ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಹಂಪ ನಾಗರಾಜಯ್ಯರಿಂದ ಚಾಲನೆ
ನ್ಯೂಸ್ ಆ್ಯರೋ: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅದ್ದೂರಿ ತಯಾರಿ ನಡೆಸಲಾಗ್ತಿದೆ. ಈ ಸುಂದರ ದಸರವನ್ನ ಯಾರು ಉದ್ಘಾಟಿಸ್ತಾರೆ ಅನ್ನೊ ಪ್ರಶ್ನೆ ಹಲವರಲ್ಲಿ ಮನೆ ಮಾಡಿತ್ತು ಈಗ ಅದಕ್ಕೆ ಉತ್ತರ ಸಿಕ್ಕಿದೆ. ಈ ಬಾರಿ ಕರ್ನಾಟಕದ ಸಾಹಿತಿ, ಚಿಂತಕರಾದ ಹಂಪ ನಾಗಾರಾಜಯ್ಯನವರಿಂದ ದಸರೆಗೆ ಉದ್ಯುಕ್ತ ಚಾಲನೆ ಸಿಗಲಿದೆ. ಇನ್ನು ಈ ಬಾರಿಯ ಮೈಸೂರು ದಸರಾವನ್ನು ( Mysore Dasara-2024) ಅನ್ನು ಹಂಪ ನಾಗರಾಜಯ್ಯ ( Hampa Nagarajaiah ) ಅವರು ಉದ್ಘಾಟಿಸಲಿದ್ದಾರೆ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ದಸರಾ ಬಗ್ಗೆ ವಿಶೇಷ ಮಾಹಿತಿ:
ಮೈಸೂರು ದಸರಾ ಎಂದಿನಿಂದ ಶುರು..?
2024ರ ದಸರಾ ಮಹೋತ್ಸವ ಅಕ್ಟೋಬರ್ 3ರಂದು ಆರಂಭಗೊಂಡು ಅದೇ ತಿಂಗಳ 12ರಂದು ಸಮಾರೋಪಗೊಳ್ಳಲಿದೆ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 9.15 ರಿಂದ 9.45ರ ಮುಹೂರ್ತದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ.
ಏನೇನು ಕಾರ್ಯಕ್ರಮ ನಡೆಯಲಿವೆ..?
ಅಕ್ಟೋಬರ್ 3ರಂದು ಚಾಮುಂಡೇಶ್ವರಿ ದೇವಿಗೆ ನವರಾತ್ರಿಯ ಪ್ರಥಮ ಪೂಜೆ ನೆರವೇರಲಿದ್ದು, ನಂತರ 9 ದಿನಗಳ ಕಾಲ ದೇವಿಯ ಆರಾಧನೆ ನಡೆಯಲಿದೆ. ಅಕ್ಟೋಬರ್ 12ರಂದು ನವಮಿಯ ದಿನ ದುರ್ಗಾಷ್ಟಮಿ, ಮಹಾನವಮಿ, ಆಯುಧ, ಆನೆ ಮತ್ತು ಕುದುರೆ ಪೂಜೆ ನೆರವೇರಲಿದೆ.
ಜಂಬೂಸವಾರಿ ಯಾವಾಗ..?
ದಸರಾ ಮಹೋತ್ಸವದ ಕೊನೆಯ ದಿನವಾದ ಅಕ್ಟೋಬರ್ 13ರಂದು ವಿಜಯ ದಶಮಿ ಪೂಜೆ ನೆರವೇರಲಿದೆ. ಸಂಜೆ 4.30ರ ನಂತರ ಜಂಬೂ ಸವಾರಿ ನಡೆಯಲಿದ್ದು, ರಾತ್ರಿ 7.30ರ ನಂತರ ಪಂಜಿನ ಕವಾಯತು ನಡೆಯಲಿದೆ.
Leave a Comment