ – ಕೇಸ್ ಹಾಕಲು ಪ್ರತಾಪ್ ನೀಡಿದ ಕಾರಣವೇನು‌ ಗೊತ್ತಾ?

Drone Prathap : ಹಲವು ಯೂಟ್ಯೂಬರ್ ಗಳ ವಿರುದ್ಧ 30 ಲಕ್ಷ ಮಾನನಷ್ಟ ಮೊಕದ್ದಮೆ – ಕೇಸ್ ಹಾಕಲು ಪ್ರತಾಪ್ ನೀಡಿದ ಕಾರಣವೇನು‌ ಗೊತ್ತಾ?

ನ್ಯೂಸ್ ಆ್ಯರೋ‌ : ಡ್ರೋನ್ ಪ್ರತಾಪ್ (Drone prathap) ಯಾರಿಗೆ ತಾನೇ ಗೊತ್ತಿಲ್ಲ? ವರ್ಷದ ಕೆಳಗೆ ಯುವ ವಿಜ್ಞಾನಿ, ಡ್ರೋನ್ ತಯಾರಿಸಿದ್ದೇನೆ, ವಿದೇಶ ಪ್ರವಾಸ ಮಾಡಿದ್ದೇನೆ ಎಂದು ಹೇಳಿ ಜನಪ್ರಿಯವಾಗಿದ್ದರು. ಬಳಿಕ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಇದೀಗ ಬಹಳ ದಿನಗಳ ಬಳಿಕ ಇನ್ಸ್ಟಾಗ್ರಾಮ್ ಲೈವ್ ಬಂದ ಪ್ರತಾಪ್ ಕೆಲವು ಯೂಟ್ಯೂಬ್ ಚಾನಲ್, ಕೆಲವೊಂದು ಮಾಧ್ಯಮಗಳ ವಿರುದ್ದ ಕಿಡಿಕಾರಿದ್ದಾರೆ. ತಮ್ಮ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ದ ದೂರು ದಾಖಲಿಸುವುದಾಗಿ (defamation case) ಎಚ್ಚರಿಸಿದ್ದಾರೆ.

ಪ್ರತಾಪ್ ಹೇಳಿದ್ದೇನು?

ಇತ್ತೀಚೆಗೆ ಪ್ರತಾಪ್ ಡ್ರೋನ್ ಗೆ ಪೂಜೆ ಮಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದರು. ‘ನಮ್ಮ ಡ್ರೋನಾರ್ಕ್ ಏರೋಸ್ಪೇಸ್ ಸಂಸ್ಥೆ ವತಿಯಿಂದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಾಳಗವಡಿ ಗ್ರಾಮದಲ್ಲಿ ಡ್ರೋನ್ ಯಾತ್ರೆ ಆರಂಭವಾಯಿತು’ ಎಂದು ಬರೆದುಕೊಂಡಿದ್ದರು. ಇದೀಗ ಲೈವ್ ಬಂದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಕೆಲವೊಂದು ಮಾಧ್ಯಮಗಳು ಮತ್ತು ಯೂಟ್ಯೂಬ್ ಚಾನಲ್ ಗಳು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿವೆ. ನಾನು ಸುಳ್ಳುಗಾರ ಎಂತೆಲ್ಲ ಹೇಳುತ್ತಿವೆ. ನನ್ನ ತಾಳ್ಮೆಗೂ ಮಿತಿ ಇದೆ. ಜನಪ್ರತಿನಿಧಿಗಳನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ ನನ್ನ ಪಾಡಿಗೆ ನಾನಿದ್ದರೂ ಇಲ್ಲಸಲ್ಲದ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಮಧು (Name is madhu) ಎಂಬ ಯೂ ಟ್ಯೂಬರ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ” ಎಂದಿದ್ದಾರೆ.

30 ಲಕ್ಷ ರೂ. ಮಾನನಷ್ಟ

”ನನ್ನ ಕಂಪೆನಿಯ ಪ್ರತಿಷ್ಠೆ ಹಾಳು ಮಾಡಿದ್ದಕ್ಕೆ 10 ಲಕ್ಷ ರೂ., ಮಾನಸಿಕವಾಗಿ ಹಿಂಸೆ ಮಾಡಿದ್ದಕ್ಕೆ 10 ಲಕ್ಷ ರೂ., ಉದ್ಯಮ ನಷ್ಟ ಮಾಡಿದ್ದಕ್ಕೆ 10 ಲಕ್ಷ ರೂ. ಹೀಗೆ ಒಟ್ಟು 30 ಲಕ್ಷ ರೂ.ಗೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ. ಕೋರ್ಟ್ ನಲ್ಲಿ ಎಲ್ಲಾ ನಿರ್ದಾರ ಆಗುತ್ತದೆ” ಎಂದು ಸವಾಲು ಹಾಕಿದ್ದಾರೆ.

”ಯೂಟ್ಯೂಬರ್ ಸಂದೀಪ್ (Tech in kannada), ಉತ್ತರ ಕರ್ನಾಟಕದ ಉಡಾಳ್ (Udaal Pavvya) ಪವ್ಯಾ, ಖಾಸಗಿ ವಾಹಿನಿಯ ದಿವ್ಯಾ ವಸಂತ್ (Divya Vasantha) ಅವರ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ” ಎಂದು ಪ್ರತಾಪ್ ಹೇಳಿದ್ದಾರೆ. ಹಲವರು ಇವರಿಗೆ ಬೆಂಬಲ ಸೂಚಿಸಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *