ಬೇಕರಿಯ ಸ್ವೀಟ್ ಮೇಲೆ ಓಡಾಡುತ್ತಿರುವ ಇಲಿರಾಯ: ಇಲ್ಲಿ‌ನ ಸಿಹಿ ತಿಂದ್ರೆ ನರಕ ಗ್ಯಾರಂಟಿ

Rats Seen Eating Sweets Inside
Spread the love

ನ್ಯೂಸ್ ಆ್ಯರೋ: ಬಾಯಲ್ಲಿ ಇಟ್ಟಾಗ ಕರಗುವ ಸ್ಟೀಟ್ ಯಾರಿಗೆ ಇಷ್ಟ ಇಲ್ಲ ಹೇಳಿ. ಆದ್ರೆ ಹೊರಗಡೆ ತಿನ್ನುವಾಗ ಒಂದು ಕ್ಷಣ ಅಲ್ಲಿನ ಸ್ವಚ್ಛತೆಯ ಬಗ್ಗೆ ಕಣ್ಣಾಡಿಸುವುದು ಅಗತ್ಯ. ಯಾಕೆಂದರೆ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್​​ ಆಗಿದ್ದು, ವಿಡಿಯೋ ಕಂಡು ನೆಟ್ಟಿಗರು ಶಾಕ್​ ಆಗಿದ್ದಾರೆ.

ಬೇಕರಿಯಲ್ಲಿ ಇರಿಸಲಾದ ಸ್ವೀಟ್ ಮೇಲೆ ಇಲಿಯೊಂದು ಮಸ್ತಾಗಿ ಓಡಾಡುತ್ತಿರುವ ವಿಡಿಯೋ ವೈರಲ್​​ ಆಗಿದೆ. ನವಭಾರತ್ ಟೈಮ್ಸ್ ಪೋಸ್ಟ್ ಮಾಡಿದ ಸುದ್ದಿ ವರದಿ ಮತ್ತು ವೀಡಿಯೋ ಪ್ರಕಾರ, ದೆಹಲಿಯ ಭಜನ್ಪುರ ಪ್ರದೇಶದ ಅಗರ್ವಾಲ್ ಸ್ವೀಟ್ಸ್ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

@GagandeepNews ಎಂಬ ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಗಾಜಿನ ಡಿಸ್ಪ್ಲೇ ಕೇಸ್‌ಗಳಲ್ಲಿ ಇಟ್ಟಿದ್ದ ಸಿಹಿತಿಂಡಿಗಳ ಮೇಲೆ ಇಲಿ ಓಡಾಡುತ್ತಿರುವುದನ್ನು ಕಾಣಬಹುದು.

ಸೋಶಿಯಲ್​ ಮೀಡಿಯಾ ಬಳಕೆದಾರರು ಬಗೆಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ. “ಇದು ಸಾಕು ಇಲಿ ಆಗಿರಬೇಕು” ಎಂದು ಒಬ್ಬರು ಬರೆದರೆ, ಮತ್ತೊಬ್ಬರು “ಇಲ್ಲಿನ ಸಿಹಿ ತಿಂದ್ರೆ ನರಕ ಗ್ಯಾರಂಟಿ” ಎಂದು ಬರೆದುಕೊಂಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!