ಡಿಸಿಎಂ ಡಿ.ಕೆ.ಶಿ ಶೂ ಕಾಯಲು ಭದ್ರತಾ ಸಿಬ್ಬಂದಿ ನಿಯೋಜನೆ: ನೆಟ್ಟಿಗರ ತರಾಟೆ..!
ಹೋದಲ್ಲಿ ಬಂದಲ್ಲೆಲ್ಲಾ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಗೆ ತನ್ನ ಶೂ ಕದಿಯೋರದ್ದೆ ದೊಡ್ಡ ತಲೆನೋವಾಗಿ ಬಿಟ್ಟಿದೆ ಹೀಗಾಗಿ ಇಂದು ಚನ್ನಪಟ್ಟಣದಲ್ಲಿ ಗುದ್ದಲಿ ಪೂಜೆ ಮಾಡಲು ತೆರಳುವಾಗ ತಮ್ಮ ಸಿಬ್ಬಂದಿಯನ್ನ ಅಲ್ಲೆ ಕಾವಲು ಕಾಯಲು ಬಿಟ್ಟು ಹೋದ ಪ್ರಸಂಗ ನಡೆದಿದೆ.
ಚನ್ನಪಟ್ಟಣದಲ್ಲಿ ಇಂದು ಅಭಿವೃದ್ಧಿ ಕಾರ್ಯಗಳ ಶಂಕು ಸ್ಥಾಪನೆಗೆ ತೆರಳಿದ್ದ ಡಿಕೆ ಶಿವಕುಮಾರ್ ಗೆ ತಮ್ಮ ಕಾಲು ಶೂಗಳದ್ದೇ ತಲೆನೋವಾಗಿದೆ. ಇದನ್ನು ಕಾಯಲು ಒಬ್ಬ ಭದ್ರತಾ ಸಿಬ್ಬಂದಿಯನ್ನಿಟ್ಟುಕೊಂಡಿದ್ದಾರೆ. ಡಿಕೆ ಶಿವಕುಮಾರ್ ಎಲ್ಲೇ ಹೋದರೂ ಜನಸಾಗರ ಹರಿದು ಬರುತ್ತೆ.
ಇದೇ ರೀತಿ ಇಂದು ಸಹ ಪುರೋಹಿತರು ಪೂಜೆ ಮಾಡುತ್ತಿದ್ದರು. ಈ ವೇಳೆ ಡಿಕೆಶಿ ತಮ್ಮ ಸಂಪುಟ ಸಹೋದ್ಯೋಗಿ ಜಮೀರ್ ಅಹ್ಮದ್ ಸೇರಿದಂತೆ ತಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜೊತೆ ಇದ್ದರು.
ತದನಂತರ ಪೂಜೆಯಲ್ಲಿ ಪಾಲ್ಗೊಂಡಿದ್ದು ಬಳಿಕ ಶಂಕು ಸ್ಥಾಪನೆ ನೆರವೇರಿಸಿದರು. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಪೂಜೆ ವೇಳೆ ಡಿಕೆಶಿ ತಮ್ಮ ಶೂ ಕಳಚಲೇ ಬೇಕಾಗಿತ್ತು. ಆದರೆ ಅವರಿಗೆ ಜನರ ನೂಕುನುಗ್ಗಲಿನ ನಡುವೆ ತಮ್ಮ ಶೂ ಎಲ್ಲಿ ಕಳೆದುಹೋಗುವುದೋ ಎಂಬ ಭಯ ಬೇರೆ ಹೀಗಾಗಿ ಅಲ್ಲಿ ಒಬ್ಬ ಸಿಬ್ಬಂದಿಯನ್ನಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ನೆಟ್ಟಿಗರು ಇದು ಶೋಭೆಯಲ್ಲ ತಮಗೆ ಎಂದು ಕಿಡಿಕಾರಿದ್ದಾರೆ
Leave a Comment