ಇಂದು ಗ್ರ್ಯಾಂಡ್ ಆಗಿ iPhone SE4 ಲಾಂಚ್; ಕಡಿಮೆ ಬೆಲೆಗೆ ಸಿಗುತ್ತೆ ಈ ಫೋನ್

ನ್ಯೂಸ್ ಆ್ಯರೋ: 16 ಸೀರೀಸ್ ಬೆನ್ನಲ್ಲೇ ಐಫೋನ್ SE4 (iPhone SE4) ಬಿಡುಗಡೆಗೆ ಸಜ್ಜಾಗಿದೆ. ಇಂದು ಐಫೋನ್ SE4 ಲಾಂಚ್ ಆಗಲಿದ್ದು, ಇದು ಆ್ಯಪಲ್ ಪ್ರಿಯರಿಗಾಗಿ ಮಾಡಲಾದ ಮಿಡ್ ರೇಂಜ್ ಫೋನ್ ಆಗಿದೆ. ಸದ್ಯ ಹೊಸ ಐಫೋನ್ SE4 ಬರುವಿಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಲಾಂಚ್ಗೆ ಮುನ್ನವೇ ಮಹತ್ವದ ಮಾಹಿತಿ ಲೀಕ್ ಆಗಿದೆ.
ಐಫೋನ್ SE4 ಹಳೆಯ ಐಫೋನ್ SE3ಯಂತೆ ಒಂದೇ ಕ್ಯಾಮೆರಾ ಲೆನ್ಸ್ ಒಳಗೊಂಡಿದೆ. ಇದರ ಹೊರತಾಗಿ ಆ್ಯಪಲ್ ಮ್ಯೂಟ್ ಸ್ವಿಚ್ ಮತ್ತು ವ್ಯಾಲೂಮ್ ಬಟನ್ಗಳ ಸ್ಥಾನದಲ್ಲಿ ದೊಡ್ಡ ಬದಲಾವಣೆ ಮಾಡಲು ಹೋಗಲ್ಲ ಎಂದು ಸೂಚಿಸಿದೆ.
ಹೊಸ ಐಫೋನ್ SE4 ಕೊಂಚ ಗಾತ್ರದಲ್ಲಿ ದೊಡ್ಡದಿರಬಹುದು ಎಂದು ಹೇಳಲಾಗುತ್ತಿದೆ. ಮಾರ್ಚ್ 2025ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಐಫೋನ್ SE3ಗೆ ಹೋಲಿಸಿದರೆ 4.7 ಇಂಚಿನ ಬದಲಾಗಿ 6.06 ಇಂಚಿನ ಓಎಲ್ಇಡಿ ಡಿಸ್ಪ್ಲೇಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.
ಅದರಂತೆ iPhone SE4 ಬೆಲೆ 499 ಡಾಲರ್ ಎಂದು ನಿರೀಕ್ಷಿಸಲಾಗುತ್ತಿದೆ. ಈ ಹಿಂದೆ ಬಿಡುಗಡೆಗೊಂಡ ಐಫೋನ್ SE3 ಬೆಲೆ 429 ಡಾಲರಷ್ಟಿತ್ತು. ಆದರೀಗ ಬಜೆಟ್ ಬೆಲೆಯ ಹೊಸ ಐಫೋನ್ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.
ಐಫೋನ್ SE4 ಯುಎಸ್ಬಿ ಸಿ ಪೋರ್ಟ್ ಅನ್ನು ಹೊಂದಲಿರುವ ಮೊದಲ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ಆಗಿರಲಿದೆ. ಇನ್ನು ಆ್ಯಪಲ್ ಇಂಟೆಲೆಜೆನ್ಸ್ ಕಾರ್ಯನಿರ್ವಹಿಸಲು 8ಜಿಬಿ ರ್ಯಾಮ್ ಅವಶ್ಯಕವಾಗಿದೆ.
Leave a Comment