ನಿಮ್ಮ ಮೊಬೈಲ್ ನಲ್ಲಿ ಈ ಆಪ್ಷನ್ ಇದ್ರೆ, ಈಗ್ಲೇ ಆಫ್ ಮಾಡಿ; ಇದರಿಂದ ನಿಮ್ಮ ಫೋನ್ ಹ್ಯಾಕ್ ಆಗಬಹುದು…!
ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಫೋನ್ ಬಳಸದವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಜಾಗ ಮಾಡಿಕೊಂಡಿದೆ. ಈಗಂತೂ ಯಾವುದೇ ಪಾಸ್ವರ್ಡ್ ಅಥವಾ ದಾಖಲೆಗಳು ಮೊಬೈಲ್ ನಲ್ಲೇ ಅಡಗಿರುತ್ತದೆ.
ಹೀಗಿರುವಾಗ ನಾವು ಮೊಬೈಲ್ ನಲ್ಲಿರುವ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕು. ಯಾಕೆಂದರೆ ಹ್ಯಾಕರ್ಸ್ ಗಳ ಕೈಚಳಕದಿಂದ ನಮ್ಮೆಲ್ಲ ಮಾಹಿತಿಯು ಒಂದೇ ಸೆಕೆಂಡಿನಲ್ಲಿ ಅವರ ಕೈ ಸೇರುತ್ತದೆ. ಆದ್ದರಿಂದ ಮೊಬೈಲ್ ನ ಈ ಕೆಲವು ವಿಚಾರಗಳನ್ನು ನಾವು ಗಮನಿಸಲೇ ಬೇಕಾಗುತ್ತದೆ.
ಇದೀಗ ಜನರು ನಗದು ಹಣಗಳನ್ನು ತೆಗೆದುಕೊಂಡು ಹೋಗುವ ಬದಲು ತಮ್ಮ ಮೊಬೈಲ್ ನಲ್ಲಿರುವ ಗೂಗಲ್ ಪೇ, ಫೋನ್ ಪೇ, ನೆಟ್ ಬ್ಯಾಂಕಿಂಗ್ ಮೂಲಕನೇ ಎಲ್ಲಾ ವ್ಯವಹಾರಗಳನ್ನು ನಿಂತ ಜಾಗದಲ್ಲೇ ಮಾಡಿ ಮುಗಿಸುತ್ತಾರೆ. ಈ ಸಂದರ್ಭದಲ್ಲಿ ಅಂತೂ ನಮ್ಮ ಮೊಬೈಲ್ ನಲ್ಲಿರುವ ಕೆಲವೊಂದು ಸೆಟ್ಟಿಂಗ್ ಗಳನ್ನು ಆಫ್ ಮಾಡಿಕೊಳ್ಳಬೇಕು.
ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿರುವ ಲೊಕೇಶನ್ ಹಿಸ್ಟರಿ ಅನ್ನು ಆಫ್ ಮಾಡಿಕೊಳ್ಳಬೇಕು. ಫೋನ್ ನ ಸೆಟ್ಟಿಂಗ್ ಗೆ ಹೋಗಿ, ನಂತರ ಗೂಗಲ್ ಅಕೌಂಟ್ ಮತ್ತು ಮ್ಯಾನೇಜ್ ಅಕೌಂಟ್ ಆಯ್ಕೆಯಲ್ಲಿ ‘ಡೇಟಾ ಮತ್ತು ಗೌಪ್ಯತೆ’ಯನ್ನು ಆಯ್ಕೆ ಮಾಡಬೇಕು. ಅಲ್ಲಿ ನೀವು ಲೊಕೇಶನ್ ಹಿಸ್ಟರಿ ಅನ್ನು ಆನ್ ಮಾಡಿದ್ದಲ್ಲಿ ತಕ್ಷಣವೇ ಆಫ್ ಮಾಡಿ.
ಮುಂದೆ ನಿಮ್ಮ ಮೊಬೈಲ್ ನಲ್ಲಿರುವ ನಿಯರ್ ಬೈ ಶೇರ್ ಆಯ್ಕೆಯನ್ನು ಆಫ್ ಮಾಡಿಟ್ಟುಕೊಳ್ಳಬೇಕು. ಯಾಕೆಂದರೆ ಇದರಿಂದ ನಿಮ್ಮ ಹತ್ತಿರದಲ್ಲಿರುವವರಿಗೆ ನಿಮ್ಮ ಮೊಬೈಲ್ ನ ಮಾಹಿತಿ ಸಿಗುತ್ತದೆ ಹಾಗೂ ಸುಲಭವಾಗಿ ನಿಮ್ಮ ಮೊಬೈಲನ್ನು ಹ್ಯಾಕ್ ಮಾಡಬಹುದು.
ಇದರ ಜೊತೆಗೆ ನಿಮ್ಮ ಮೊಬೈಲ್ ನ ಲಾಕ್ ಸ್ಕ್ರೀನ್ ನೋಟಿಫಿಕೇಶನ್ ಗಳನ್ನು ಸಹ ಆಫ್ ಮಾಡಿ. ಯಾಕೆಂದರೆ ಲಾಕ್ ಸ್ಕ್ರೀನ್ ನಲ್ಲಿ ಯಾವುದೇ ಜಿಮೇಲ್ ಅಥವಾ ಮೆಸೇಜ್ ಗಳು ಪ್ರದರ್ಶನವಾದಲ್ಲಿ ಎಲ್ಲರೂ ಈ ಮೆಸೇಜ್ ಗಳನ್ನು ನೋಡಬಹುದು ಇದರಿಂದ ಸಹ ನಿಮ್ಮ ದತ್ತಾಂಶಗಳ ಸೋರಿಕೆಯಾಗುವ ಸಾಧ್ಯತೆಗಳಿವೆ.
ಮುಂದೆ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಸಹ ಆಫ್ ಮಾಡಿಬೇಕು. ಗೂಗಲ್ ನ ಈ ಸೆಟ್ಟಿಂಗ್ ಅನ್ನು ಆಫ್ ಮಾಡಿ ಏಕೆಂದರೆ ಇದರಿಂದ ನೀವು ನೋಡಲು ಬಯಸುವ ಎಲ್ಲಾ ವಿಚಾರಗಳು ಗೂಗಲ್ ಗೆ ತಿಳಿದು ಮುಂದೆ ನಿಮ್ಮ ಆಸಕ್ತಿಯ ವಿಚಾರಗಳನ್ನೇ ತೋರಿಸುತ್ತದೆ. ಇದರಿಂದ ಹೆಚ್ಚಾಗಿ ನಿಮ್ಮ ಮೊಬೈಲ್ ನ ಡಾಟಾದ ಸೋರಿಕೆಯಾಗುತ್ತದೆ. ಆದ್ದರಿಂದ ಈ ಮೇಲೆ ತಿಳಿಸಿರುವ ಎಲ್ಲಾ ಅಂಶಗಳನ್ನು ಪಾಲಿಸಿ ನಿಮ್ಮ ಮೊಬೈಲ್ ನಲ್ಲಿರುವ ಗೌಪ್ಯ ಅಂಶಗಳನ್ನು ಕಾಪಾಡಿಕೊಳ್ಳಿ.
Leave a Comment