ವೈದ್ಯರ ಕನ್ನಡ ಔಷಧಿ ಚೀಟಿ ಕಂಡು ಕನ್ನಡಿಗರು ಖುಷ್…! ಎಲ್ಲರಿಗೂ ಮಾದರಿಯಾದ ಕನ್ನಡ ಡಾಕ್ಟರ್
ನ್ಯೂಸ್ ಆ್ಯರೋ : ವೈದ್ಯರು ಬರೆಯುವ ಔಷಧೀಯ ಚೀಟಿಯನ್ನು ಓದುವುದು ಒಂದು ಬ್ರಹ್ಮ ವಿದ್ಯೆಯೇ ಸರಿ. ಇದನ್ನು ಓದುವ ಕಲೆಯನ್ನು ಕರಗತ ಮಾಡಿಕೊಂಡು ಮೆಡಿಕಲ್ ಶಾಪ್ ನವರು ಮಾತ್ರ. ಬೇರೆ ಯಾರಿಂದಲೂ ಇದು ಇದು ಅಸಾಧ್ಯ.
ಸಾಮಾನ್ಯವಾಗಿ ಎಲ್ಲಾ ಡಾಕ್ಟರ್‌ಗಳು ಕೂಡಾ ಇಂಗ್ಲೀಷಿನಲ್ಲಿಯೇ ಪ್ರಿಸ್ಕ್ರಿಪ್ಷನ್ ಬರೆಯುತ್ತಾರೆ ಈ ಮಧ್ಯೆ ಇಲ್ಲೊಬ್ಬ ಕನ್ನಡದ ವೈದ್ಯರು ಕನ್ನಡದ ಮೇಲಿನ ಪ್ರೀತಿಯಿಂದ ಕನ್ನಡ ಭಾಷೆಯಲ್ಲಿಯೇ ಔಷಧ ಚೀಟಿಯನ್ನು ಬರೆಯಲು ಆರಂಭಿಸಿದ್ದಾರೆ.
ಇದೀಗ ವೈದ್ಯರ ಕನ್ನಡ ಪ್ರಿಸ್ಕ್ರಿಪ್ಷನ್ ಚೀಟಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವೈದ್ಯರ ಕನ್ನಡ ಪ್ರೇಮವು ನೆಟ್ಟಿಗರ ಮನ ಗೆದ್ದಿದೆ.
ಚಿಕ್ಕನಾಯಕನಹಳ್ಳಿಯ ಮಹಿಮಾ ದಂತಚಿಕಿತ್ಸಾಲಯದ ವೈದ್ಯರಾದ ಡಾ. ಸಿ.ಜಿ ಮಲ್ಲಿಕಾರ್ಜುನ್ ಮತ್ತು ದೇವರಚಿಕ್ಕನಹಳ್ಳಿಯ ಕೆ.ವಿ ಡೆಂಟಲ್ ಕ್ಲಿನಿಕ್‌ನ ಡಾ. ಹರಿಪ್ರಸಾದ್ ಸಿ.ಎಸ್ ಕನ್ನಡದಲ್ಲಿಯೇ ರೋಗಿಗಳಿಗೆ ಔಷಧ ಚೀಟಿಯನ್ನು ಕೊಡುತ್ತಿದ್ದಾರೆ.
ಈ ಪೋಸ್ಟ್‌ನ್ನು ಉಮೇಶ್ ಶಿವರಾಜು ಎಂಬವರು ಸೋಷಿಯಲ್ ಮೀಡಿಯಾ ಎಕ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಹಂಚಿಕೊಂಡಿದ್ದು, “ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಔಷಧ ಚೀಟಿಗಳನ್ನು ಬರೆಯಲು ಆರಂಭಿಸಿದ ವೈದ್ಯರು” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ವೈದ್ಯರು ರೋಗಿಗಳಿಗೆ ಕನ್ನಡದಲ್ಲಿಯೇ ಬರೆದು ಕೊಟ್ಟಿರುವ ಔಷಧ ಚೀಟಿಯನ್ನು ಕಾಣಬಹುದು.
Leave a Comment