ದೂರುಗಳ ಪಟ್ಟಿಯನ್ನು ಅಂಗಿಯ ರೀತಿ ಧರಿಸಿ ಪ್ರತಿಭಟಿಸಿದ ವ್ಯಕ್ತಿ; ಅರೆಬೆತ್ತಲೆಯಾಗಿ ಆಕ್ರೋಶ..!
ನ್ಯೂಸ್ ಆ್ಯರೋ : ಇಲ್ಲೊಬ್ಬ ವ್ಯಕ್ತಿ ಅಧಿಕಾರಿಗಳು ತನ್ನ ದೂರುಗಳಿಗೆ ಕಿವಿ ಕೊಡದಿರುವುದರಿಂದ ದೂರುಗಳ ಪಟ್ಟಿಯನ್ನು ಮೈಮೇಲೆ ಅಂಟಿಸಿಕೊಂಡು ಅರೆಬೆತ್ತಲೆಯಾಗಿ ರಸ್ತೆಯಲ್ಲಿ ತೆವಳಿಕೊಂಡು ಪ್ರತಿಭಟಿಸಿದ್ದಾನೆ. ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ಸರಕಾರವೇ ಕಾರಣ ಎಂದು ಆಕ್ರೋಶ ಹೊರಹಾಕಿರುವ ಘಟನೆ ಮಧ್ಯಪ್ರದೇಶದ ನೀಮುಚ್ ಪ್ರದೇಶದಲ್ಲಿ ನಡೆದಿದೆ.
ಮುಕೇಶ್ ಪ್ರಜಾಪತ್ ಎಂಬ ವ್ಯಕ್ತಿಯೂ ಸಾವಿರಕ್ಕೂ ಹೆಚ್ಚು ಪುಟಗಳ ದೂರನ್ನು ಅಂಗಿಯ ರೀತಿ ಧರಿಸಿ ಅರೆಬೆತ್ತಲೆಯಾಗಿ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿದ್ದಾರೆ. ಆದರೆ ಅಧಿಕಾರಿಗಳು ಈತನ ದೂರಿಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ಹೊರಹಾಕಿದರು.
ಪ್ರಜಾಪತ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದಲ್ಲಿ ಆಡಳಿತ ಹಾಗೂ ಕಾನೂನು ಸುವ್ಯಸ್ಥೆಯ ಹದಗೆಡುತ್ತಿದೆ. ಸಾಮಾನ್ಯ ಜನರು ನ್ಯಾಯಕ್ಕಾಗಿ ಪರದಾಡುವ ಪರಿಸ್ಥಿತಿ ಬಂದಿದೆ ಎಂದು ಆಡಳಿತ ಪಕ್ಷದಲ್ಲಿರುವ ಬಿಜೆಪಿ ಪಕ್ಷದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ವಿಷಯದ ಬಗ್ಗೆ ಮಾತನಾಡಿರುವ ಮುಕೇಶ್ ಪ್ರಜಾಪತ್, ನಾನು ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಡಿ ನನ್ನ ಚಪ್ಪಲಿ ಸವೆದು ಹೋಗಿದೆ. ಸಾಮಾನ್ಯ ಜನರು ನ್ಯಾಯಕ್ಕಾಗಿ ಅನೇಕ ಕಷ್ಟಗಳನ್ನ ಅನುಭವಿಸುತ್ತಿದ್ದಾರೆ. ಈ ವಿಚಾರಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ. ಈ ಕೂಡಲೇ ಮುಖ್ಯಮಂತ್ರಿಗಳಾದ ಮೋಹನ್ ಯಾದವ್ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಪ್ರಜಾಪತ್ ಆಗ್ರಹಿಸಿದ್ದಾರೆ.
Leave a Comment