JOB ALERT : ‘ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ’ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ ಅಪ್ಲೈ ಮಾಡಿ…
ನ್ಯೂಸ್ ಆ್ಯರೋ : ಏರ್ ಪೋರ್ಟ್ ನಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಗುಡ್ ನ್ಯೂಸ್. ಇದೀಗ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಜನರಲ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಒಟ್ಟು 840 ಜನರನ್ನು ನೇಮಕ ಮಾಡಲಾಗುತ್ತಿದೆ.
ಜನರಲ್ ಮ್ಯಾನೇಜರ್ 103, ಸೀನಿಯರ್ ಮ್ಯಾನೇಜರ್ 137, ಮ್ಯಾನೇಜರ್ 171, ಅಸಿಸ್ಟೆಂಟ್ ಮ್ಯಾನೇಜರ್ 214, ಜೂನಿಯರ್ ಎಕ್ಸಿಕ್ಯೂಟಿವ್ 215 ಹುದ್ದೆಗಳು ಖಾಲಿ ಇವೆ ಎಂದು ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ತಿಳಿಸಿದೆ.
ಡಿಗ್ರಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಅಭ್ಯರ್ಥಿಗಳಿಗೆ 18 ರಿಂದ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದ್ದು, ಈ ಯಾವುದೇ ಮೀಸಲಾತಿಗಳು ಅನ್ವಯಿಸುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ‘ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ’ ದ ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ. ಈ ಸಂದರ್ಭದಲ್ಲಿ ಅಗತ್ಯ ಪ್ರಮಾಣಪತ್ರಗಳನ್ನು ಅಪ್ಲೋಡ್ ಮಾಡಬೇಕು. ಅರ್ಜಿದಾರರು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
ಪರೀಕ್ಷೆ ನಡೆಸುವ ವಿಧಾನ:
150 ಅಂಕಗಳ 150 ಬಹು ಆಯ್ಕೆಯ ಪ್ರಶ್ನೆಗಳಿರುತ್ತದೆ. ಪರೀಕ್ಷಾ ಕಾಲಾವಧಿ 2 ಗಂಟೆ. ಸಾಮಾನ್ಯ ಜ್ಞಾನ ಮತ್ತು ರೀಸನಿಂಗ್ ನ 40 ಪ್ರಶ್ನೆಗಳು, ಜನರಲ್ ಅವೇರ್ನೆಸ್ ನ 35 ಪ್ರಶ್ನೆಗಳು, ಇಂಗ್ಲಿಷ್ ಭಾಷೆಯ 35 ಪ್ರಶ್ನೆಗಳು ಮತ್ತು ಆಪ್ಟಿಟ್ಯೂಡ್ ನ 40 ಪ್ರಶ್ನೆಗಳು ಇರಲಿವೆ.
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅವರ ರಾಜ್ಯದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸ್ ಆದವರನ್ನು ಸಂದರ್ಶನ ನಡೆಸಿ, ದಾಖಲೆಗಳ ಪರಿಶೀಲನೆಯ ನಂತರ ಉದ್ಯೋಗ ನೀಡಲಾಗುವುದು ಎಂದು
ಅಧಿಸೂಚನೆಯಲ್ಲಿ ತಿಳಿಸಿದೆ.
Leave a Comment