ಸಾವಿರ ಕೋಟಿ ಮೌಲ್ಯದ ಬೋಯಿಂಗ್ ವಿಮಾನ ಖರೀದಿಸಿದ ಮುಖೇಶ್ ಅಂಬಾನಿ..!
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹೊಸ ವಿಮಾನವನ್ನ ಖರೀದಿ ಮಾಡಿದ್ದಾರೆ. ಈ ವಿಮಾನ ಸರಿಸುಮಾರು 1000 ಕೋಟಿಗೂ ಅಧಿಕ ಮೌಲ್ಯದ್ದಾಗಿದೆ. ಇಲ್ಲಿತನಕ ಭಾರತಿಯನೊಬ್ಬ ಖರೀದಿಸಿದ ದುಪ್ಪಟ್ಟು ಬೆಲೆಯ ವಿಮಾನಗಳಲ್ಲಿ ಇದು ಮೊದಲ ಸಾಲಿನದ್ದೆನ್ನಲಾಗಿದೆ.
*ವಿಮಾನದ ವೈಶಿಷ್ಟ್ಯಗಳು
ವ್ಯಾಪ್ತಿ: 11,770 ಕಿ.ಮೀ. ಹಾರಬಲ್ಲ ಸಾಮರ್ಥ್ಯ
ಬೆಲೆ: 1000 ಕೋಟಿ ರೂ.
ಭಾರತದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ಬರೋಬ್ಬರಿ 1,000 ಕೋಟಿ ರೂ. ಮೌಲ್ಯದ ಖಾಸಗಿ ಜೆಟ್ ಖರೀದಿಸಿದ್ದಾರೆ. ಇದು ಭಾರತೀಯನೊಬ್ಬ ಖರೀದಿಸಿದ ದುಬಾರಿ ವಿಮಾನ ಎನಿಸಿಕೊಂಡಿದೆ.
ಬೋಯಿಂಗ್ ಕಂಪೆನಿಯ 737 ಮ್ಯಾಕ್ಸ್-9 ವಿಮಾನ ಇದಾಗಿದ್ದು, ಆ.27ರಂದು ಭಾರತಕ್ಕೆ ಬಂದಿಳಿದಿತ್ತು.
ವಿಶಾಲವಾದ ಕ್ಯಾಬಿನ್ ಮತ್ತು ಕಾರ್ಗೋ ಸ್ಥಳವನ್ನು ಈ ವಿಮಾನ ಹೊಂದಿದ್ದು, ಒಂದು ಬಾರಿ ಇಂಧನ ತುಂಬಿದರೆ 11,770 ಕಿ.ಮೀ. ದೂರ ಸಂಚರಿಸಲಿದೆ. ಈ ವಿಮಾನವನ್ನು ಸ್ವಿಟ್ಸರ್ಲೆಂಡ್ನಲ್ಲಿ ಮಾರ್ಪಾಟು ಮಾಡಿದ ಬಳಿಕ ಭಾರತಕ್ಕೆ ತರಲಾಗಿದೆ.
ಒಟ್ಟು 10 ಖಾಸಗಿ ವಿಮಾಗಳ ಒಡೆಯ ಅಂಬಾನಿ
ಬೋಯಿಂಗ್ ವಿಮಾನ ಖರೀದಿಯ ಬಳಿಕ ಅಂಬಾನಿ ಅವರ ಖಾಸಗಿ ವಿಮಾನಗಳ ಸಂಖ್ಯೆ 10ಕ್ಕೇರಿದಂತಾಗಿದೆ. ಬೋಯಿಂಗ್ ವಿಮಾನ ಅತ್ಯಾಧುನಿಕ ಸೌಲಭ್ಯಗಳ ಜತೆಗೆ ಹಲವು ಐಶಾರಾಮಿ ಸಾಧನ ಗಳನ್ನು ಹೊಂದಿದೆ. ಅಂಬಾನಿ ಬಳಿ ಈಗಾಗಲೇ ಏರ್ಬಸ್, ಬಾಂಬರ್ಡೈಯರ್, ಸಿಕೋರ್ಸ್ಕೈ ವಿಮಾನಗಳಿವೆ.
Leave a Comment