ವಯನಾಡು ಲೋಕಸಭಾ ಉಪಚುನಾವಣೆ; ಇಂದು ಪ್ರಿಯಾಂಕಾ ಗಾಂಧಿ ಭವಿಷ್ಯ ನಿರ್ಧಾರ

Wayanad Bypoll
Spread the love

ನ್ಯೂಸ್ ಆ್ಯರೋ​: ಕೇರಳದ ವಯನಾಡ್​ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆ ಎದುರಿಸುತ್ತಿರುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.

ವಯನಾಡ್​ ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್​ ನೇತೃತ್ವದ ಯುಡಿಎಫ್​ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ವರ ಫಲಿತಾಂಶ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ. ಸದ್ಯ ಆರಂಭಿಕ ಸುತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಅವರು ಸಿಪಿಐ(ಎಂ) ಅಭ್ಯರ್ಥಿ ಸತ್ಯನ್​ ಮೊಕೆರಿ ಅವರಿಗಿಂತ 85,533 ಮತಗಳ ಮುನ್ನಡೆಯಲ್ಲಿದ್ದು, ಬೆಳಗ್ಗೆ 9.52ರ ಹೊತ್ತಿಗೆ 1,21,476 ಮತಗಳನ್ನು ಗಳಿಸಿದ್ದರು. ವಯನಾಡ್​ನಲ್ಲಿ ಈಗಾಗಲೇ ಅಂಚೆ ಮತಗಳು ಹಾಗೂ ಸೇವಾ ಮತಗಳ ಎಣಿಕೆ ಮುಗಿದು, ಇವಿಎಂ ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ.

ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ವಯನಾಡ್​ ಹಾಗೂ ರಾಯ್​ ಬರೇಲಿ LS ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು.

ರಾಹುಲ್​ ಗಾಂಧಿ ಅವರು ರಾಯ್​ ಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಕಾರಣ, ವಯನಾಡ್​ ತೆರವಾಗಿತ್ತು. ಆ ಹಿನ್ನೆಲೆ ನಡೆದ ಉಪ ಚುನಾವಣೆಯಲ್ಲಿ ರಾಹುಲ್​ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!