ಅಯೋಧ್ಯೆಗೂ ಸರಬರಾಜಾಗಿತ್ತು ತಿರುಪತಿ ಲಡ್ಡು: ಮೋದಿಗೂ ಸಿಕ್ಕಿತ್ತು ಇದೇ ಪ್ರಸಾದ..!
ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಇರುವ ಆಘಾತಕಾರಿ ವಿಚಾರ ಬಹಿರಂಗವಾದ ಹಿನ್ನಲೆಯಲ್ಲಿ, ಭಕ್ತರಿಂದ ತೀವ್ರವಾದ ಆಕ್ರೋಶ ಭುಗಿಲೆದ್ದಿವೆ. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಡಳಿತಾವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿದ ಗುಣಮಟ್ಟವಿಲ್ಲದ ತುಪ್ಪವನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಎನ್ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದರು.
ತಿರುಪತಿ ಲಡ್ಡು ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಅನ್ನು ಪಡೆದಿದೆ ಮತ್ತು ಅದರ ವಿಶಿಷ್ಟ ರುಚಿಗೆ ಹೆಸರಾಗಿದೆ. ಶತಮಾನಗಳಿಂದಲೂ ಕೂಡ ಪ್ರಸಾದ ತನ್ನದೇ ಆದ ರುಚಿಗೆ ಭಕ್ತರ ಮೆಚ್ಚುಗೆ ಪಡೆದುಕೊಂಡಿದೆ. ಕೋಟ್ಯಂತರ ಭಕ್ತರು ಭಕ್ತಿಯಿಂದ ಸ್ವೀಕರಿಸುವ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆಯ ಅಂಶಗಳು ಪತ್ತೆಯಾಗಿರುವುದು ವಿವಾದಕ್ಕೆ ಗುರಿಯಾಗಿದೆ.
ಟ್ವಿಸ್ಟ್ ಕೊಡೋ ವಿಚಾರ ಏನಂದ್ರೆ 2019 ಮತ್ತು 2024 ರ ನಡುವೆ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈಎಸ್ ಜಗನ್ ಮೋಹನ್ ರೆಡ್ಡಿ ದೆಹಲಿಗೆ ಭೇಟಿ ನೀಡಿದ ಪ್ರತಿ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಮಲ ದೇವಸ್ಥಾನದ ಲಾಡು ಪ್ರಸಾದವನ್ನು ಉಡುಗೊರೆಯಾಗಿ ನೀಡಿದ್ದರು. ಇದು ಸಾಕಷ್ಟು ಟೀಕೆಗೆ ಕಾರಣವಾಗ್ತಿದೆ.
ಈ ಸುದ್ದಿಯನ್ನು ಸಹ ಓದಿ: ಇದೀಗ ಆ ಸಮಯ ಬಂದಿದೆ ಎಂದಿದ್ಯಾಕೆ ಅಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್..?
ಕಳೆದ ಜನವರಿ ತಿಂಗಳಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಒಂದು ಲಕ್ಷಕ್ಕೂ ಹೆಚ್ಚು ತಿರುಪತಿ ಲಡ್ಡುಗಳನ್ನು ವಿಮಾನದ ಮುಖಾಂತರ ಅಯೋಧ್ಯೆಗೆ ಸಾಗಿಸಲಾಗಿತ್ತು. ಈ ವಿಚಾರ ತಿಳಿದ ನಂತರ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಶ್ರೀರಾಮನ ಭಕ್ತರು ಕೆರಳಿದ್ದಾರೆ
Leave a Comment