ಬ್ರಹ್ಮಾವರ : ಐಟಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಮನೆಗೆ ಎಂಟ್ರಿ ಕೊಟ್ಟ ಅಪರಿಚಿತರು – ಇನ್ನೋವಾ, ಸ್ವಿಫ್ಟ್ ಕಾರಿನಲ್ಲಿ ಆಗಮಿಸಿದ ಆಗಂತುಕರು ಮಾಡಿದ್ದೇನು?

20240729 130825
Spread the love

ನ್ಯೂಸ್ ಆ್ಯರೋ : ಸಿನೆಮಾ ಸ್ಟೈಲ್ ಮಾದರಿಯಲ್ಲಿ ಕಾರಿನಲ್ಲಿ ಬಂದ ಅಪರಿಚಿತರು ಉದ್ಯಮಿಯೊಬ್ಬರ ಮನೆಗೆ ನುಗ್ಗಲು ಯತ್ನಿಸಿದ ಘಟನೆ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದಲ್ಲಿ ನಡೆದಿದೆ.

ಕವಿತಾ ಎಂಬವರ ನಿವಾಸಕ್ಕೆ ಸುಮಾರು 6-8 ಜನರು ನುಗ್ಗಿ ದಾಂಧಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜುಲೈ 25ರ ಬೆಳಗ್ಗೆ 8.30ರ ಸುಮಾರಿಗೆ ಯಾರೋ ಕವಿತಾ ಅವರ ಮನೆ ಬಾಗಿಲು ತಟ್ಟಿದ್ದಾರೆ. ಆದರೆ, ಕವಿತಾ ಅವರು 9 ಗಂಟೆ ಸುಮಾರಿಗೆ ಬಾಗಿಲು ತೆರೆದು ಹೊರಗೆ ಬಂದು ನೋಡಿದಾಗ ಯಾರು ಇರಲಿಲ್ಲ.

ಬಳಿಕ, ಮನೆಯ ಸಿಸಿಟಿವಿ ದೃಶ್ಯಗಳನ್ನು ಮೇಲ್ವಿಚಾರಣೆ ಮಾಡುವ ಸೈನ್ ಇನ್ ಸೆಕ್ಯುರಿಟಿಯು ಕವಿತಾ ಅವರಿಗೆ ಕರೆ ಮಾಡಿದ್ದಾರೆ. 6-8 ಜನರ ಇನ್ನೋವಾ, ಸ್ವಿಫ್ಟ್ ಕಾರಿನಲ್ಲಿ ಮನೆ ಬಳಿ ಬಂದಿದ್ದರು. ಬಳಿಕ ಕಾಂಪೌಂಡ್ ಹಾರಿ ಮನೆಯ ಆವರಣ ಪ್ರವೇಶಿಸಿದ್ದರು.

ನಂತರ ಬಾಗಿಲು ಬಡಿದು ಮನೆಯವರನ್ನ ಕರೆದಿದ್ದಾರೆ. ಆದರೆ, ಮನೆ ಬಾಗಿಲು ತೆರೆಯದಿದ್ದರಿಂದ ಕಿಟಕಿಗಳನ್ನು ತೆರೆಯಲು ಯತ್ನಿಸಿದ್ದರು. ಆದರೆ, ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಪಸ್ ಹೋದರು. ಹೋಗುವಾಗ ಗೇಟ್ಗೆ ಹಾನಿ ಮಾಡಿದ್ದಾರೆ ಎಂದು ಸೈನ್ ಇನ್ ಸೆಕ್ಯೂರಿಟಿ ಮಾಹಿತಿ ನೀಡಿದ್ದಾರೆ.

ತಂಡ ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಆಗಮಿಸಿತ್ತು. ಜೊತೆಯಲ್ಲಿ ಓರ್ವ ಪೊಲೀಸ್ ಪೇದೆಯೂ ಇದ್ದ ಎಂಬ ಮಾಹಿತಿ ಗೊತ್ತಾಗಿದೆ. ಘಟನೆ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!