ಉಡುಪಿ‌ : ದೂರದರ್ಶನ ವಾಹಿನಿಯ ಹಿರಿಯ ವರದಿಗಾರ ಜಯಕರ ಸುವರ್ಣ ಇನ್ನಿಲ್ಲ – ಸರಳ ಸಜ್ಜನ ಸುವರ್ಣ ಸಾವಿಗೆ ಗಣ್ಯರ ಸಂತಾಪ

Spread the love

ನ್ಯೂಸ್ ಆ್ಯರೋ : ದೂರದರ್ಶನ ವಾಹಿನಿಯ ವರದಿಗಾರ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ‌ ಅಧ್ಯಕ್ಷ, ಕಲ್ಮಾಡಿ ನಿವಾಸಿ ಜಯಕರ ಸುವರ್ಣ (67 ವರ್ಷ) ಸೋಮವಾರ ರಾತ್ರಿ ಹೃದಯಾಘಾತದಿಂದ ಇಲ್ಲಿನ ಖಾಸಗಿ‌ ಆಸ್ಪತ್ರೆಯಲ್ಲಿ ನಿಧನರಾದರು.

ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ. ಫೊಟೊಗ್ರಾಫರ್ಸ್ ಅಸೋಸಿಯೇಶನ್, ಬಿಲ್ಲವ ಸಂಘ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಮೃತರು ಪತ್ನಿ, ಓರ್ವ ಪುತ್ರ ಮತ್ತು ಈವರ್ವರು ಪುತ್ರಿಯರನ್ನು ಅಗಲಿದ್ದಾರೆ.

ಜಯಕರ ಸುವರ್ಣ ನಿಧನಕ್ಕೆ ಉಡುಪಿ ಕಾರ್ಯನಿರತ ಪತ್ರಕರ್ತರ ಸಂಘ, ಫೊಟೊಗ್ರಾಫರ್ಸ್ ಅಸೋಸಿಯೇಶನ್, ಬಿಲ್ಲವ ಸಂಘ ಪದಾಧಿಕಾರಿಗಳು, ಶಾಸಕ ಯಶಪಾಲ್ ಸುವರ್ಣ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!