ಗರ್ಭಪಾತ ನಿರ್ಬಂಧ:ರಷ್ಯಾದ ವಿಚಿತ್ರ ರೂಲ್ಸ್..!ಯಾಕೆ..?
ನ್ಯೂಸ್ ಆ್ಯರೊ: ಸದ್ಯಕ್ಕೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದದ ವಾತಾವರಣ ಹಲವಾರು ಬಿಗು ಪರಿಸ್ಥಿತಿಗಳಿಗೆ ಕಾರಣವಾಗಿದೆ. ಸಾಕಷ್ಟು ಮಾನ ಸಂಪನ್ಮೂಲವನ್ನ ಕಳೆದುಕೊಂಡಿರೋ ರಷ್ಯಾ ಮರಳಿ ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಪಣ ತೊಟ್ಟಿದೆ. ಈ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್..!
ಈ ಸುದ್ದಿಯನ್ನು ಸಹ ಓದಿ: ಮುನಿರತ್ನ HIV ಸಿರಿಂಜ್ ಕಹಾನಿ: ಸತ್ಯ ಯಾವುದು ಮಿಥ್ಯ ಯಾವುದು..?
ವಿಶ್ವದ ಕೆಲವು ದೇಶಗಳು ರಷ್ಯಾವನ್ನು ಬೆಂಬಲಿಸುತ್ತಿದ್ದರೆ, ಇತರರು ಉಕ್ರೇನ್‌ಗೆ ಸಹಾಯ ಮಾಡುತ್ತಿದ್ದಾರೆ. ಈಗಂತೂ ಆರು ದೇಶಗಳು ಪರಸ್ಪರ ಬಾಂಬ್‌ಗಳ ದೀಪಾವಳಿ ಆಚರಿಸುತ್ತಿವೆ.
ಇದ್ರಿಂದಾಗಿ ರಷ್ಯಾದಲ್ಲಿ ಕೆಲವು ಲಕ್ಷ ಜನರು ದೇಶವನ್ನು ತೊರೆದಿದ್ದಾರೆ. ಈ ಕಾರಣದಿಂದಾಗಿ, ಜನನ ಪ್ರಮಾಣವು ಕೆಲವು ತಿಂಗಳುಗಳಿಂದ ತೀವ್ರವಾಗಿ ಕುಸಿದಿದೆ. ಬೇರೆ ದೇಶಗಳಿಗೆ ಹೋದವರಲ್ಲಿ ಹೆಣ್ಣುಮಕ್ಕಳು, ಹೆಂಗಸರು ಹೆಚ್ಚಿರುವಂತೆಯೂ ಕಾಣುತ್ತಿದೆ. ಈ ಸರಣಿಯಲ್ಲಿ ಇತ್ತೀಚಿನ, ರಷ್ಯಾ ಅಧ್ಯಕ್ಷ ಪುಟಿನ್ ಅವರ ಕಾಮೆಂಟ್‌ಗಳು ಸಖ್ಖತ್ ಟ್ರೆಂಡ್ ಆಗ್ತಿವೆ.
ರಷ್ಯಾದಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ಪುಟಿನ್ ಅವರು ಚಿಂತಿತರಾಗಿದ್ದಾರೆ ಎಂದು ಮೇಲ್ನೋಟಕ್ಕೆ ತೋರುತ್ತಿದೆ. ಇನ್ನು ಅವರು ಕಾಫಿ ಮತ್ತು ಊಟದ ವಿರಾಮದ ಸಮಯದಲ್ಲಿಯೂ ಸಹ ಉದ್ಯೋಗಿಗಳ ಜೊತೆ ಲೈಂಗಿಕತೆಯನ್ನು ಹೊಂದಿ, ಮಕ್ಕಳನ್ನು ಹೊಂದಿ ಎಂದು ರಷ್ಯಾ ದೇಶದ ನಾಗರಿಕರಿಗೆ ಸಲಹೆ ಸಹ ನೀಡಿದ್ದಾರಂತೆ.
ಸಾಮಾನ್ಯವಾಗಿ ಜನನ ಪ್ರಮಾಣವು 2.1 ಆಗಿರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ರಷ್ಯಾದಲ್ಲಿ, ಈ ದರವು 1.5 ಕ್ಕಿಂತ ಕಡಿಮೆಯಾಗಿದೆ, ರಷ್ಯಾದ ಆರೋಗ್ಯ ಸಚಿವರು ಈ ಬಗ್ಗೆ ಪ್ರಮುಖ ಹೇಳಿಕೆ ನೀಡಿದ್ದಾರೆ. 18 ರಿಂದ 40 ವರ್ಷದೊಳಗಿನ ಮಹಿಳೆಯರು ಗರ್ಭಧರಿಸುವ ಸಾಮರ್ಥ್ಯವನ್ನು ನಿರ್ಣಯಿಸಲು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ಪುಟಿನ್ ಸರ್ಕಾರ ಒತ್ತಡ ಹೇರುತ್ತಿದ್ಯಂತೆ. ಇನ್ನು ಡಿವೋರ್ಸ್ ಪಡೆಯುವಂತಿಲ್ಲ ಪಡೆದ್ರೆ ಅದಕ್ಕೆ ದುಬಾರಿ ಶುಲ್ಕ ವಿಧಿಸಲಾಗುತ್ತಂತೆ ಹಾಗೇ ಗರ್ಭಪಾತ ಮಾಡೋದನ್ನ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದ್ಯಂತೆ.
Leave a Comment