ಅಮವಾಸ್ಯೆ ದಿನ ಸೂರಜ್ ರೇವಣ್ಣ ಬಳೆ ತೊಟ್ಟು ಸೀರೆ ಉಡ್ತಾರೆ..! – ಸೂರಜ್ ರೇವಣ್ಣ ಕಾಮುಕ ಕೃತ್ಯ ಬಿಚ್ಚಿಟ್ಟ ಸಂತ್ರಸ್ತ ಹೇಳಿದ್ದೇನು…?

ನ್ಯೂಸ್ ಆ್ಯರೋ : ಸಲಿಂಗ ಕಾಮ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಹಿರಿಯ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣನ ಪೊಲೀಸರು ಬಂಧನದಲ್ಲಿದ್ದು, ಇದೀಗ ಸೂರಜ್ ರೇವಣ್ಣ ಅವರ ಕುರಿತು ಜೆಡಿಎಸ್ ಕಾರ್ಯಕರ್ತ ಹಾಗೂ ಸಂತ್ರಸ್ತ ಯುವಕರು ಬೆಚ್ಚಿಬೀಳುವ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಖಾಸಗಿ ಸುದ್ದಿ ಮಾಧ್ಯಮಕ್ಕೆ ಸಂತ್ರಸ್ತನೊಬ್ಬ ಮಾಹಿತಿ ನೀಡಿದ್ದು, ಅಮಾವಾಸ್ಯೆಗೆ ಬಳೆ ತೊಟ್ಟು, ಸೀರೆ ಉಡ್ತಾರೆ ಅಂತ ಇದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. 2019 ರ ಚುನಾವಣೆ ಸಂದರ್ಭದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಅರಕಲಗೂಡಿನಲ್ಲಿ ಜೆಡಿಎಸ್ ಕಾರ್ಯಕ್ರಮ ಜೋರಾಗಿ ಮಾಡಿದ್ದೆ. ಈ ವೇಳೆ ಕಾರ್ಯಕ್ರಮ ಚನ್ನಾಗ್ ಮಾಡಿದಿಯಾ ಅಂತ ನನ್ನ ಹೊಗಳಿ ನನ್ನ ನಂಬರ್ ಅವರೇ ತೆಗೆದುಕೊಳ್ಳುತ್ತಾರೆ. ನಂತರ ಅವರ ವಿಸಿಟಿಂಗ್ ಕಾರ್ಡ್ ಕೊಡ್ತಾರೆ, ನಂತರ ಅವರು ನನ್ನ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದರು.
ಇನ್ನೂ ಸೂರಜ್ ರೇವಣ್ಣ ಎರಡು ತರ. ಅವರು ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ವಿರುದ್ಧವಾಗಿ ಒಳಗಡೆ ಇರುತ್ತಾರೆ. ಸೂರಜ್ ರೇವಣ್ಣ ಒಬ್ಬ ಕಾಮುಕ, ಹೊರಗೆ ಒಂದು ಮುಖ, ಒಳಗೆ ಇನ್ನೊಂದು ಮುಖ. ನಾಲ್ಕು ವರ್ಷದಿಂದ ಎಲ್ಲೂ ಹೇಳಿಕೊಳ್ಳೋಕೆ ನನಗೆ ಆಗಿರಲಿಲ್ಲ, ಮನಸ್ಸಿನಲ್ಲಿ ಕಾಡುತ್ತಿತ್ತು.
ಒಂದು ದಿನ ನನ್ನ ಜೊತೆಗೆ ಸೂರಜ್ ರೇವಣ್ಣ ಬಂದು ನನ್ನ ಜೊತೆಗೆ ಮಾತ್ನಾಡುತ್ತಾ ನನ್ನ ಜೀವನ ಹೇಗೆ ಏನು ಅಂತ ಎಲ್ಲಾ ಕೇಳಿದ್ರು, ನಾನು ನನ್ನ ಕೆಲಸ, ಕುಟುಂಬದ ಬಗ್ಗೆ ಹೇಳಿದೆ. ಯಾವುದಕ್ಕೂ ಯೋಚನೆ ಮಾಡಬೇಡ ನಾನು ಇದ್ದೇನೆ ಎಂದು ಹೇಳಿ. ರೂಮ್ ಒಳಗೆ ಕರೆದುಕೊಂಡು ಹೋದ್ರು. ನಂತರ ನನ್ನ ಕಾಲು ಒತ್ತುವಂತೆ ಹೇಳಿದರು. ನಾನು ಕಾಲು ಒತ್ತಿದೆ.. ಮುಂದೆ ಏನ್ ಆಯ್ತು ಅಂತ ನಾನು ಹೇಳಲು ಸಾಧ್ಯವಿಲ್ಲ ಎಂದು ಸಂತ್ರಸ್ತ ಯುವಕ ವಿವರಿಸಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಹಾಗೂ ದೂರು ಪ್ರತಿಯಲ್ಲಿ ಘಟನೆಯನ್ನು 27 ವರ್ಷದ ಸಂತ್ರಸ್ತ ವಿವರಿಸಿದ್ದಾರೆ. ”ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪರಿಚಯವಾಗಿದ್ದ ಸೂರಜ್ ರೇವಣ್ಣ ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯನಾಗಿದ್ದ ಕಾರಣ ಮೊಬೈಲ್ ನಂಬರ್ ಪಡೆದಿದ್ದರು. ಜೂ.14ರಂದು ಮೊದಲ ಬಾರಿಗೆ ಗುಡ್ ಈವಿನಿಂಗ್ ಸಂದೇಶದ ಜತೆಗೆ ಲವ್ ಸಿಂಬಲ್ ಕಳಿಸಿದ್ದ ಸೂರಜ್ ಮಾತನಾಡಲು ಆರಂಭಿಸಿದ್ದರು.
ಇದಾದ ಬಳಿಕ ಜೂನ್ 16 ರಂದು ಗನ್ನಿಗಡದ ಫಾರ್ಮ್‌ಹೌಸ್ ಒಂಟಿಯಾಗಿ ಬರಲು ತಿಳಿಸಿದ್ದರು. ಅದರಂತೆ ಸಾಯಂಕಾಲ 6.15ರ ಸುಮಾರಿಗೆ ಫಾರ್ಮ್ ಹೌಸ್‌ಗೆ ತೆರಳಿದ್ದ ವೇಳೆ ತನ್ನ ಬೆಡ್ ರೂಂಗೆ ಕರೆದೊಯ್ದ ಸೂರಜ್ ರೇವಣ್ಣ ಬೆದರಿಕೆ ಒಡ್ಡಿ ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬೇಡ ಎಂದು ಗೋಳಾಡಿದರೂ ಸೂರಜ್ ರೇವಣ್ಣ ಬಿಡದೆ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನೂ ಸೂರಜ್ ರೇವಣ್ಣ ನನ್ನ ಮೇಲೆ ಎಸಗಿದ ಕೃತ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಇದನ್ನು ವಿವರಿಸಿದ್ದಕ್ಕೆ ಈ ವಿಚಾರ ಎಲ್ಲಿಯೂ ಹೇಳದಂತೆ 2 ಕೋಟಿ ರೂ. ಹಾಗೂ ಕೆಲಸದ ಆಮಿಷ ಒಡ್ಡಿದ್ದರು. ಒಪ್ಪದಿದ್ದಕ್ಕೆ ಜೀವ ಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತ ದೂರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಸೂರಜ್ ನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
Leave a Comment