ವಾಹನಗಳಿಗೆ ಅನಗತ್ಯ ಸ್ಟಿಕರ್ ಹಾಕಿದ್ರೆ ಲೈಸೆನ್ಸ್ ರದ್ದು; ಅಧಿಕಾರಿಗಳಿಂದ ಖಡಕ್ ವಾರ್ನಿಂಗ್…..!

Spread the love

ನ್ಯೂಸ್ ಆ್ಯರೋ :  ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಡಿ ಬಾಸ್ ಜೈಲು ಸೇರುತ್ತಿದ್ದಂತೆ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇದೀಗ ಅಭಿಮಾನಿಗಳ ಕ್ರೇಜ್ ಹೇಗಿದೆ ಅಂದ್ರೆ ವಾಹನಗಳ ಮೇಲೆಲ್ಲಾ ಡಿ ಬಾಸ್ ನ ಫೋಟೋ ಹಾಗೂ ಡೈಲಾಗ್ ನ ಬರಹಗಳನ್ನು ಸ್ಟಿಕ್ಕರಿಂಗ್ ಮಾಡಿಸುತ್ತಿದ್ದಾರೆ.

ಇದೀಗ ಇಂತಹ ಬರವಣಿಗೆಗಳು ವಾಹನಗಳಲ್ಲಿ ಹೆಚ್ಚಾಗಿ ಕಾಣುತ್ತಿದೆ. ಇದನ್ನು ಗಮನಿಸಿದ ಆರ್ ಟಿ ಓ ಹಾಗೂ ಪೊಲೀಸ್ ಇಲಾಖೆಯು ಟಾಂಟ್ ರೀತಿಯ ಬರವಣಿಗೆಗಳು ಅಥವಾ ಅನಗತ್ಯ ಸ್ಟಿಕರ್ ಗಳು ಗಾಡಿಯ ಮೇಲಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನ್ ಮಾಡಿದ್ದಾರೆ.

ಹೌದು, ನಟ ದರ್ಶನ್ ಜೈಲು ಸೇರಿದ ನಂತರ, ಡಿ ಬಾಸ್ ನ ಡೈಲಾಗ್, ಫೋಟೋ ಹಾಗೂ ಇನ್ನಿತರ ನಟರಿಗೆ ಟಾಂಗ್ ಕೊಡುವಂತಹ ಬರವಣಿಗೆಗಳು ವಾಹನಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿಂದೆ ದರ್ಶನ್ ಗೆ ಜೈಲಿನಲ್ಲಿ ಕೊಟ್ಟಿದ್ದ ಕೈದಿ ನಂಬರ್ ಅನ್ನು ಕೂಡ ಅಭಿಮಾನಿಗಳು ಟ್ರೆಂಡ್ ಮಾಡಿಕೊಂಡಿದ್ದರು.

ಇಲ್ಲಿವರೆಗೆ ನಂಬರ್ ಪ್ಲೇಟ್ ಬಗ್ಗೆ ಜಾಸ್ತಿ ಫೋಕಸ್ ಮಾಡ್ತಿದ್ವಿ. ಇನ್ನು ಮುಂದೆ ಅನಧಿಕೃತ ಬರಹ ಹಾಕಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ.  ಪದೇ ಪದೇ ಈ ತಪ್ಪು ಮಾಡಿದ್ರೇ ಲೈಸೆನ್ಸ್ ರದ್ದು  ಮಾಡುತ್ತೇವೆ ಎಂದು ಆರ್ ಟಿ ಓ ಅಧಿಕಾರಿಗಳು ಹೇಳಿದ್ದಾರೆ.

ಅಭಿಮಾನಿಗಳು ನಟರ ಪೋಟೋಗಳನ್ನು ವಾಹನಗಳ ಮೇಲೆ ಹಾಕೋದು, ಪ್ರಚೋದನಕಾರಿ ಬರವಣಿಗೆ ಅಥವಾ ಅನಗತ್ಯ ಸ್ಟಿಕರ್ ಗಳನ್ನು ಹಾಕಲು ಯಾವುದೇ ಅವಕಾಶವಿಲ್ಲ ಎನ್ನಲಾಗಿದೆ.

Leave a Comment

Leave a Reply

Your email address will not be published. Required fields are marked *