ಕನ್ನಡತಿ ಸೀರಿಯಲ್ ನಟನ ಕಾರು ಅಪಘಾತ; ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿರಣ್ ರಾಜ್
ನ್ಯೂಸ್ ಆ್ಯರೋ : ಕನ್ನಡತಿ ಸೀರಿಯಲ್ ನ ಮೂಲಕವೇ ಮನೆಮತಾಗಿದ್ದ ನಟ ಕಿರಣ್ ರಾಜ್ ಅವರು ಸಂಚರಿಸುತ್ತಿದ್ದ ಕಾರು ಅಪಘಾತವಾಗಿದೆ. ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು, ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ನಡತಿ ಸೀರಿಯಲ್ ನ ಬಳಿಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ನಟ ಸದ್ಯ ರಾನಿ ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದರು. ಕಿರಣ್ ರಾಜ್ ‘ರಾನಿ’ ಚಿತ್ರದಲ್ಲಿ ನಟಿಸಿದ್ದು ಈ ಸಿನಿಮಾ ನಾಳೆ ರಿಲೀಸ್ ಆಗಲಿದೆ. ಸಿನಿ ಪರದೆಯಲ್ಲಿ ಹರ್ಷನನ್ನು ನೋಡಲು ಬಯಸಿದ ಅಭಿಮಾನಿಗಳಿಗೆ ಈ ಸುದ್ದಿಯು ಶಾಕ್ ಕೊಟ್ಟಿದೆ.
ಗುಟ್ಟಯ್ಯನ ಪಾಳ್ಯದ ಸಿದ್ದೇಶ್ವರ ನಿರಾಶ್ರಿತರ ಕೇಂದ್ರಕ್ಕೆ ಕಿರಣ್ ರಾಜ್ ತೆರಳುತ್ತಿದ್ದರು. ಪ್ರತಿವಾರ ಈ ಕೇಂದ್ರಕ್ಕೆ ತೆರಳಿ ಅನಾಥ ಮಕ್ಕಳಿಗೆ ಊಟ ನೀಡುತ್ತಿದ್ದರು. ಈ ಸಲುವಾಗಿ ನಿರಾಶ್ರಿತರ ಕೇಂದ್ರಕ್ಕೆ ತೆರಳುತ್ತಿದ್ದ ಅಪಘಾತ ಸಂಭವಿಸಿದೆ.
ಕಾರಿನಲ್ಲಿ ಕಿರಣ್ ರಾಜ್ ಜತೆ ರಾನಿ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕೂಡ ಇದ್ದರು. ಅವರು ಸೀಟ್ ಬೆಲ್ಟ್ ಧರಿಸಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಅವರನ್ನು ಕೆಂಗೇರಿ ಹತ್ತಿರದ ಬೆಂಗಳೂರು ಹಾಸ್ಪಿಟಲ್ ನ ತೀವ್ರ ನಿಘಾ ಘಟಕದಲ್ಲಿ ಇರಿಸಲಾಗಿದೆ.
ಗಿರೀಶ್ ಅವರು ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ರಸ್ತೆಗೆ ಅಡ್ಡಲಾಗಿ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ, ಕಾರು ಅಪಘಾತಕ್ಕೀಡಾಗಿದೆ. ಗುದ್ದಿದ ರಭಸಕ್ಕೆ ಕಾರಿನಿಂದ ಚಕ್ರ ಬೇರ್ಪಟ್ಟಿದೆ.
Leave a Comment