‘ರೋಬೋಟ್ ನಾಯಿ’ ಮಾಡಿದ ಎಡವಟ್ಟು; ತಪ್ಪಿಸಿಕೊಳ್ಳಲು ಪರದಾಡಿದ ಯೂಟ್ಯೂಬರ್…!

Spread the love

ನ್ಯೂಸ್ ಆ್ಯರೋ : ನಾಯಿಗಳು ಕಳ್ಳರನ್ನು ಕಂಡ ಕ್ಷಣ ಕಚ್ಚಲು ಹೋಗುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ರೋಬೋಟ್ ನಾಯಿ ಒಬ್ಬ ವ್ಯಕ್ತಿಯ ಮೇಲೆ ಬೆಂಕಿಯನ್ನು ಉಗುಳುವ ಮೂಲಕ ಅಟ್ಯಾಕ್ ಮಾಡಿದೆ

ಅಮೆರಿಕಾದ ಆನ್‌ಲೈನ್ ಸ್ಟ್ರೀಮರ್ ಶೋ ಸ್ಪೀಡ್ ಮೇಲೆ ರೋಬೋಟ್ ನಾಯಿಯೊಂದು ತನ್ನ ಬಾಯಿಂದ ಬೆಂಕಿಯನ್ನು ಎಸೆಯುವ ವಿಡಿಯೋವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ವೀಡಿಯೊದಲ್ಲಿ ಶೋ ಸ್ಪೀಡ್ ತನ್ನ ರೋಬೋಟ್ ನಾಯಿಗೆ ಕಿರು ಪರಿಚಯವನ್ನು ನೀಡುತ್ತಾರೆ.  ನಂತರ ರೋಬೋಟ್ ಗೆ ಬೊಗಳಲು ಸೂಚಿಸಿದಾಗ, ಅದು ಬೊಗಳುವ ಬದಲು ಬೆಂಕಿಯನ್ನು ಉಗುಳುತ್ತದೆ. ಮೊದಲಿಗೆ ಸ್ಪೀಡ್ ಬೆಂಕಿಯಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಾರೆ. ಆದರೆ ಎರಡನೇ ಬಾರಿಗೆ ಬೆಂಕಿಯಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ಇದ್ದ ಈಜುಕೊಳಕ್ಕೆ ಹಾರುತ್ತಾರೆ.

ಈ ಹಿಂದೆಯೇ ಶೋ ಸ್ಪೀಡ್ ತನ್ನ ರೋಬೋಟ್ ನಾಯಿಯನ್ನು ಸುಮಾರು 84 ಲಕ್ಷ ನೀಡಿ ಖರೀದಿಸಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದರು. ರೋಬೋಟ್ ನಾಯಿಯ ಈ ವಿಡಿಯೋ ಇದುವರೆಗೆ 4.5 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

Leave a Comment

Leave a Reply

Your email address will not be published. Required fields are marked *

error: Content is protected !!