Viral : ರಾಯಚೂರಿನ ಈ ದರ್ಗಾದಲ್ಲಿ ಮುಸ್ಲಿಂ ಧರ್ಮಗುರುಗಳ ಗೋರಿ ಉಸಿರಾಡುತ್ತಿದೆಯಂತೆ..!! – ವೈರಲ್ ಸುದ್ದಿ ಬೆನ್ನಲ್ಲೇ ದರ್ಗಾದತ್ತ ಭಕ್ತರ ದೌಡು..!

N6272753221724126353745183b472f8ffb293f6047ba6e5ef35142cef93f8bab4bde0206e4d8ce2bab189a
Spread the love

ನ್ಯೂಸ್ ‌ಆ್ಯರೋ‌ : ಇಸ್ಲಾಂ ಧರ್ಮಗುರುಗಳ ಗೋರಿಗಳು ಉಸಿರಾಡುತ್ತಿವೆ ಎಂಬ ಬಗ್ಗೆ ಭಾರೀ‌ ಸುದ್ದಿಯಾದ ಹಿನ್ನೆಲೆಯಲ್ಲಿ ಆ ಗೋರಿಗಳ ವೀಕ್ಷಣೆಗೆ ಸಾವಿರಾರು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿರುವ ಘಟನೆ ರಾಯಚೂರಿನ ಆನೆಹೊಸೂರು ಗ್ರಾಮದಿಂದ ವರದಿಯಾಗಿದೆ.

ಲಿಂಗಸ್ಗೂರು ತಾಲೂಕಿನ ಆನೆಹೊಸೂರು ಗ್ರಾಮದ ಸೈಯದ್ ಶಾ ನಸರುದ್ದೀನ್ ನಬಿರಾ ಖಾದ್ರಿ ದರ್ಗಾದಲ್ಲಿನ ಉರುಸ್ ಬಳಿಕ ಇಂಥದ್ದೊಂದು ಪವಾಡ ಸಂಭವಿಸಿದೆ ಎಂಬುದಾಗಿ ಜನರು ಹೇಳುತ್ತಿದ್ದಾರೆ. ನೂರಾರು ವರ್ಷಗಳ ಹಳೆ ಗೋರಿಗಳು ಉಸಿರಾಟ ನಡೆಸಿದಂತೆ ಅಲ್ಲಿಗೆ ಭೇಟಿ ನೀಡುತ್ತಿರುವ ಭಕ್ತರಿಗೆ ಭಾಸವಾಗುತ್ತಿದೆಯಂತೆ. ಅದರ ವಿಡಿಯೊಗಳು ಸಾರ್ವಜನಿಕವಾಗಿ ಹರಿದಾಡುತ್ತಿದೆ.

ಈ ನಬಿರಾ ಖಾದ್ರಿ ದರ್ಗಾದಲ್ಲಿ ಇತ್ತೀಚೆಗೆ ಉರುಸ್‌ ನಡೆದಿದ್ದು ಆ ಬಳಿಕ 40 ದಿನಗಳ ಕಾಲ ಜನರಿಗೆ ಇದೇ ಅನುಭವ ಉಂಟಾಗುತ್ತಿದೆ ಎಂದು ಹೇಳಲಾಗಿದೆ. ಅಲ್ಲಿರುವ ಒಟ್ಟು ಮೂರು ಗೋರಿಗಳು ಉಸಿರಾಟ ನಡೆಸಿದಂತೆ ಅನುಭವವಾಗುತ್ತಿದೆ ಎನ್ನಲಾಗುತ್ತಿದೆ.

ಗೋರಿಗಳು ಉಸಿರಾಟದಿಂದಾಗಿ ಅದರ ಮೇಲೆ ಹಾಕಿರುವ ಹೂವುಗಳು ಪುಟಿಯುತ್ತಿದೆ ಎಂದು ಭೇಟಿ ನೀಡಿದ ಭಕ್ತರು ಹೇಳಿದ್ದಾರೆ. ಸಂಜೆಯಿಂದ ಬೆಳಗಿನವರೆಗೂ ಮೂರು ಗೋರಿಗಳು ಉಸಿರಾಡಿದಂತೆ ಭಾಸವಾಗುತ್ತಿದೆ ಎಂದು ಭಕ್ತರು ನುಡಿದಿದ್ದಾರೆ. ಕೌತುಕಕಾರಿ ಘಟನೆಯನ್ನು ವೀಕ್ಷಿಸಲು ಸಾವಿರಾರು ಮಂದಿ ದರ್ಗಾಕ್ಕೆ ಭೇಟಿ ನೀಡುತ್ತಿದ್ದು, ಈ ದರ್ಗಾದಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ.

Leave a Comment

Leave a Reply

Your email address will not be published. Required fields are marked *