ಆರ್ಥಿಕ ಸಂಕಷ್ಟದಲ್ಲಿರುವ ಹಲವು ರಾಜ್ಯಗಳು; ಸಾಲಗಳ ಮೊತ್ತ ಕೇಳಿದ್ರೆ ಶಾಕ್ ಆಗ್ತೀರಾ….!?

Spread the love

ನ್ಯೂಸ್ ಆ್ಯರೋ : ದೇಶದ ಪ್ರಸ್ತುತ ಆರ್ಥಿಕ ವರ್ಷದಲ್ಲಿ  ಹೆಚ್ಚಿನ ಬಂಡವಾಳ ವಿನಿಯೋಗ ಮತ್ತು ಮಧ್ಯಮ ಆದಾಯದ ಬೆಳವಣಿಗೆಯಾಗುತ್ತಿದೆ. ಆದರೆ ದೇಶದ ಕೆಲವು ರಾಜ್ಯಗಳು ಸಾಲದ ಸುಳಿಗಳಲ್ಲಿ ಸಿಲುಕಿಕೊಂಡಿದೆ.

ಹೌದು, ಕೆಲವು ಸರ್ಕಾರಗಳು ಗ್ಯಾರೆಂಟಿ ಹಾಗೂ ಉಚಿತ ಸೌಲಭ್ಯಗಳನ್ನು ನೀಡುವ ಮೂಲಕ ರಾಜ್ಯದ ಆರ್ಥಿಕತೆಯನ್ನು ಸಾಲದ ಕೂಪಕ್ಕೆ ದೂಡಿದೆ. 2024ರ ಮಾರ್ಚ್ ನವರೆಗಿನ ಭಾರತದ ಎಲ್ಲಾ ರಾಜ್ಯ ಸರ್ಕಾರಗಳ ಒಟ್ಟು ಸಾಲ ಬರೋಬ್ಬರಿ 75 ಲಕ್ಷ ಕೋಟಿಯಷ್ಟಿದೆ ಎಂಬ ಶಾಕಿಂಗ್ ಮಾಹಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿದೆ.

ಅಲ್ಲದೇ, 2025ರ ಮಾರ್ಚ್ ವೇಳೆಗೆ ರಾಜ್ಯಗಳ ಈ ಸಾಲಗಳ ಮೊತ್ತವು  83.31 ಲಕ್ಷ ಕೋಟಿ ರೂಪಾಯಿಯವರೆಗೆ ತಲುಪುವ ಸಾಧ್ಯತೆಗಳಿವೆ ಎಂದು ಹೇಳಿದೆ. ತಮಿಳುನಾಡು ರಾಜ್ಯವು ಸಾಲದಲ್ಲಿ ಮೊದಲನೇ ಸ್ಥಾನದಲ್ಲಿದ್ದು, 8.34 ಲಕ್ಷ ಕೋಟಿ ಸಾಲದ ಹೊರೆಯನ್ನು ಹೊತ್ತಿದೆ. ಎರಡನೇ ಸ್ಥಾನದಲ್ಲಿ 7.69 ಲಕ್ಷ ಕೋಟಿ ಸಾಲದ ಮೂಲಕ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.

ಇದರಲ್ಲಿ ಕರ್ನಾಟಕವು 5.97 ಲಕ್ಷ ಕೋಟಿ ಸಾಲವನ್ನು ಹೊಂದಿ, 5ನೇ ಸ್ಥಾನದಲ್ಲಿದೆ. ರಾಜ್ಯಗಳು ಸಾಲದ ಸುಳಿಯಲ್ಲಿ ಸಿಲುಕಲು ಆದಾಯ ಕಡಿಮೆಯಿದ್ದು, ವೆಚ್ಚ ಮಾತ್ರ ದುಪ್ಪಟ್ಟು ಇರುವುದೇ ಮುಖ್ಯ ಕಾರಣ. ಈಗಂತೂ ಕೆಲವು ಪಕ್ಷಗಳು ಅಧಿಕಾರಕ್ಕಾಗಿ ಹಾಗೂ ಜನರನ್ನ ತಮ್ಮತ್ತ ಸೆಳೆಯಲು ಗ್ಯಾರಂಟಿ ಎಂಬ ಅಸ್ತ್ರವನ್ನು ಬಳಸಿಕೊಳ್ಳುತ್ತಿದೆ.

ಇದೀಗ ಅನೇಕ ರಾಜ್ಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅಧಿಕಾರಕ್ಕಾಗಿ ಕೆಲವು ಪಕ್ಷಗಳು ನೀಡಿದ ಉಚಿತ ಸೇವೆಗಳೇ ಇಂತಹ ದುಸ್ಥಿತಿಗೆ ಮುಖ್ಯ ಕಾರಣವಾಗಿದೆ ಎಂದು ಹಲವು ಆರ್ಥಿಕ ತಜ್ಞರು ದೂರಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!