ರಾಜ್ಯ ಸರ್ಕಾರ v/s ರಾಜ್ಯಪಾಲರ ಕದನಕ್ಕೆ ಬಿಗ್ ಟ್ವಿಸ್ಟ್: ಪುನಃ ಕಿಚ್ಚಿನ ಪತ್ರ ಬರೆದ ರಾಜ್ಯಪಾಲ ಗೆಹ್ಲೋಟ್..!
ನ್ಯೂಸ್ ಆ್ಯರೋ: ಈಗಾಗಲೆ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ಸಂಬಂಧ ಕಲ್ಲು, ತೆಂಗಿನಕಾಯಿ ರೀತಿ ಆಗಿದೆ. ಪುನಃ ಕೆಲವು ರಹಸ್ಯ ಮಾಹಿತಿ ಸೋರಿಕೆಯಾಗಿರೋದರಿಂದ ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಸ್ಫೋಟಕ ಪತ್ರ ಬರೆದಿದ್ದಾರಂತೆ..!
ಈ ಸುದ್ದಿಯನ್ನ ಸಹ ಓದಿ: ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಹಂಪ ನಾಗರಾಜಯ್ಯರಿಂದ ಚಾಲನೆ
*ಸರ್ಕಾರಕ್ಕೆ ರಾಜ್ಯಪಾಲರ ತರಾಟೆ:
ರಾಜ್ಯ ಪಾಲರ ಹಾಗೂ ರಾಜ್ಯ ಸರ್ಕಾರದ ನಡುವೆ ನಡೆಯುತ್ತಿರುವ ಪತ್ರ ಕದನ ಪುನಃ ಮುಂದುವರಿದಿದೆ.ರಾಜಭವನ ಮತ್ತು ಲೋಕಾಯುಕ್ತ ನಡುವೆ ನಡೆದ ಪತ್ರ ವ್ಯವಹಾರ ಹೇಗೆ ಬಹಿರಂಗವಾಯಿತು ಅದು ಅಲ್ದೇ ನೀವು ಸಂಪುಟ ಸಭೆಯಲ್ಲಿ ಇದ್ರ ಬಗ್ಗೆ ಚರ್ಚೆ ಸಹ ನಡೆಸಿದ್ದೀರಾ ಇದು ಹೇಗೆ ಸಾಧ್ಯ ಎಂದು ರಾಜ್ಯಪಾಲರು ಕೆಂಡಾಮಂಡಲವಾಗಿದ್ದಾರೆ.
ಸಂಪುಟ ಸಭೆಯಲ್ಲಿ ರಹಸ್ಯ ಮಾಹಿತಿ ಸೋರಿಕೆ ಬಗ್ಗೆ ಕೆಂಡದಂತಾಗಿರುವ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಲೋಕಾಯುಕ್ತ ಎಸ್‌ಐಟಿಗೂ ಪತ್ರ ಬರೆದಿದ್ದಾರೆ.. ಅಲ್ಲದೇ ಇದರ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೂಚನೆ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿಗೆ ಬರೆದಿರೋ ಪತ್ರದಲ್ಲೆನಿದೆ..?
- ಕ್ಯಾಬಿನೆಟ್ ನಿರ್ಣಯದ ದಾಖಲೆಗಳ ಕುರಿತು ಮುಚ್ಚಿದ ಲಕೋಟೆ ಬಂದಿರುತ್ತೆ ಆದರೆ ಆ ಲಕೋಟೆಯೊಳಗೆ 16ನೇ ಸಚಿವ ಸಂಪುಟ ಸಭೆಯ ಅಜೆಂಡಾ ಹಾಗೂ 17ನೇ ಸಚಿವ ಸಂಪುಟದ ಹೆಚ್ಚುವರಿ ಅಜೆಂಡಾ ಕಾಪಿ ಮಾತ್ರ ಇತ್ತು ಸಭೆಯಲ್ಲಿ ಕೈಗೊಂಡಿರುವ ನಿರ್ಣಯದ ಬಗ್ಗೆ ದಾಖಲೆಗಳು ಇರಲಿಲ್ಲ ಇದರ ಬಗ್ಗೆ ಕ್ಯಾಬಿನೆಟ್ ವಿಭಾಗಕ್ಕೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ತಿಳಿಸಲಾಗಿದೆ .
*ಮಾಹಿತಿ ನೀಡಿದ ಬಳಿಕ 27ನೇ ತಾರೀಕು ಡಿಸಿಎಂ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಕೈಗೊಂಡ ನಿರ್ಣಯಗಳ ದಾಖಲೆ ರಾಜಭವನಕ್ಕೆ ಸಲ್ಲಿಸಲಾಗಿದೆ. ಆ ಮಾಹಿತಿಯಲ್ಲಿ ಡಿಸಿಎಂ ಡಿಕೆಶಿ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ ಹೆಚ್ಚುವರಿ ಅಜೆಂಡಾದ ನಿರ್ಣಯಗಳು ನಮಗೆ ಲಭ್ಯವಾಗಿಲ್ಲ.
- ಆದರೆ 23 ನೇ ತಾರೀಕು ಮಾದ್ಯಮಗಳಲ್ಲಿ ಎಚ್.ಡಿ ಕುಮಾರಸ್ವಾಮಿ, ಜನಾರ್ಧನ ರೆಡ್ಡಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಲು ಕ್ಯಾಬಿನೆಟ್ ರಾಜ್ಯಪಾಲರಿಗೆ ಸಲಹೆ ನೀಡಿದೆ ಎಂದು ವರದಿ ಆಗಿದೆ.
- ಗೌಪ್ಯವಾದ ಮಾಹಿತಿ ಸಚಿವ ಸಂಪುಟ ಸಭೆಯಲ್ಲಿ ಹೇಗೆ ಚರ್ಚಿಸಲಾಯಿತು..? ಕ್ಯಾಬಿನೆಟ್ ನೋಟ್ ನಲ್ಲಿ ಯಾವ ದಿನಾಂಕದಂದು ಲೋಕಾಯುಕ್ತ ಸಂಸ್ಥೆ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿ ಕೇಳಿದೆ ಎಂಬುದನ್ನ ಉಲ್ಲೇಖಿಸಲಾಗಿದೆ .
*ನನಗೆ ಈಗ ಕುತೂಹಲ ಹೆಚ್ಚಾಗಿದೆ, ಹೇಗೆ ಲೋಕಾಯುಕ್ತ ವಿಶೇಷ ತನಿಖಾ ತಂಡ ರಾಜ್ಯಪಾಲರಿಗೆ ಬರೆದ ಪತ್ರ ಬಹಿರಂಗವಾಯಿತು ? ಲೋಕಾಯುಕ್ತ ಎಂಬುದು ಸ್ವಾಯತ್ತ ತನಿಖಾ ಸಂಸ್ಥೆ ಲೋಕಾಯುಕ್ತ ಎಸ್‌ಐಟಿ ಗೌಪ್ಯವಾಗಿ ಅಭಿಯೋಜನಾ ಮಂಜೂರಾತಿಯನ್ನ ಕೇಳಿದ ಪತ್ರ ಸರ್ಕಾರ ಹಾಗೂ ಕ್ಯಾಬಿನೆಟ್ ಗೆ ತಲುಪಿದ್ದು ಹೇಗೆ..?
ಹೀಗಾಗಿ ಈ ಪತ್ರ ತಲುಪಿದ ಕೂಡಲೇ ಪ್ರಾಮಾಣಿಕವಾಗಿ ರಾಜಭವನಕ್ಕೆ ವರದಿ ಕೊಡಿ ಎಂದು ರಾಜ್ಯಪಾಲರು. ಸೂಚಿಸಿದ್ದಾರೆ. ರಾಜ್ಯಪಾಲರ ಈ ಪತ್ರದ ಬಳಿಕ ಸೆಪ್ಟೆಂಬರ್ 4 ರಂದು ಲೋಕಾಯುಕ್ತ ಎಸ್‌ಐಟಿಯ ಮುಖ್ಯಸ್ಥರು ಪತ್ರ ಬರೆದಿದ್ದಾರೆ ಕಾನೂನು ಸುವ್ಯವ್ಯಸ್ಥೆ ಎಡಿಜಿಪಿಗೆ ಪತ್ರ ಬರೆದಿರುವ ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥರು ತನಿಖೆ ನಡೆಸಲು ಅನುಮತಿ ನೀಡಿ ಎಂದು ಕೋರಿದ್ದಾರೆ . ಸೆಪ್ಟೆಂಬರ್ 6ನೇ ತಾರೀಕು ಡಿಜಿ-ಐಜಿಪಿ ರಾಜ್ಯಪಾಲರಿಗೆ ಸೂಕ್ತ ಕ್ರಮ ಕೈಗೊಳ್ಳಲು ಕಳುಹಿಸಲಾಗಿದ್ಯಂತೆ. ಈ ಪ್ರಕರಣದ ಬಿಸಿ ಇನ್ನು ಎಲ್ಲಿಯವರಗೆ ತಟ್ಟುತ್ತೊ ಕಾದು ನೋಡಬೇಕಿದೆ.
Leave a Comment