ಮಾರ್ಟಿನ್ ಸಿನಿಮಾದ “ಜೀವ ನೀನೇ” ಸಾಂಗ್ ರಿಲೀಸ್ ; ಆಕ್ಷನ್ ಪ್ರಿನ್ಸ್ ಅಭಿಮಾನಿಗಳು ಫುಲ್ ಖುಷ್
ನ್ಯೂಸ್ ಆ್ಯರೋ : ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ರಿಲೀಸ್ ಆಗುತ್ತಿದೆ. ಇದೀಗ ಸಿನಿಮಾದ “ಜೀವ ನೀನೇ” ಸಾಂಗ್ ರಿಲೀಸ್ ಆಗಿದ್ದು, ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೇ ವ್ಯೂಸ್ ಪಡೆದಿದೆ.
ಮಾರ್ಟಿನ್ ಸಿನಿಮಾ ಟ್ರೇಲರ್ ಭರ್ಜರಿ ಆಯಕ್ಷನ್ ಸಿನಿಮಾದ ಸುಳಿವು ನೀಡುತ್ತಿದೆ. ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ಕೆಮಿಸ್ಟ್ರಿಯ ‘ಜೀವ ನೀನೆ..’ ಎಂಬ ರೊಮ್ಯಾಂಟಿಕ್ ಹಾಡನ್ನು ರಿಲೀಸ್ ಮಾಡಲಾಗಿದೆ.
ಈ ಸಿನಿಮಾದ ಕಥೆಯನ್ನು ಅರ್ಜುನ್ ಸರ್ಜಾ ಬರೆದಿದ್ದು, ಎ ಪಿ ಅರ್ಜುನ್ ಚಿತ್ರ ನಿರ್ದೇಶಸಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಅನ್ವೇಶಿ ಜೈನ್, ಸುಕೃತಾ ವಾಗ್ಲೆ , ಅಚ್ಯುತ್ ಕುಮಾರ್ ಮತ್ತು ನಿಕಿತಿನ್ ಧೀರ್ ನಟಿಸಿದ್ದಾರೆ
ಈ ಸಿನಿಮಾದ ಹಾಡುಗಳು ಪಂಚಭಾಷೆಗಳಲ್ಲಿ ರಿಲೀಸ್ ಆಗಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಬಗ್ಗೆ ಸೂಚನೆ ನೀಡಿದೆ. ಇದೀಗ ‘ಜೀವ ನೀನೇ’ ಹಾಡಿಗೆ ಸಕ್ಕತ್ ರೆಸ್ಪಾನ್ಸ್ ಸಿಕ್ಕಿದ್ದು, ಫ್ಯಾನ್ಸ್ ‘ ಮಾರ್ಟಿನ್’ ಸಿನಿಮಾ ರಿಲೀಸ್ ಗೆ ಮುಂದೆ ನೋಡುತ್ತಿದ್ದಾರೆ
Leave a Comment