ಕುಂಭ ಮೇಳದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆ; ಸ್ನಾನಕ್ಕೆ ಯೋಗ್ಯವಲ್ಲ, ವೈದ್ಯರ ಎಚ್ಚರಿಕೆ

ನ್ಯೂಸ್ ಆ್ಯರೋ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಆಗಮಿಸಿ ಪವಿತ್ರ ಸ್ನಾನ ಮಾಡುತ್ತಿರುವ ಭಕ್ತರಿಗೆ ವೈದ್ಯರು ಎಚ್ಚರಿಕೆ ನೀಡಿದ್ದು, ಕುಂಭಮೇಳದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಇದು ಇದು ಸ್ನಾನಕ್ಕೆ ಯೋಗ್ಯವಲ್ಲ ಕುಡಿಯಬೇಡಿ ಎಂದು ಹೇಳಿದ್ದಾರೆ.
ಕುಂಭಮೇಳದ ಗಂಗಾ ನದಿಯಲ್ಲಿ ಮಲ ಬ್ಯಾಕ್ಟೀರಿಯಾದ ಬಗ್ಗೆ, ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದು, ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್‌ನ ಹಿರಿಯ ಸಲಹೆಗಾರರೊಬ್ಬರು, “ಕುಂಭದಿಂದ ಹಿಂತಿರುಗುತ್ತಿರುವ ಸಾಕಷ್ಟು ಜನರಲ್ಲಿ ನಾವು ಹಲವು ವೈದ್ಯಕೀಯ ಸಮಸ್ಯೆಗಳಿರುವುದನ್ನು ಗಮನಿಸುತ್ತಿದ್ದೇವೆ. ತುಂಬಾ ಜನರು ಇರುವ ಸ್ಥಳದಲ್ಲಿನ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಕುಂಭಮೇಳದಲ್ಲಿ ಈವರೆಗೂ 52 ಕೋಟಿಗೂ ಅಧಿಕ ಮಂದಿ ಸ್ನಾನ ಮಾಡಿದ್ದಾರೆ. ಇಷ್ಟು ಮಂದಿ ಸ್ನಾನ ಮಾಡುವ ಜಾಗದಲ್ಲಿ ಇದು ಸಂಭವಿಸುತ್ತದೆ ಎಂದು ನಾವು ಮೊದಲೇ ನಿರೀಕ್ಷಿಸಿದ್ದೆವು ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಕುಂಭಮೇಳಕ್ಕೆ ಆಗಮಿಸಿದ ಜನರ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಅಲ್ಲಿ ವೈದ್ಯಕೀಯ ಸಮಸ್ಯೆಗಳೊಂದಿಗೆ ಬರುವ ಜನರ ಸಂಖ್ಯೆ ತುಂಬಾ ಕಡಿಮೆ. ಆ ರೀತಿಯಲ್ಲಿ, ನಿಯಂತ್ರಣವು ತುಂಬಾ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಜನರು ಗ್ಯಾಸ್ಟ್ರೋಎಂಟರೈಟಿಸ್ಸ ಮಸ್ಯೆಗೆ ತುತ್ತಾಗುತ್ತಿದ್ದಾರೆ. ಅಲ್ಲಿ ಅವರಿಗೆ ಬೇದಿ, ವಾಂತಿಯಾಗುವ ಸಾಧ್ಯತೆ ಇರುತ್ತದೆ. ಇನ್ನು ಇದು ಸ್ನಾನಕ್ಕೆ ಯೋಗ್ಯವಲ್ಲ ಎಂದು ಸ್ವತಃ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಗಂಗಾ ನದಿಯ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇವೆ. ನೀರಿನ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ ಸ್ನಾನಕ್ಕೆ ಯೋಗ್ಯವಾಗಿಲ್ಲ. ಕುಂಭಮೇಳದಲ್ಲಿ ಕೋಟಿಗಟ್ಟಲೆ ಜನರು ಸ್ನಾನ ಮಾಡುವುದರಿಂದ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಹೆಚ್ಚಾಗುತ್ತೆ ಎಂದು ವರದಿಯಲ್ಲಿ ಹೇಳಲಾಗಿದೆ.
ಧಾರ್ಮಿಕ ಸಮ್ಮೇಳನದ ವೇಳೆ ಗಂಗಾ ನದಿ ನೀರಿನ ಗುಣಮಟ್ಟ ಕಾಪಾಡಲು ಹಿಂದಿನಿಂದಲೂ ಎನ್‌ಜಿಟಿ ಸೂಚನೆ ನೀಡಿತ್ತು. ನೀರಿನ ಗುಣಮಟ್ಟ, ತ್ಯಾಜ್ಯ ನೀರಿನ ಶುದ್ದೀಕರಣ, ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಕೇಳಿದೆ. ನಾಳಿನ ವಿಚಾರಣೆಗೆ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಹಾಜರಿಗೆ ಸಮನ್ಸ್ ನೀಡಲಾಗಿದೆ.
Leave a Comment