ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವು; ಅಂತದ್ದು ಏನಾಯ್ತು ವ್ಲಾಗರ್ ದಂಪತಿಗೆ!!

ನ್ಯೂಸ್ ಆ್ಯರೋ: ಕೇರಳದ ತಿರುವನಂತಪುರದ ವ್ಲಾಗರ್ ದಂಪತಿಗಳು ಯೂಟ್ಯೂಬ್ನಲ್ಲಿ ವಿಡಿಯೋವನ್ನು ಹಂಚಿಕೊಂಡ ಕೆಲವೇ ಗಂಟೆಗಳ ನಂತರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಂಪತಿಯನ್ನು ಸೆಲ್ವರಾಜ್ (45) ಮತ್ತು ಪ್ರಿಯಾ (37) ಎಂದು ಗುರುತಿಸಲಾಗಿದೆ. ಪುತ್ರನ ಫೋನ್ ಕರೆಗಳಿಗೆ ದಂಪತಿ ಪ್ರತಿಕ್ರಿಯಿಸಿಲ್ಲ. ಹಾಗಾಗಿ ಮಗ ಎರ್ನಾಕುಲಂನಿಂದ ಮನೆಗೆ ಹಿಂದಿರುಗಿ ನೋಡಿದಾಗ ತಂದೆ-ತಾಯಿಯ ಶವ ಪತ್ತೆಯಾಗಿದೆ.
ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಸೆಲ್ವರಾಜ್ ಮತ್ತು ಅವರ ಪತ್ನಿ ಪ್ರಿಯಾ ತಮ್ಮ ಯೂಟ್ಯೂಬ್ ಚಾನೆಲ್ “ಸೆಲ್ಲು ಫ್ಯಾಮಿಲಿ” ಗೆ ಹೆಸರುವಾಸಿಯಾಗಿದ್ದರು. ಅವರು 18,000 ಕ್ಕೂ ಹೆಚ್ಚು ಸಬ್ಸ್ಕ್ರೈವರ್ಸ್ ಅನ್ನು ಹೊಂದಿದ್ದರು. ಯೂಟ್ಯೂಬ್ನಲ್ಲಿ ತಮ್ಮ ದೈನಂದಿನ ಜೀವನವನ್ನು ಹಂಚಿಕೊಳ್ಳುತ್ತಿದ್ದರು. ಅವರ ಕುಟುಂಬದ ವ್ಲಾಗ್‌ಗಳು, ಜೀವನಶೈಲಿ ಮತ್ತು ಸಾಂದರ್ಭಿಕ ವೈಯಕ್ತಿಕ ಮಾಹಿತಿಯನ್ನು ನೋಡುಗರೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದುವರೆಗೆ ಅವರು 1,400 ಕ್ಕೂ ಹೆಚ್ಚು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಅವರ ಕೊನೆಯದಾಗಿ ಫೋಟೋಗಳಿರುವ 55 ಸೆಕೆಂಡ್ ವಿಡಿಯೋವನ್ನು ಶುಕ್ರವಾರ ರಾತ್ರಿ ಪೋಸ್ಟ್ ಮಾಡಿದ್ದರು ಎಂದು ಪೊಲೀಸರು ತಿಳಿದ್ದಾರೆ.
ಅನುಮಾನ ಹುಟ್ಟಿಸಿದ ಪ್ರಿಯಾ ಮೃತದೇಹ:
“ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ವೈದ್ಯರು ಮಹಿಳೆಯ ದೇಹದಲ್ಲಿ ಕತ್ತು ಹಿಸುಕಿದ ಗುರುತುಗಳನ್ನು ಕಂಡುಕೊಂಡಿದ್ದಾರೆ. ಆದರೆ ಮಹಿಳೆಯನ್ನು ಕೊಲೆ ಮಾಡಲಾಗಿದೆಯೇ ಎಂಬುದನ್ನು ನಾವು ಈಗ ಖಚಿತಪಡಿಸಲು ಸಾಧ್ಯವಿಲ್ಲ. ಮತ್ತಷ್ಟು ಪರೀಕ್ಷೆಯ ಫಲಿತಾಂಶಗಳು ಬಂದ ನಂತರವೇ ಸಾವಿನ ನಿಖರವಾದ ಕಾರಣವನ್ನು ಖಚಿತಪಡಿಸಬಹುದು,” ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಿಯಾ ಅವರ ದೇಹವು ಅವರ ಪತಿಗಿಂತ ಬೇಗನೆ ಕೊಳೆತ್ತಿದೆ ಎಂದು ಪೊಲೀಸರು ವರದಿ ಮಾಡಿದ್ದಾರೆ, ಅವರು ಪತಿಗಿಂತ ಮುಂಚೆಯೇ ಸಾವನ್ನಪ್ಪಿರಬಹುದು ಎಂದು ಇದು ಸೂಚಿಸಿದೆ. “ನಾವು ಭಾನುವಾರ ಮನೆಗೆ ತಲುಪಿದಾಗ ಮಹಿಳೆಯ ದೇಹವು ಕೊಳೆಯುವ ಸ್ಥಿತಿಯಲ್ಲಿತ್ತು. ಆದರೆ ವ್ಯಕ್ತಿಯ ಶವದ ವಿಷಯದಲ್ಲಿ ಅಂತಹ ಯಾವುದೇ ಸಮಸ್ಯೆ ಇರಲಿಲ್ಲ. ಪುರುಷನು ತನ್ನ ಹೆಂಡತಿಯ ಮರಣದ ಗಂಟೆಗಳ ನಂತರ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ” ಎಂದು ಪೊಲೀಸರು ಹೇಳಿದರು.
Leave a Comment