ನಯಾ ಲುಕ್‌ನಲ್ಲಿ ಮತ್ತೆ ಧೂಳೆಬ್ಬಿಸಲು ಮಾರುಕಟ್ಟೆಗೆ ಬರಲು ಸಜ್ಜಾಗಿದೆ RX 100 – ಕಡಿಮೆ ಬೆಲೆ, ಬೆಂಕಿ ಫೀಚರ್ಸ್! ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..

IMG 20240911 WA0035
Spread the love

ನ್ಯೂಸ್ ಆ್ಯರೋ‌ : ಅದೆಷ್ಟೇ ವರ್ಷಗಳು ಕಳೆಯಲಿ, ಅದೆಷ್ಟೇ ತಲೆಮಾರುಗಳು ಅಳಿಯಲಿ ಭಾರತೀಯ ಬೈಕಿಂಗ್ ಇತಿಹಾಸದಲ್ಲಿ RX 100 ಬೈಕಿಗಿರುವ ಕ್ರೇಜ಼್ ಬೇರೆ ಯಾವ ಬೈಕಿಗೂ ಇಲ್ಲ. ಕೋಟ್ಯಾಂತರ ಬೆಲೆಯ, ಅತ್ಯಾಧುನಿಕ ಫೀಚರ್ಸ್ ಗಳಿರುವ ಬೈಕ್ ಗಳು ಮಾರುಕಟ್ಟೆಗೆ ಬಂದರೂ ಕೂಡ RX 100 ಬೈಕಿನ ಜನಪ್ರಿಯತೆಯನ್ನು ಕುಗ್ಗಿಸಲು ಸಾಧ್ಯವಿಲ್ಲ. ಒಂದು‌ ಕಾಲದಲ್ಲಿ ಭಾರತೀಯ ರಸ್ತೆಗಳನ್ನು ರೂಲ್ ಮಾಡಿದ ಈ ಬೈಕ್ ಆ ಬಳಿಕ ಮರೆಯಾಗಿ ಹೋಯ್ತು. ಆದರೆ ಇಂದಿಗೂ ಕೂಡ RX 100 ಬೈಕಿಗೆ ತನ್ನದೇ ಆದ ಬಹುದೊಡ್ಡ ಅಭಿಮಾನಿ‌ ವರ್ಗವಿದೆ.

ಇದೀಗ ಅದೇ RX 100 ವಾಹನೋದ್ಯಮದಲ್ಲಿ ಸಂಚಲನ ಸೃಷ್ಟಿಸಲು ರೆಡಿಯಾಗಿದೆ, ಹೊಸ ಲುಕ್ ನಲ್ಲಿ ಬರಲು ಸಜ್ಜಾಗಿ ನಿಂತಿದೆ. ಈ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಯಮಹಾ RX 100 ಮರೆಯಾಗಿದ್ದು ಯಾಕೆ?
ಯಮಹಾ ಕಂಪೆನಿಯು 1980 ರಲ್ಲಿ ಮಾರುಕಟ್ಟೆಗೆ ಪರಿಚಯಿಸಿದ ಪವರ್ ಫುಲ್ ಬೈಕ್ ಈ RX 100. ಬಹುಬೇಗ ಜನಪ್ರಿಯತೆ ಗಳಿಸಿದ ಈ ಬೈಕ್ ದಶಕಗಳ ಹಿಂದೆ ಭಾರತೀಯ ರಸ್ತೆಗಳನ್ನು ಅಕ್ಷರಶಃ ರೂಲ್ ಮಾಡಿತ್ತು. ತನ್ನ ವೇಗ, ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ಸವಾರಿ ಸಾಮರ್ಥ್ಯದಿಂದಾಗಿ ಈ‌ ಬೈಕ್ ಪಡ್ಡೆ ಹುಡುಗರ ಹಾಟ್ ಫೇವರೆಟ್ ಎನಿಸಿಕೊಂಡಿತ್ತು. ಆದರೆ 1990ರಲ್ಲಿ ಯಮಹಾ ಕಂಪೆನಿ ಏಕಾಏಕಿ ಈ ಸೂಪರ್ ಬೈಕ್ ಉತ್ಪಾದನೆಯನ್ನು ಕೈ ಬಿಟ್ಟಿತು. ಇದೀಗ ಮತ್ತೆ ದೇಶದೆಲ್ಲೆಡೆ RX100 ಬೈಕಿನ ಕ್ರೇಜ಼್ ಹೆಚ್ಚಾಗುವುದನ್ನು ಕಂಡು ಕಂಪೆನಿ‌ ಮತ್ತೆ ಈ ಬೈಕನ್ನು ಲಾಂಚ್ ಮಾಡಲು ಸಜ್ಜಾಗಿದೆ…!

ಹೇಗಿರಲಿದೆ ಹೊಸ RX 100?
ಸದ್ಯದ ಮಾಹಿತಿಯ ಪ್ರಕಾರ, ಮತ್ತೆ ವಾಹನೋದ್ಯಮದಲ್ಲಿ ಸಂಚಲನ ಸೃಷ್ಟಿಸಲು ರೆಡಿಯಾಗಿರುವ ಯಮಹಾ ಆರ್.ಎಕ್ಸ್ 100 ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರಲಿದೆ. ಅವುಗಳೆಂದರೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್‌ಲೈಟ್, ಟರ್ನ್-ಬೈ ಇಂಡಿಕೇಟರ್, ಎರಡೂ ಟೈರ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಅಲಾಯ್ ವೀಲ್ಸ್, ಯುಎಸ್‌ಬಿ ಪೋರ್ಟ್, ಚಾರ್ಜಿಂಗ್ ಪೋರ್ಟ್, ವೈರ್‌ಲೆಸ್ ಚಾರ್ಜಿಂಗ್ ಪೋರ್ಟ್ ಮತ್ತು ಇನ್ನೂ ಅನೇಕ ಆಧುನಿಕ ವೈಶಿಷ್ಟ್ಯಗಳನ್ನು ನೀವು ನೋಡಬಹುದು. ಈ ವಾಹನದ ನೋಟವು, ಮೊದಲಿಗಿಂತ ಅದ್ಭುತವಾದ ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಗಳಲ್ಲಿ ಕಂಗೊಳಿಸುವಂತೆ ಮಾಡಲಿದೆ.

ಬೆಲೆ ಮತ್ತು ಮೈಲೇಜ್ ಎಷ್ಟಿರಲಿದೆ?
ಇನ್ನುಳಿದಂತೆ ಮಾರುಕಟ್ಟೆಗೆ ಬರಲಿರುವ ಹೊಸಾ RX 100 ಬೈಕಿನ ಮೈಲೇಜ್ ಹಾಗೂ ಬೆಲೆಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ‌. ಮಾಹಿತಿಯ ಪ್ರಕಾರ, ಈ ಬೈಕ್ 35 ರಿಂದ 40 ಕಿಮೀ ಮೈಲೇಜ್ ನೀಡಲಿದೆ. ಜೊತೆಗೆ ಈ ವಾಹನದ ಬೆಲೆ 1.4 ಲಕ್ಷ ರೂನಿಂದ 1.5 ಲಕ್ಷ ರೂ.ವರೆಗೂ ಇರಬಹುದು ಎಂದು ಅಂದಾಜಿಸಲಾಗಿದೆ. 2024ರ ಅಂತ್ಯದ ವೇಳೆಗೆ ನಯಾ RX 100 ಬೈಕ್ ಭಾರತೀಯ ರಸ್ತೆಗಳಿಗೆ ಮತ್ತೆ ಲಗ್ಗೆ ಇಡಲಿದೆ ಎನ್ನಲಾಗಿದೆ.

Leave a Comment

Leave a Reply

Your email address will not be published. Required fields are marked *