ಅಪ್ಪನ ಹೆಗಲೇರಿ ಡೆಲಿವರಿ ಪಡೆಯಲು ಬಂದ ಪುಟ್ಟ ಕಂದಮ್ಮ; ಡೆಲಿವರಿ ಬಾಯ್ ಯ ಮನಕಲಕುವ ಕಥೆ…!

20240904 092405
Spread the love

ನ್ಯೂಸ್ ಆ್ಯರೋ : ಪುಟ್ಟ ಕಂದನ ಆರೈಕೆ, ಪಾಲನೆ, ಪೋಷಣೆಯ ಎಲ್ಲವು ಅಮ್ಮನ ಜವಾಬ್ದಾರಿಯಾಗಿರುತ್ತದೆ. ಆದರೆ ಇಲ್ಲೊಂದು 2 ವರ್ಷದ ಹೆಣ್ಣು ಮಗು ಅಪ್ಪನ ಹೆಗಲೇರಿ ಡೆಲಿವರಿ ಪಡೆಯಲು, ತಲುಪಿಸಲು ತೆರಳುತ್ತಿರುವ ಮನಕಲಕುವ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಖಾನ್ ಮಾರ್ಕೆಟ್ ಬಳಿ ಇರುವ ಸ್ಟಾರ್ ಬಕ್ಸ್ ಶಾಪ್‌ಗೆ ಆರ್ಡರ್ ಪಡೆದುಕೊಳ್ಳಲು ಬಂದ ಜೊಮೆಟೋ ಡೆಲಿವರಿ ಬಾಯ್ ಸೋನು. ಈತ ಡೆಲಿವರಿ ಆರ್ಡರ್ ಪಡೆಯಲು ಪುಟ್ಟ ಮಗುವಿನೊಂದಿಗೆ ಬಂದಿದ್ದಾನೆ.

ಹೌದು, ಈ ಪುಟ್ಟ ಕಂದಮ್ಮನಿಗೆ ಅಪ್ಪನೇ ಪ್ರಪಂಚ. ಸಿಂಗಲ್ ಪೇರೆಂಟ್ ಆಗಿರುವ ಸೋನು, ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ತನ್ನ ಜೊತೆ ಮಗಳನ್ನು ಡೆಲಿವರಿ ಪಡೆಯಲು ಕರೆದೊಯ್ಯುತ್ತಿರುವ ಬದುಕಿನ ಪಯಣದ ಕಥೆ ಎಲ್ಲರ ಮನಕಲಕುವಂತೆ ಮಾಡುತ್ತಿದೆ.

ದೆಹಲಿಯ ಖಾನ್ ಮಾರ್ಕೆಟ್ ಬಳಿ ಇರುವ ಸ್ಟಾರ್ ಬಕ್ಸ್ ಶಾಪ್‌ಗೆ ಮಗುವಿನೊಂದಿಗೆ ಡೆಲಿವರಿ ಆರ್ಡರ್ ಪಡೆಯಲು ಬಂದ ಜೊಮೆಟೋ ಡೆಲಿವರಿ ಬಾಯ್ ಸೋನು, ಶಾಪ್ ಮ್ಯಾನೇಜರ್ ದೇವೇಂದ್ರ ಮೆಹ್ರ ಅವರ ಕಣ್ಣಿಗೆ ಬಿದ್ದಿದ್ದಾನೆ. ಕುತೂಹಲದಿಂದ ಸೋನು ಬಳಿ ಈ ವಿಷಯದ ಕುರಿತು ವಿಚಾರಿಸಿದಾಗ ಸಂಕಷ್ಟದ ಬದುಕಿನ ಕಥೆ ತೆರೆದುಕೊಂಡಿತ್ತು.

ಈ ವಿಷಯ ಕೇಳಿ ಮರುಗಿದ ಮ್ಯಾನೇಜರ್, ತಕ್ಷಣವೇ ಸ್ಟಾರ್ ಬಕ್ಸ್‌ನ ಐಸ್‌ಕ್ರೀಮ್ ತಿನಿಸನ್ನು ಮಗುವಿಗೆ ಉಚಿತವಾಗಿ ನೀಡಿದ್ದಾರೆ. ಇದು ಅಪ್ಪ ಮಗುವಿನ ಮುಖದಲ್ಲಿ ನಗುವನ್ನು ತರಿಸಿದೆ.

ಆರ್ಡರ್ ಪಡೆದು ಡೆಲಿವರಿಗೆ ಬಂದ ಡೆಲಿವರಿ ಬಾಯ್ ಸೋನು ನಮ್ಮ ಶಾಪ್ ಗೆ ಭೇಟಿ ನೀಡಿದ್ದರು. ಸೋನು ಜೊತೆಗೆ 2 ವರ್ಷದ ಮಗಳು ಆಗಮಿಸಿದ್ದಳು. ಈ ಮಗಳಿಗೆ ಅಪ್ಪನೇ ಸೂಪರ್ ಹೀರೋ . ಸಿಂಗಲ್ ಪೇರೆಂಟ್ ಆಗಿರುವ ಸೋನು, ಬದುಕಿನಲ್ಲಿ ಹಲವು ಸವಾಲು ಎದುರಿಸುತ್ತಿದ್ದಾರೆ.

ಜೀವನ ನಡೆಸಲು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. 2 ವರ್ಷದ ಮಗಳನ್ನು ಕೂರಿಸಿಕೊಂಡು ಎಲ್ಲಾ ಕಡೆ ಡೆಲಿವರಿಗೆ ತೆರಳುತ್ತಾರೆ. ಕಷ್ಟ ಜೀವನದ ನಡುವೆಯೂ ಮಗಳ ಮೇಲಿನ ಪ್ರೀತಿ ಸೋನುವನ್ನು ಮತ್ತಷ್ಟು ಉತ್ಸಾಹ ಹಾಗೂ ಚೈತನ್ಯ ನೀಡುತ್ತಿದೆ. ಈ ಸಂಪಾದನೆಯಲ್ಲಿ ತನ್ನ ಮಗಳನ್ನು ಸಾಕಿ ಸಲಹುತ್ತಿದ್ದಾರೆ. ಈ ವಿಷಯ ತಿಳಿದು ನಮ್ಮ ಮನಸ್ಸು ಮರುಗಿ, ಈ ಪುಟ್ಟ ಕಂದನಿಗೆ ಸಣ್ಣ ಸಿಹಿ ತಿನಿಸು ನೀಡಿ ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸಿದ್ದೇವೆ. ಆಕೆಯ ಆ ನಗು ನಮಗೂ ಚೈತನ್ಯ ನೀಡಿದೆ. ನಾವು ಸೋನು ಹಾಗೂ ಆತನ ಮಗಳಿಗೆ ಶುಭ ಹಾರೈಸುತ್ತೇವೆ ಎಂದು ಸೋನು ಬದುಕಿನ ಪರಿಯನ್ನು ಸೋಶಿಯಲ್ ಮೀಡಿಯಾದಲ್ಲಿ ದೇವೇಂದ್ರ ಮೆಹ್ರ ಬರೆದುಕೊಂಡಿದ್ದಾರೆ.

20240904 1055246657649900987096910


ಸೋನುವಿನ ಕರ್ತವ್ಯ ನಿಷ್ಠೆ, ಬದ್ಧತೆ ಜೊತೆಗೆ ಮಗಳನ್ನು ಸಾಕುವ ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪುಟ್ಟ ಕಂದಮ್ಮನ ನಗುವಿನಲ್ಲಿ ಜೀವನ ಸಾಗಿಸುತ್ತಿರುವ ಆ ತಂದೆಗೆ ನಮ್ಮದೊಂದು ಸಲಾಮ್ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!